ಹೌದು ಪ್ರತಿದಿನ ಬಾಳೆಹಣ್ಣು ಸೇವಿಸುವುದರಿಂದ ಕಣ್ಣಿನ ಸಂಬಧಿತ ರೋಗಗಳಿಂದ ದೂರ ಇರಬಹುದು ಎಂದು ಸಂಶೋಧನೆಯೊಂದು ತಿಳಿಸಿದೆ. ಬಾಳೆಹಣ್ಣಿನಲ್ಲಿರುವ ಕ್ಯಾಟೋರಿನಾಯ್ಡ್ ಎಂಬ ದ್ರವ್ಯ ಕಣ್ಣಿನ ಆರೋಗ್ಯಕ್ಕೆ ಉತ್ತಮವಾಗಿದೆ. ಈ ದ್ರವ್ಯ ಹಣ್ಣು ಮತ್ತು ತರಕಾರಿಗಳ ಬಣ್ಣ ಬದಲಾವಣೆಗೆ ಸಹಾಯ ಮಾಡುತ್ತದೆ.

ಹಾಗಾಗಿ ಬಾಳೆಹಣ್ಣು ಸೇವನೆ ಮಾಡುವುದರಿಂದ ಈ ದ್ರವ್ಯ ನಮ್ಮ ಕಣ್ಣುಗಳನ್ನು ಆರೋಗ್ಯವಾಗಿಡುತ್ತದೆ. ಇನ್ನೂ ಬಾಳೆಹಣ್ಣಿನಲ್ಲಿ ವಿಟಮಿನ್ ಎ ಅಧಿಕವಾಗಿದ್ದು, ಇದು ನಮ್ಮ ದೃಷ್ಟಿ ದೋಷಕ್ಕೆ ಉತ್ತಮವಾಗಿದೆ. ಅಷ್ಟೇ ಅಲ್ಲದೆ ಮುಂದೆ ತಿಳಿಸಿರುವ ಹಲವು ಸಮಸ್ಯೆಗಳ ನಿವಾರಣೆಗೆ ಬಾಳೆಹಣ್ಣು ಸೂಕ್ತ ಮನೆ ಮದ್ದು ಅಂತಲೇ ಹೇಳಲಾಗುತ್ತದೆ.

ಮಲಬದ್ಧತೆ
ನಾರಿನ ಅಂಶ ಯತೇಚ್ಛ. ಕೃತಕ ವಿರೇಚಕಗಳಿಲ್ಲದೆ, ಬಾಳೆಹಣ್ಣು ಮಲಬದ್ಧತೆಯ ಸಮಸ್ಯೆಯನ್ನು ಹೋಗಲಾಡಿಸಲು ಅತ್ಯಂತ ಸಹಾಯಕಾರಿ.

ರಕ್ತಹೀನತೆ
ಬಾಳೆಹಣ್ಣಿನಲ್ಲಿ ಕಬ್ಬಿಣದ ಅಂಶ ಸಮೃದ್ಧವಾಗಿರುವುದರಿಂದ ದೇಹದಲ್ಲಿ ಕೆಂಪು ರಕ್ತಕಣಗಳ ಉತ್ಪಾದನೆಯನ್ನು ಪ್ರಚೋದಿಸಿ, ರಕ್ತಹೀನತೆಯನ್ನು ನೀಗಿಸುತ್ತದೆ.

* ರಕ್ತದೊತ್ತಡ:
ಬಾಳೆಹಣ್ಣಿನಲ್ಲಿ ಪೊಟಾಷಿಯಮ್, ಲವಣ ಸಮೃದ್ಧಿಯಾಗಿದ್ದು, ಉಪ್ಪಿನ ಅಂಶ ತೀರಾ ಕಡಿಮೆ. ಇದರಿಂದ ಬಾಳೆಹಣ್ಣು ರಕ್ತದೊತ್ತಡವನ್ನು ತಡೆಗಟ್ಟಲು ಸೂಕ್ತ ಅಸ್ತ್ರ. “ಅಮೆರಿಕದ ಆಹಾರ ಮತ್ತು ಔಷಧಿಗಳ ಆಡಳಿತ ಮಂಡಲಿ” ಕೂಡ ಇತ್ತೀಚೆಗೆ ಅಧಿಕೃತವಾಗಿ ಜಾಹೀರುಗೊಳಿಸಲು, ಅನುಮತಿ ನೀಡಿದೆ.

ಅಲ್ಸರ್ 
ಬಾಳೆಹಣ್ಣು ಆಮ್ಲೀಯತೆಯನ್ನು ತಗ್ಗಿಸುತ್ತದೆ. ಜಠರದ ಪೊರೆಯನ್ನು ಮರುಲೇಪಿಸುವ ಮೂಲಕ, ಅಲ್ಸರ್ ತೊಂದರೆಯನ್ನು ಶಮನಗೊಳಿಸುತ್ತದೆ.

ಉಷ್ಣ ನಿಯಂತ್ರಕ
ಬಾಳೆಹಣ್ಣು ದೇಹಕ್ಕೆ ತಂಪು ಎಂಬ ನಂಬಿಕೆ ವಿಶ್ವದ ಬಹುತೇಕ ಜನಾಂಗಗಳಲ್ಲಿ ಇದೆ. ಥಾಯ್ ಲ್ಯಾಂಡ್ ನಲ್ಲಿ ಗರ್ಭಿಣಿ ಸ್ತ್ರೀಯರು ಬಾಳೆಹಣ್ಣಿನ ಸೇವನೆಯನ್ನು ಮಾಡುವುದು ಸಾಮಾನ್ಯ. ಇದರಿಂದ ಅವರ ದೇಹ ಮತ್ತು ಮನಸ್ಸುಗಳೆರಡರ ಉಷ್ಣತೆ ಕಡಿಮೆಯಾಗಿ, ಹುಟ್ಟಿದ ಮಗುವಿನ ದೇಹಮತ್ತು-ಮನಸ್ಸುಗಳು ಶಾಂತವಾಗಿರಲೆಂಬ ನಂಬಿಕೆ ಇದೆ.

*

LEAVE A REPLY

Please enter your comment!
Please enter your name here