ಬಹಳಷ್ಟು ಜನ ಕರ್ಪುರವನ್ನು ಪೂಜೆಯ ಬಳಕೆಗೆ ಎಂಬುದನ್ನು ತಿಳಿದಿರುತ್ತಾರೆ, ಆದ್ರೆ ಬರಿ ಪೂಜೆಗೆ ಸೀಮಿತವಾಗದೆ ಹಲವು ಮನೆಮದ್ದುಗಳಿಗೆ ಹಾಗು ದೈಹಿಕ ಸಮಸ್ಯೆಗಳ ನಿವಾರಣೆಗೆ ಕರ್ಪುರ ಹೆಚ್ಚು ಸಹಕಾರಿಯಾಗಿದೆ. ಕರ್ಪುರವನ್ನು ಸೌಂದರ್ಯ ವೃದ್ಧಿಗೆ ಹೇಗೆ ಬಳಸಬೇಕು ಅನ್ನೋದನ್ನ ಒಮ್ಮೆ ತಿಳಿಯೋಣ ಬನ್ನಿ.

ಸೌಂದರ್ಯಕ್ಕೆ ಅಡ್ಡಿಯಾಗುವಂತ ಕಪ್ಪು ಕಲೆ ಮೊಡವೆಗಳನ್ನು ನಿವಾರಿಸುವಂತ ಗುಣವನ್ನು ಕರ್ಪುರ ಹೊಂದಿದೆ, ಅಷ್ಟೇ ಅಲ್ಲದೆ ಚರ್ಮದ ಕಾಂತಿಯನ್ನು ಹೆಚ್ಚುವ ಮಹತ್ವ ಇದರಲ್ಲಿದೆ
ಚರ್ಮದ ಸಮಸ್ಯೆ ನಿವಾರಣೆಗೆ ಹಾಗು ತ್ವಚೆಗೆ ಸಂಬಂಧಿಸಿದ ಸಮಸ್ಯೆ ನಿವಾರಣೆ ಮಾಡಲು ಕರ್ಪೂರ ಉತ್ತಮ. ತೆಂಗಿನ ಎಣ್ಣೆ ಜೊತೆ ಕರ್ಪೂರದ ಪುಡಿ ಮಿಕ್ಸ್ ಮಾಡಿ ತುರಿಕೆ, ಕಜ್ಜಿ ಮೇಲೆ ಹಚ್ಚಿದರೆ ಅವು ನಿವಾರಣೆಯಾಗುತ್ತವೆ.

ಮೊಡವೆ ನಿವಾರಣೆಗೆ ಕರ್ಪುರ ಬಳಕೆ: ತೆಂಗಿನ ಎಣ್ಣೆ ಜೊತೆ ಬೆರೆಸಿದ ಕರ್ಪೂರವನ್ನು ಮೊಡವೆ ಮೇಲೆ ಹಚ್ಚಿದರೆ ಅದು ಬೇಗ ನಿವಾರಣೆಯಾಗುತ್ತದೆ. ಜೊತೆಗೆ ಮುಖ ಸುಂದರವಾಗಿ ಕಾಣುತ್ತದೆ.

ಕೂದಲಿನ ಆರೋಗ್ಯಕ್ಕೆ: ಸಾಸಿವೆ ಎಣ್ಣೆ ಜೊತೆ ಬೆರೆಸಿದ ಕರ್ಪೂರದ ಎಣ್ಣೆಯನ್ನು ಕೂದಲಿಗೆ ಹಚ್ಚಿ ಮಸಾಜ್ ಮಾಡಿದರೆ ಹೇನು, ಕಜ್ಜಿ ಸಮಸ್ಯೆ ನಿವಾರಣೆಯಾಗಿ ಕೂದಲು ಆರೋಗ್ಯಯುತವಾಗುತ್ತದೆ. ಅಷ್ಟೇ ಅಲ್ಲದೆ ಕರ್ಪೂರದ ಎಣ್ಣೆಯನ್ನು ವಾರದಲ್ಲಿ ಎರಡು ಬಾರಿ ತಲೆಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ, ಸ್ನಾನ ಮಾಡಿದರೆ ಕೂದಲು ಉದರುವ ಸಮಸ್ಯೆ ನಿವಾರಣೆಯಾಗುವುದು.

ಸುಟ್ಟ ಗಾಯದ ಕಲೆ ನಿವಾರಣೆಗೆ ಕರ್ಪುರವನ್ನು ಬಳಸಿ ಪರಿಹಾರ ಕಂಡುಕೊಳ್ಳಬಹುದು ದೇಹದಲ್ಲಿ ಸುತ್ತ ಗಾಯ ಅಥವಾ ಗಾಯವಾದ ಗುರುತಿದ್ದರೆ ಕರ್ಪೂರವನ್ನು ನೀರಿನಲ್ಲಿ ಮಿಕ್ಸ್ ಮಾಡಿ ಎಫೆಕ್ಟ್ ಆದ ಜಾಗಕ್ಕೆ ಹಚ್ಚಿ.ಇದನ್ನು ನಿಯಮಿತವಾಗಿ ಮಾಡುತ್ತಿದ್ದರೆ ಕಲೆ ನಿವಾರಣೆ.

LEAVE A REPLY

Please enter your comment!
Please enter your name here