ಇತ್ತೀಚಿನ ದಿನಗಳಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆ ಅನ್ನೋದು ಹೆಚ್ಚಾಗಿ ಕಾಡುತ್ತಿದೆ, ಇದಕ್ಕೆ ಹಲವು ಕಾರಣವಿದೆ ಇಂತಹದ್ದೇ ನಿರ್ದಿಷ್ಟ ಕರಣ ಅನ್ನೋದನ್ನ ಹೇಳಲಾಗದು. ಸರಿಯಾದ ಸಮಯಕ್ಕೆ ಊಟ ಮಾಡದೇ ಇದ್ರೆ ಹಾಗು ಹೆಚ್ಚಾಗಿ ಖಾರ ಸೇವನೆ ಮಾಡಿದ್ರೆ ಹಾಗು ಹೊರಗಡೆ ತಿನ್ನುವುದು, ಕುರುಕಲು ತಿಂಡಿ ತಿನ್ನುವುದು ಇತ್ಯಾದಿ ಕಾರಣಗಳಿಂದ ಗ್ಯಾಸ್ಟ್ರಿಕ್ ಸಮಸ್ಯೆ ಕಾಡುತ್ತದೆ.

ಮನೆಯಲ್ಲಿ ಅಡುಗೆಗೆ ಬಳಸುವಂತ ಪದಾರ್ಥಗಳನ್ನು ಬಳಸಿ ಗ್ಯಾಸ್ಟ್ರಿಕ್ ನಿಯಂತ್ರಿಸಿಕೊಳ್ಳಬಹುದು.
ರಾತ್ರಿ ಕೊತ್ತಂಬರಿ ಮತ್ತು ಮೆಂತ್ಯವನ್ನು ನೀರಲ್ಲಿ ನೆನೆಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಎದೆಯುರಿ, ಹುಳಿ ತೇಗು, ಅತ್ಯಾಮ್ಲತೆ ಶಮನವಾಗುತ್ತದೆ.

ಸೇವನೆ ಮಾಡುವಂತ ಆಹಾರ ಸರಿಯಾಗಿ ಜೀರ್ಣವಾಗದೇ ಹೊಟ್ಟೆಯುಬ್ಬರ ಇದ್ದಲ್ಲಿ ಜೀರಿಗೆ, ಒಣದ್ರಾಕ್ಷಿ, ಓಮದ ಕಾಳು ಜಜ್ಜಿ ಸೇವಿಸಿದರೆ ಉತ್ತಮ ಫಲಿತಾಂಶವಿದೆ. ಹೇರಳವಾಗಿ ನೀರು ಮಜ್ಜಿಗೆ ಕುಡಿಯಿರಿ ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೆಯದು.

ಮಜ್ಜಿಗೆಗೆ ಹಿಂಗು, ಕರಿಬೇವು ಸೇರಿಸಿ ಕುಡಿದರೆ ಹೊಟ್ಟೆಯ ನುಲಿತ ಕಡಿಮೆಯಾಗುತ್ತದೆ ಹಾಗು ನೆಲ್ಲಿಕಾಯಿ ಪುಡಿ ಮಜ್ಜಿಗೆಯಲ್ಲಿ ಸೇರಿಸಿ ಕುಡಿಯುವುದು ಇನ್ನು ಒಳ್ಳೆಯದು ಅನ್ನೋದನ್ನ ಅರೋಗ್ಯ ತಜ್ಞರ ಮಾತು.

LEAVE A REPLY

Please enter your comment!
Please enter your name here