ಇತ್ತೀಚಿನ ದಿನಗಳಲ್ಲಿ ಸ್ನಾನಕ್ಕೆ ಹಲವು ತಂತ್ರಜ್ಞಾನಗಳು ಸ್ನಾನದ ಕೋಣೆಯಲ್ಲಿ ಹಾಕಿದ್ದ ಗ್ಯಾಸ್ ಗೀಸರ್ ನಿಂದ ತಾಯಿ ಮತ್ತು ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗ್ಯಾಸ್ ಗೀಸರ್ ನಿಂದ ಹೊರಗೆ ಬಂದ ಕಾರ್ಬನ್ ಮಾನಾಕ್ಸೈಡ ಸಾವು ನೋವುಗಳು ಸಂಭವಿಸಿದೆ ಈಗಾಗಲೇ ಈ ರೀತಿಯ ಘಟನೆಗಳು ಬಹಳಷ್ಟು ನಡೆದಿದ್ದು ಇದರಿಂದ ಮುಂದೆ ಅನಾಹುತಗಳು ಆಗದೆ ಇರಲು ಈ ಕೆಳಗಿನ ಉಪಯೋಗಗಳನ್ನು ಪಡೆದುಕೊಳ್ಳಿ.

ಈ ರೀತಿಯ ಘಟನೆಗಳಿಂದ ದೂರವಿರಲು ಮತ್ತು ಗ್ಯಾಸ್ ಗೀಸರ್ ಹೇಗೆ ಅಳವಡಿಸಿಕೊಳ್ಳಬೇಕು ಅನ್ನೋದರ ಬಗ್ಗೆ ಕೆಲವೊಂದು ಸಲಹೆಗಳು ಇಲ್ಲಿವೆ

ಆಮ್ಲಜನಕ ಚೆನ್ನಾಗಿ ಹರಿದಾಡುವ ರೂಮಿನಲ್ಲಿ ಮಾತ್ರ ಗ್ಯಾಸ್ ಗೀಜರ್ ಅಳವಡಿಸಬೇಕು.
ಸ್ನಾನದ ಮನೆಯಲ್ಲಿ ಕಿಟಕಿಗಳು ಇರುವಂತೆ, ಹಾಗೂ ಆ ಕಿಟಕಿಯಲ್ಲಿ ಒಳಗಿನ ಗಾಳಿ ಹೊರಗೆ ಮತ್ತು ಹೊರಗಿನ ಗಾಳಿ ಒಳಗೆ ಬರುವಂತೆ ಎರಡೂ ದಿಕ್ಕುಗಳಲ್ಲೂ ಕಿಟಕಿ ಅಥವಾ ವೆಂಟಿಲೇಟರ್ ಇರುವಂತೆ ನೋಡಿಕೊಳ್ಳಿ.

ಕಿಟಕಿಗಳು ಇಲ್ಲದಿದ್ದರೆ ಗ್ಯಾಸ್ ಗೀಜರ್ನಿಂದ ಬಿಸಿ ನೀರನ್ನು ಮೊದಲೇತುಂಬಿಸಿ ಇಟ್ಟುಕೊಂಡು ಗ್ಯಾಸ್ ಆಫ್ ಮಾಡಿದನಂತರವಷ್ಟೆ ಸ್ನಾನಕ್ಕೆ ಹೋಗುವುದು ಉತ್ತಮ. ಗ್ಯಾಸ್ ಗೀಜರ್ನಿಂದ ನೀರು ತುಂಬಿಸುವಾಗಲೂ ಸ್ನಾನ ಗೃಹದ ಬಾಗಿಲು ತೆರೆದಿರಲಿ.

ಗ್ಯಾಸ್ ಆಫ್ ಮಾಡಿದ ಕೆಲವುನಿಮಿಷಗಳ ನಂತರ ಸ್ನಾನಕ್ಕೆ ಹೋಗುವುದು ಒಳ್ಳೆಯದು. ಮಕ್ಕಳನ್ನು ಸ್ನಾನ ಮಾಡಿಸುವಾಗ ಸ್ನಾನ ಗೃಹದ ಬಾಗಿಲು ಅರ್ಧ ತೆರೆದು ಗಾಳಿ ಆಡುವಂತೆ ನೋಡಿಕೊಳ್ಳಿ.

ಗ್ಯಾಸ್ ನಲ್ಲಿ ಆಮ್ಲಜನಕ ಸರಬರಾಜು ಕಡಿಮೆ ಆದಾಗ ಅದು ಅರ್ಧದಷ್ಟು ಮಾತ್ರ ಉರಿಯುತ್ತಿರುತ್ತದೆ. ಅದು ಮುನ್ನೆಚ್ಚರಿಕೆ. ಎಚ್ಚರಿಕೆ ತೆಗೆದುಕೊಳ್ಳುವ ಮೊದಲೇ ಅನಾಹುತ ಸಂಭವಿಸಿಬಿಡುವುದರಿಂದ ಎಷ್ಟು ಬೇಗ ಸ್ನಾನ ಗೃಹದಿಂದ ಹೊರಗೆ ಬರುತ್ತೀರೋ ಅಷ್ಟು ಉತ್ತಮ.

ಗ್ಯಾಸ್ ಗೀಜರ್ನಿಂದ ಹೊರಸೂಸುವ ಕಾರ್ಬನ್ ಮಾನಾಕ್ಸೈಡ್ ಮೊದಲು ನೆಲ ಮಟ್ಟದಿಂದ ಸ್ನಾನದ ಮನೆಯಲ್ಲಿ ಶೇಖರಣೆ ಗೊಳ್ಳುತ್ತಾ ಹೋಗುತ್ತದೆ. ಇದರಿಂದ ಕುಳಿತು ಸ್ನಾನ ಮಾಡುವವರ ಮೂಗಿಗೆ ತಕ್ಷಣ ಸೋಕಿ ಬೇಗ ಸಾವು ಸಂಭವಿಸುತ್ತದೆ.ನಿಂತು ಸ್ನಾನ ಮಾಡುವಾಗ 3 ರಿಂದ 4 ನಿಮಿಷದೊಳಗೆ ಸಾವು ಸಂಭವಿಸುತ್ತದೆ. ಅಷ್ಟರಲ್ಲಿ ಸ್ನಾನ ಮುಗಿದು ಬಾಗಿಲು ತೆರೆದರೆ ಅವರು ಅದೃಷ್ಟವಂತರು.

LEAVE A REPLY

Please enter your comment!
Please enter your name here