ದೇಹಕ್ಕೆ ಉತ್ತಮ ಪೋಷಕಾಂಶಗಳು ದೊರೆಯಲು ಆಹಾರ ಸೇವನೆ ಒಳ್ಳೆಯ ರೀತಿಯಲ್ಲಿರಬೇಕಾಗುತ್ತದೆ, ನಾವು ಸೇವಿಸುವಂತ ಆಹಾರ ನಮ್ಮ ದೇಹದ ಅರೋಗ್ಯ ವೃದ್ಧಿಗೆ ಪೂರಕವಾಗಿದೆ. ಮೀನು ಸೇವಾಮೆ ಮಾಡುವುದರಿಂದ ದೇಹದ ಅರೋಗ್ಯ ಹೇಗಿರುತ್ತದೆ ಅನ್ನೋದನ್ನ ಒಮ್ಮೆ ಗಮನಿಸಿ.

ಮೀನು ಅಂದ್ರೆ ಕೆಲವರಿ ತುಂಬಾನೇ ಇಷ್ಟ ಇನ್ನು ಕೆಲವರಿಗೆ ಇಷ್ಟ ಆಗದೆ ಇರಬಹುದು, ಆದ್ರೆ ಇದರಲ್ಲಿ ಯಾವೆಲ್ಲ ಉಪಯೋಗವಿದೆ ಅನ್ನೋದನ್ನ ತಿಳಿಯಿರಿ. ಮೀನಿನಲ್ಲಿ ಒಮೇಗಾ-3 ಅಂಶ ಇರೋದ್ರಿಂದ ಕನ್ನೈನ ಅರೋಗ್ಯ ಹಾಗೂ ದೇಹದ ಆರೋಗ್ಯದ ವೃದ್ಧಿಗೆ ಸಹಕಾರಿಯಾಗಿದೆ . ಅಷ್ಟೇ ಅಲ್ಲದೆ ಉರಿಯೂತ ಸಮಸ್ಯೆಯನ್ನು ಕಡಿಮೆ ಮಾಡುವ ಗುಣವನ್ನು ಹೊಂದಿದೆ.

ಆಹಾರವನ್ನು ಸೇವನೆ ಮಾಡುವಾಗ ಮೀನು ಸೇವನೆ ಮಾಡುವುದರಿಂದ ಹೃದಾಯ್ದ ಅರೋಗ್ಯ ಕಣ್ಣಿನ ದೋಷಗಳು ನಿವಾರಣೆಯಾಗಬಲ್ಲದು, ಹಲವು ಬಗೆಯ ಮಿನುಗಳಿವೆ ಅವುಗಳಲ್ಲಿ ಈ ಬಂಗುಡೆ ಮೀನು ಕೂಡ ಹೆಚ್ಚು ಒಳ್ಳೆಯದು ಅನ್ನೋದನ್ನ ತಿಳಿಯಲಾಗಿದೆ ಇದನ್ನು ಸೇವನೆ ಮಾಡುವುದರಿಂದ ದೇಹದ ಚರ್ಮ ಕೂದಲಿನ ಅರೋಗ್ಯ ಕಣ್ಣಿನ ಸಮಸ್ಯೆಗಳಿಗೆ ಒಳ್ಳೆಯದು.

ಮೆದುಳಿನ ಕ್ರಿಯೆಗಳು ಸರಾಗವಾಗಿ ಸಾಗಲು ಮೀನು ಒಳ್ಳೆಯ ಆಹಾರ. ದಿನಾಲೂ ಮೀನು ಸೇವಿಸಿದರೆ ಅದರಿಂದ ಅಲ್ಜೆಮರ್ ಕಾಯಿಲೆಯ ಅಪಾಯವನ್ನೂ ತಗ್ಗಿಸಬಹುದು.ಮೀನು ಮತ್ತು ಮೀನಿನ ಎಣ್ಣೆಯಿಂದ ಖಿನ್ನತೆ ದೂರವಾಗುತ್ತದೆ. ಇದರಿಂದ ಮಾನಸಿಕ ಆರೋಗ್ಯವು ಉತ್ತಮವಾಗುತ್ತದೆ.

ಮೀನಿನ ಎಣ್ಣೆಯಲ್ಲಿರುವ ವಿಟಮಿನ್ ಬಿ12 ಮಹಿಳೆಯರ ಋತುಸ್ರಾವದ ಸಮಸ್ಯೆಯನ್ನು ನಿವಾರಿಸಬಲ್ಲದು. ವಿಟಮಿನ್ ಡಿ ಹೆಚ್ಚಿರುವ ಮೀನು ಮೂಳೆಗಳ ಆರೋಗ್ಯ ಮತ್ತು ಬೆಳವಣಿಗೆಗೆ ಕ್ಯಾಲ್ಸಿಯಂ ಪೂರೈಸುತ್ತದೆ. ಇದರಲ್ಲಿರುವಂತ ಒಮೆಗಾ-3 ಕೊಬ್ಬಿನಾಮ್ಲ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಹಾಗೂ ದೇಹವನ್ನು ಬಲಿಷ್ಠವಾಗಿ ಬೆಳೆಯಲು ಸಹಕಾರಿ.

LEAVE A REPLY

Please enter your comment!
Please enter your name here