ಈ ಆಧುನಿಕ ಜಗತ್ತಿನಲ್ಲಿ ಬೆರಳುಗಳಿಗೆ ಉಂಗುರವನ್ನು ತೊಡುವ ಅಭ್ಯಾಸ ಬಹಳಷ್ಟು ಮಂದಿ ಜನಕ್ಕೆ ಇರುತ್ತದೆ, ಯಾವ ಬೆರಳಿಗೆ ಉಂಗುರವನ್ನು ಧರಿಸುವುದರಿಂದ ಏನು ಅರ್ಥವನ್ನು ನೀಡುತ್ತದೆ ಅನ್ನೋದರ ಬಗ್ಗೆ ನಿಮಗೆ ತಿಳಿಸಲು ಬಯಸುತ್ತೇವೆ. ಕೆಲವು ಜ್ಯೋತಿಷ್ಯ ಶಾಸ್ತ್ರಗಳು ಹೇಳುವ ಪ್ರಕಾರ ಬೆರಳಿಗೆ ಉಂಗುರವನ್ನು ಧರಿಸುವ ಪದ್ಧತಿ ಕೆಲವರಲ್ಲಿದೆ .ಅದೇನೇ ಇರಲಿ ಯಾವ ಬೆರಳಿಗೆ ಯಾವ ಉಂಗುರವನ್ನು ಧರಿಸುತ್ತಾರೆ ಅನ್ನೋದನ್ನ ಮುಂದೆ ನೋಡಿ.

ಕಿರು ಬೆರಳು ಸ್ಟೈಲಿಷ್ ಉಂಗುರವನ್ನು ಕಿರು ಬೆರಳಿಗೆ ಧರಿಸುತ್ತಾರೆ. ಜ್ಯೋತಿಷ್ಯಶಾಸ್ತ್ರ ಮತ್ತು ಹಸ್ತಸಮುದ್ರಿಕದ ಪ್ರಕಾರ ಕಿರು ಬೆರಳಿಗೆ ಉಂಗುರ ಧರಿಸುವುದರಿಂದ ಬುದ್ಧಿಶಕ್ತಿ ಹೆಚ್ಚಿದ್ದು, ಜೀವನದಲ್ಲಿ ಛಲ ಹೊಂದಿರುತ್ತಾರೆ ಎಂಬುದಾಗಿ ಹೇಳಲಾಗುತ್ತದೆ.

ರಿಂಗ್ ಬೆರಳು ಅಂದರೆ ಈ ಬೆರಳಿನಲ್ಲಿ ಉಂಗುರ ತೊಟ್ಟರೆ ಮದುವೆಯಾಗಿದೆ ಎಂದರ್ಥ. ಚಂದಿರ, ಸೃಜನಶೀಲತೆ, ಸೌಂದರ್ಯ, ಪ್ರೀತಿ ಹಾಗೂ ಪ್ರೇಮವನ್ನು ಪ್ರತಿನಿಧಿಸುವ ಬೆರಳಿದು ಹಾಗಾಗಿ ರಿಂಗ್ ಬೆರಳಿಗೆ ಉಂಗುರವನ್ನು ಧರಿಸುತ್ತಾರೆ.

ಮಧ್ಯದ ಬೆರಳಿಗೆ ಉಂಗುರವನ್ನು ತೊಡುವುದರಿಂದ ಏನು ಪ್ರಯೋಜನವಿದೆ, ಜೀವನದ ಸಮತೋಲನ ಮತ್ತು ಜವಾಬ್ದಾರಿಯನ್ನು ಪ್ರತಿನಿಧಿಸುವ ಬೆರಳಿದು. ಈ ಬೆರಳು ಶನಿ ಗ್ರಹಕೂಟದೊಂದಿಗೆ ಸಂಬಂಧ ಹೊಂದಿದ್ದು, ಕಬ್ಬಿಣ ಹಾಗೂ ತಗಡಿನ ಉಂಗುರ ಧರಿಸಿದರೆ ಶ್ರೇಷ್ಠ ಎಂಬುದಾಗಿ ಹೇಳಲಾಗುತ್ತದೆ.

ತೋರು ಬೆರಳಿಗೆ ಉಂಗುರವನ್ನು ತೊಡುವುದರಿಂದ ನಾಯಕತ್ವ, ಶಕ್ತ ಅಧಿಕಾರವನ್ನು ಪ್ರತಿನಿಧಿಸುತ್ತದೆ ಅನ್ನೋದನ್ನ ಹೇಳಲಾಗುತ್ತದೆ. ಅಷ್ಟೇ ಅಲ್ದೆ ಹೆಬ್ಬೆರಳಿಗೆ ಉಂಗುರವನ್ನು ತೊಡುವುದರಿಂದ ಪ್ರಭಾವಶಾಲಿ ವ್ಯಕ್ತಿತ್ವ ಹೊಂದಿರುತ್ತಾರೆ ಅನ್ನೋದನ್ನ ಹೇಳಲಾಗುತ್ತದೆ.

LEAVE A REPLY

Please enter your comment!
Please enter your name here