ಪ್ರತಿ ಮನುಷ್ಯ ಕೆಲಸ ಮಾಡುವಾಗ ದೇಹದ ಒಂದಲ್ಲ ಒಂದು ಅಂಗಾಂಗಗಳನ್ನು ನಟಿಗೆ ಮುರಿಯುವ ಅಭ್ಯಾಸ ಮಾಡಿಕೊಂಡಿರುತ್ತಾನೆ, ಆದ್ರೆ ಇದರಿಂದ ಏನಾಗುತ್ತೆ ಅನ್ನೋದನ್ನ ಮುಂದೆ ಗಮನಿಸಿ. ಕೈ ಕುತ್ತಿಗೆ ಇವುಗಳನ್ನು ನಟಿಗೆ ಮುರಿಯುವಾಗ ಲಟ ಲಟ ಅಂತ ಸೌಂಡ್ ಆಗುತ್ತದೆ ಇದರಿಂದ ಮನುಷ್ಯ ರಿಲೀಫ್ ಆಗುತ್ತಾನೆ ಅನ್ನೋ ಫೀಲ್ ಆಗುತ್ತದೆ.

ಕೈ ಬೆರಳುಗಳನ್ನು ಹಾಗೂ ಕುತ್ತಿಗೆಯನ್ನು ನಟಿಗೆ ಮುರಿಯುವಾಗ ಚಟ್ ಅಂತ ಸೌಂಡ್ ಆಗೋದು ಯಾಕೆ ಗೊತ್ತಾ?
ಕೈ ಬೆರಳುಗಳ ಸಂಧಿಯಲ್ಲಿ ‘ಪಾಕೆಟ್ ಆಫ್ ಗ್ಯಾಸ್’ ಜಾಗದಲ್ಲಿ ಗಾಳಿ ತುಂಬಿರುತ್ತದೆ. ನಟಿಗೆ ಮುರಿದಾಕ್ಷಣ ಲಟ ಲಟ ಎಂಬ ಸದ್ದು ಹೊರಡಿಸುತ್ತದೆ ಇದೆ. ಕೈ ಹಾಗೂ ಕಾಲು ಬೆರಳುಗಳ ನಟಿಗೆ ತೆಗೆದರೆ ಏನೂ ತೊಂದರೆಯಿಲ್ಲ.

ಕೈ ಕಾಲುಗಳ ನಟಿಗೆ ಮುರಿಯುವುದರಿಂದ ಏನು ಆಗೋದಿಲ್ಲ ಆದ್ರೆ ಕುತ್ತಿಗೆ ಭಾಗದಲ್ಲಿ ಮಾಡುವುದು ಸರಿಯಲ್ಲ. ಏಕೆಂದರೆ ನಟಿಗೆ ತೆಗೆದ ನಂತರ ಬೆನ್ನು ಭಾಗದ ಸ್ನಾಯು ಮೇಲೆ ಒತ್ತಡ ಹೇರಿದಂತಾಗುತ್ತದೆ. ಇದರಿಂದ ಕುತ್ತಿಗೆ ಉಳುಕುವುದು ಅಥವಾ ಸೊಂಟ ನೋವು ಕಾಣಿಸುವ ಸಾಧ್ಯತೆ ಇರುತ್ತದೆ.

ಈ ಸಮಸ್ಯೆ ಹೆಚ್ಚಾಗಿ ಕಂಡು ಬರುವುದು ಯಾರಿಗೆ ಗೊತ್ತಾ? ಕೂತ ಜಾಗದಲ್ಲಿಯೇ ಹೆಚ್ಚು ಸಮಯ ಕಳಯುವವರಲ್ಲಿ ಇಂಥ ಲಕ್ಷಣ ಕಾಣಿಸುತ್ತದೆ. ಕತ್ತು ನೋವೆಂದು ಕುತ್ತಿಗೆ ಭಾಗದಲ್ಲಿ ನಟಿಗೆ ತೆಗೆಯುವಾಗ ಮೆದುಳಿನ ಮೇಲೂ ಭೀಕರ ಪರಿಣಾಮ ಬೀರುವ ಸಾಧ್ಯತೆ ಇದೆ. ಹಾಗಾಗಿ ಇಂಥದ್ದನ್ನು ಮಾಡದಿದ್ದರೇ ಒಳಿತು.

ನೀವು ಕೂತ ಜಾಗದಲ್ಲೇ ಕುತ್ತಿಗೆಯ ನಟಿಗೆ ಮುರಿಯುವ ಬದಲು ರಿಲ್ಯಾಕ್ಸ್ ಆಗಲು ಕೂತ ಜಾಗದಿಂದ ಎದ್ದು ಓಡಾಡಿ. ಕೈ-ಕಾಲುಗಳನ್ನು ಅಲ್ಲಾಡಿಸಿ. ಸುದೀರ್ಘ ಉಸಿರೆಳೆದುಕೊಂಡು ಬಿಡಿ. ಪ್ರಾಣಾಯಾಮ ಮಾಡಿ. ಇವೆಲ್ಲವೂ ರಿಲ್ಯಾಕ್ಸ್ ಆಗುವಂತೆ ಮಾಡುತ್ತದೆ. ಅದನ್ನು ಬಿಟ್ಟು ಕುತ್ತಿಗೆಯನ್ನು ನಟಿಗೆ ಮುರಿಯುವುದರಿಂದ ತೊಂದರೆಯಾಗುವುದು ಸುಖ ಸುಮ್ಮನೆ ಇಂತಹ ತಪ್ಪನ್ನು ಮಾಡಬೇಡಿ.

LEAVE A REPLY

Please enter your comment!
Please enter your name here