ಊಟಕ್ಕೆ ಉಪ್ಪಿನಕಾಯಿ ಇದ್ರೆ ಚಂದ ಅನ್ನೋ ಮಾತು ಎಲ್ಲರಿಗೂ ತಿಳಿದಿರುವಂತದ್ದು ಹಾಗೂ ವಾಸ್ತವ ಕೂಡ, ಊಟಕ್ಕೆ ಉಪ್ಪಿನಕಾಯಿ ಸೀಮಿತಾಗಿರಬೇಕು ಅದನ್ನ ಬಿಟ್ಟು ಊಟದ ರೀತಿಯಲ್ಲಿ ತಿಂದ್ರೆ ಅರೋಗ್ಯಕ್ಕೆ ಮಾರಕವಾಗುತ್ತದೆ. ಕೆಲವರು ಉಪ್ಪಿನ ಕಾಯಿಯನ್ನು ಹೆಚ್ಚು ತಿನ್ನಲು ಬಯಸುತ್ತಾರೆ ಆದ್ರೆ ಇದು ಆರೋಗ್ಯದ ದೃಷ್ಟಿಯಿಂದ ಅಷ್ಟೊಂದು ಒಳ್ಳೆಯದಲ್ಲ ಅನ್ನೋದು ಕೆಲ ತಜ್ಞರ ಮಾತು.

ಉಪ್ಪಿನಕಾಯಿಯನ್ನು ಕೆಲವರು ಪಲ್ಯದಂತೆ ಸೇವಿಸುತ್ತಾರೆ ಆದ್ರೆ ಇದರಿಂದ ಆರೋಗ್ಯಕ್ಕೆ ಹೇಗೆಲ್ಲ ಪರಿಣಾಮ ಬೀರುತ್ತದೆ ಅನ್ನೋದರ ಬಗ್ಗೆ ಇಲ್ಲಿ ಒಮ್ಮೆ ಗಮನಿಸಿ, ಉಪ್ಪಿನ ಕಾಯಿಯನ್ನು ತಯಾರಿಸುವಾಗ ಹಲವು ಬಗೆಯ ಪದಾರ್ಥಗಳನ್ನು ಬಳಸಿ ತಯಾರಿಸಲಾಗಿರುತ್ತದೆ ಹಾಗಾಗಿ ಇವುಗಳಿಂದ ಆರೋಗ್ಯಕ್ಕೆ ತೊಂದರೆಯಾಗುವುದು ಹೇಗೆಂದರೆ ಉಪ್ಪಿನಕಾಯಿಯಲ್ಲಿ ಎಣ್ಣೆ ಅಂಶ ಹೆಚ್ಚಿರುತ್ತದೆ ಇದರಲ್ಲಿ ಉಪಯೋಗಿಸುವ ಮಸಾಲೆಯಿಂದ ಕೊಲೆಸ್ಟ್ರಾಲ್ ಮತ್ತಿತರೆ ಸಮಸ್ಯೆಯನ್ನು ತಂದೊಡ್ಡುತ್ತದೆ.

ಅಷ್ಟೇ ಅಲ್ಲದೆ ಇದರ ಹೆಚ್ಚು ಬಳಕೆಯಿಂದ ಹೊಟ್ಟೆಯಲ್ಲಿ ಆಮ್ಲೀಯತೆಯನ್ನು ಹೆಚ್ಚಿಸುತ್ತದೆ. ಇದರಿಂದ ಆ್ಯಸಿಡಿಟಿ, ಗ್ಯಾಸ್, ಹುಳಿ ತೇಗಿನಂಥ ಸಮಸ್ಯೆಯನ್ನು ಕಾಡುತ್ತದೆ. ಉಪ್ಪಿನಕಾಯಿಯಲ್ಲಿ ಉಪ್ಪಿನಂಶ ಹೆಚ್ಚಿರುವುದರಿಂದ ಸೋಡಿಯಂ ದೇಹಕ್ಕೆ ಸೇರುತ್ತದೆ. ಅಲ್ಲದೆ ಹೈ ಬ್ಲಡ್ ಪ್ರೆಷರ್‌ಗೆ ಕಾರಣವಾಗಬಲ್ಲದು.

ಉಪ್ಪಿನಕಾಯಿಯನ್ನು ಹೆಚ್ಚು ತಿನ್ನೋದ್ರಿಂದ ಅಲ್ಸರ್ ಇತ್ಯಾದಿ ಸಮಸ್ಯೆಗಳು ಕಾಡುವುದು ಹಾಗಾಗಿ ಮಿತವಾಗಿ ಬಳಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಇದನ್ನು ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ ಇದರ ಬಗ್ಗೆ ತಿಳಿದುಕೊಳ್ಳಲಿ.

LEAVE A REPLY

Please enter your comment!
Please enter your name here