ಇತ್ತೀಚಿನ ದಿನಗಲ್ಲಿ ರಾತ್ರಿವೇಳೆ ತಡವಾಗಿ ಊಟ ಮಾಡಿ ತಡವಾಗಿ ಮಲಗುವವರು ಹೆಚ್ಚು ಮಂದಿ, ಇದಕ್ಕೆ ಕಾರಣ ಒತ್ತಡದ ಬದುಕು ಹಾಗು ಸಮಯದ ಅಭಾವ ಅಂದರೆ ತಪ್ಪಾಗಲಾರದು. ಮನುಷ್ಯ ಪ್ರತಿದಿನ ಒತ್ತಡದ ಸಮಸ್ಯೆಯನ್ನು ನಿರ್ವಹಿಸುತ್ತಿದ್ದಾನೆ, ಆರೋಗ್ಯದ ಕಾಳಜಿಯಿಲ್ಲದೆ.

ಈ ಸಂಶೋಧನೆ ಹೇಳುವ ಪ್ರಕಾರ ರಾತ್ರಿ ತಡವಾಗಿ ಊಟ ಮಾಡಿ ತಡವಾಗಿ ಮಲಗುವುದರಿಂದ ಇಂಥಹ ಕಾಯಿಲೆಗಳು ಬರುತ್ತವೆ ಎಂಬುದಾಗಿ, ಹಾಗಾಗಿ ಪ್ರತಿದಿನ ರಾತ್ರಿ 9 ಗಂಟೆಯೊಳಗೆ ಊಟ ಮುಗಿಸಿ ಈ ಕಾಯಿಲೆಗಳಿಂದ ದೂರ ಉಳಿಯಿರಿ. ಇಂಟರ್ನಾಷನಲ್ ಜರ್ನಲ್ ಆಫ್ ಕ್ಯಾನ್ಸರ್ ನಲ್ಲಿ ಪ್ರಸಾರಗೊಂಡ ವರದಿ ಪ್ರಕಾರ ರಾತ್ರಿ 9 ರೊಳಗೆ ಊಟ ಮುಗಿಸುವ ಮಹಿಳೆಯರಲ್ಲಿ ಸ್ತನ ಮತ್ತು ಗರ್ಭಕೋಶ ಕ್ಯಾನ್ಸರ್ ಬರುವ ಅಪಾಯ ಕಡಿಮೆಯಂತೆ.

ಹೌದು ಈ ಸಂಶೋಧನೆ ಅಧ್ಯಯನಕ್ಕೆ 600 ಕ್ಕೂ ಹೆಚ್ಚು ಮಂದಿ ಗರ್ಭಾಶಯ ಕ್ಯಾನ್ಸರ್ ಇರುವ ರೋಗಿಗಳು ಮತ್ತು 1205 ಸ್ತನ ಕ್ಯಾನ್ಸರ್ ಇರುವ ರೋಗಿಗಳ ಮೇಲೆ ಅಧ್ಯಯನ ನಡೆಸಿತ್ತು, ಆ ಸಂದರ್ಭದಲ್ಲಿ ಈ ರೀತಿ ತಿಳಿದುಬಂದಿದೆ ಎಂಬುದಾಗಿ ಹೇಳಲಾಗುತ್ತಿದೆ. ಅದೇನೇ ಇರಲಿ ಉತ್ತಮ ಆರೋಗ್ಯವನ್ನು ಪಡೆಯಲು ಹಾಗು ಇಂತಹ ಕಾಯಿಲೆಗಳಿಂದ ದೂರ ಉಳಿಯಲು ಪ್ರತಿದಿನ ರಾತ್ರಿ ಬೇಗನೆ ಊಟ ಮಾಡಿ ಮಲಗುವುದು ಒಳ್ಳೆಯದು.

LEAVE A REPLY

Please enter your comment!
Please enter your name here