ಬಾಯಿ ಹುಣ್ಣು ಸಮಸ್ಯೆ ದೇಹದ ಉಷ್ಣಾಂಶದಿಂದ ಬರುವುದು, ಇದಕ್ಕೆ ಹಲವು ಮನೆಮದ್ದುಗಳಿವೆ ಅವುಗಳಲ್ಲಿ ಇದು ಕೂಡ ಒಂದು ಬಾಯಿ ಹುಣ್ಣು ವಾಸಿಯಾಗಲು ಕಲ್ಲು ಸಕ್ಕರೆ ಹಾಗೂ ಒಣಕೊಬ್ಬರಿ ಸಹಕಾರಿಯಾಗಿದೆ. ಇದರಲ್ಲಿ ಪೋಷಕಾಂಶಗಳು ಹಾಗೂ ವಿಟಮಿನ್ ಅಂಶ ಇರೋದ್ರಿಂದ ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನು ನೀಡುತ್ತದೆ.

ಬಾಯಿಹುಣ್ಣು ಸಮಸ್ಯೆ ನಿವಾರಣೆಗೆ ಒಣಕೊಬ್ಬರಿ ಮತ್ತು ಕಲ್ಲು ಸಕ್ಕರೆಯನ್ನು ತಿನ್ನುವುದರಿಂದ ಬಾಯಿ ಹುಣ್ಣು ವಾಸಿಯಾಗುತ್ತದೆ. ಅಷ್ಟೇ ಲ್ಲದೆ ಹಲವು ಸಮಸ್ಯೆಗಳಿಗೆ ಈ ಕೆಳಕಂಡಂತೆ ಮನೆಮದ್ದುಗಳನ್ನು ತಿಳಿಸಲಾಗಿದೆ ನೋಡಿ.

ಅಡುಗೆಗೆ ಬಳಸುವಂತ ಬೆಳ್ಳುಳ್ಳಿಯನ್ನು ತಿನ್ನೋದ್ರಿಂದ ಆರೋಗ್ಯ ವೃದ್ಧಿಯಾಗುತ್ತದೆ ಮತ್ತು ಆಯುಷ್ಯ ಕೂಡ ಹೆಚ್ಚುತ್ತದೆ.ಕೆಮ್ಮು, ನೆಗಡಿಗೆ ತುಂಬಾ ಒಳ್ಳೆಯ ಔಷಧ. ಎಳ್ಳೆಣ್ಣೆಯಿಂದ ಚರ್ಮಕ್ಕೂ ರೋಹ್ಗ್ಯಕ್ಕು ಹೆಚ್ಚು ಸಹಕಾರಿಯಾಗಿದೆ, ಎಳ್ಳೆಣ್ಣೆಯನ್ನು ಮೈಗೆಲ್ಲ ಹಚ್ಚುವುದರಿಂದ ಚರ್ಮ ವ್ಯಾಧಿಗಳೆಲ್ಲ ಗುಣವಾಗುವದಲ್ಲದೆ ಸುಟ್ಟಗಾಯಗಳಿದ್ದರೆ ವಾಸಿಯಾಗುತ್ತದೆ.

ಕರ್ಪೂರವನ್ನು ಸ್ವಲ್ಪ ಲಿಂಬೆ ರಸದಲ್ಲಿ ಬೆರೆಸಿ ತಲೆಗೆ ಮಾಲಿಶ್‌ ಮಾಡಿದರೆ ತಲೆ ನೋವು ಕಡಿಮೆಯಾಗುತ್ತದೆ. ಹಾಗೂ ಬಿಸಿ ನೀರಿನಲ್ಲಿ ಲಿಂಬೆ ರಸ ಹಾಕಿ ಕುಡಿದರೆ ನೆಗಡಿ ನಿವಾರಣೆಯಾಗುತ್ತದೆ.

ನೆಗಡಿಯಿಂದ ಮೂಗು ಕಟ್ಟಿ, ಉಸಿರಾಟದ ತೊಂದರೆಯಾಗುತ್ತಿದ್ದರೆ ಒಂದು ಬಟ್ಟೆಯಲ್ಲಿ ಕರ್ಪೂರವನ್ನು ಸುತ್ತಿ ಅದರ ವಾಸನೆ ತೆಗೆದುಕೊಂಡರೆ ಉಸಿರಾಟ ಸುಗಮವಾಗುತ್ತದೆ. ಅಂಜೂರ ಹಣ್ಣಿನ ತಿರುಳಿನ ಪಟ್ಟಿಯನ್ನು ಕುರುವಿನ ಮೇಲೆ ಕಟ್ಟಿದರೆ ಕೀವು ಹೊರಬಂದು ನೋವು ಕಡಿಮೆಯಾಗುತ್ತದೆ.

ಒಣ ಖರ್ಜೂರ ಸೇವನೆಯು ಮೂಲವ್ಯಾಧಿಗೆ ಮತ್ತು ಮಧುಮೇಹಿಗಳಿಗೆ ತುಂಬಾ ಒಳ್ಳೆಯದು. ಹಾಗೂ ರಾಗಿ ಹಿಟ್ಟನ್ನು ಸ್ವಲ್ಪ ಹುರಿದು ಹುಣಸೆ ನೀರಿನಲ್ಲಿ ಸ್ವಲ್ಪ ಬೆಲ್ಲದೊಂದಿಗೆ ಮಿಶ್ರ ಮಾಡಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಇದರಿಂದ ಪಿತ್ತ ಕಡಿಮೆ ಆಗುತ್ತದೆ.

ಬೇಸಿಗೆಯಲ್ಲಿ ಕಾಡುವ ಬೆವರು ಗುಳ್ಳೆಗೆ ನುಗ್ಗೆ ಸೊಪ್ಪಿನ ಎಲೆಗಳನ್ನು ನುಣ್ಣಗೆ ರುಬ್ಬಿ ಮಜ್ಜಿಗೆಯಲ್ಲಿ ಬೆರೆಸಿ ಮೈ, ಕೈ,ಮುಖ, ತಲೆಗೆ ಲೇಪಿಸಿ ಅರ್ಧ ಗಂಟೆಯ ನಂತರ ತಣ್ಣೀರಿನಿಂದ ತೊಳೆಯಿರಿ.ಬೆವರು ಗುಳ್ಳೆಗಳು ಗುಣವಾಗುತ್ತವೆ.

ಜೀರಿಗೆ ಪುಡಿಯನ್ನು ಬಾಳೆಹಣ್ಣಿನಲ್ಲಿ ಕಲೆಸಿ ಮಲಗುವ ಮುನ್ನ ಸೇವಿಸಿದರೆ ಚೆನ್ನಾಗಿ ನಿದ್ದೆ ಬರುತ್ತದೆ. ಅಷ್ಟೇ ಅಲ್ಲದೆ ಮೆಂತ್ಯೆ ಸೊಪ್ಪಿನ ಸೇವನೆ ಮೇಲಿಂದ ಮೇಲೆ ಮಾಡಿದರೆ ಬೆನ್ನು, ಸೊಂಟ ಹಾಗೂ ಮೈಕೈ ನೋವು ವಾಸಿಯಾಗುತ್ತದೆ.

LEAVE A REPLY

Please enter your comment!
Please enter your name here