ಹಿಂದಿನ ಕಾಲದಲ್ಲಿ ನಮ್ಮ ಪೂರ್ವಜರು ತಾಮ್ರದ ಕೊಳಗ ಪಾತ್ರೆ ಇತ್ಯಾದಿಗಳನ್ನು ನೀರಿಗಾಗಿ ಬಳಸುತ್ತಿದ್ದರು, ಆದ್ರೆ ಇಂದಿನ ಕಾಲದಲ್ಲಿ ಸ್ಟೀಲ್ ಮೆಟಲ್ ಗಳ ಹಾವಳಿಯಿಂದ ಈ ತಾಮ್ರದ ಅವಶ್ಯಕತೆ ಮರೆ ಮಾಚಿದೆ. ಬಹಳಷ್ಟು ಜನಕ್ಕೆ ಗೊತ್ತಿಲ್ಲ ಅನ್ಸತ್ತೆ ತಾಮ್ರದ ಬಾಟಲ್ ಅಥವಾ ಲೋಟಗಳಲ್ಲಿ ಎಷ್ಟೊಂದು ಆರೋಗ್ಯಕರ ಲಾಭಗಳಿವೆ ಅನ್ನೋದು. ಇದರ ಬಗ್ಗೆ ತಿಳಿಸಿ ಕೊಡುತ್ತೇವೆ ಮುಂದೆ ನೋಡಿ.

ಪ್ರತಿದಿನ ನೀರು ಕುಡಿಯಲು ತಾಮ್ರದ ಲೋಟ ಅಥವಾ ಬಾಟಲ್ ಗಳನ್ನೂ ಬಳಸುವುದರಿಂದ ಎಷ್ಟೆಲ್ಲ ಲಾಭಗಳನ್ನು ಪಡೆಯಬಹುದಾಗಿದೆ. ಜೀರ್ಣ ಕ್ರಿಯೆ ಸರಾಗವಾಗಿ ನಡೆಯುತ್ತದೆ ತಾಮ್ರದ ಲೋಟಗಳಲ್ಲಿ ನೀರು ಕುಡಿಯುವುದರಿಂದ ಅದರಲ್ಲಿನ ಅಂಶಗಳು ಕೆಟ್ಟ ಬ್ಯಾಕ್ಟೀರಿಯಾಗಳನ್ನು ನಾಶ ಮಾಡುತ್ತದೆ.ಆ ಮೂಲಕ ದೇಹದ ಜೀರ್ಣ ಕ್ರಿಯೆಯನ್ನು ಇದು ಉತ್ತಮಪಡಿಸುತ್ತದೆ.

ಬೊಜ್ಜಿನ ಸಮಸ್ಯೆಯಿಂದ ಮುಕ್ತಿ: ಆದರೆ ತಾಮ್ರದ ಲೋಟದಲ್ಲಿ ನಿತ್ಯ ನೀರು ಕುಡಿಯುವುದರಿಂದ ಅಧಿಕ ಬೊಜ್ಜು ಕೂಡ ನಿಯಂತ್ರಣಕ್ಕೆ ಬರುತ್ತದೆ. ನೀರಿನಲ್ಲಿರುವ ತಾಮ್ರದ ಅಂಶ ದೇಹದ ಜೀರ್ಣ ಕ್ರಿಯೆಯನ್ನು ಉತ್ತಮಗೊಳಿಸಿ ಬೊಜ್ಜು ಶೇಖರಣೆಯಾಗದಂತೆ ತಡೆಯುತ್ತದೆ. ಆ ಮೂಲಕ ಆಧಿಕ ಬೊಜ್ಜು ಕೂಡ ನಿಯಂತ್ರಣಕ್ಕೆ ಬರುತ್ತದೆ.

ಹೃದಯದ ಆರೋಗ್ಯ ಮತ್ತು ಅಧಿಕ ರಕ್ತದೊತ್ತಡ ನಿಯಂತ್ರಿಸುತ್ತದೆ: ತಾಮ್ರದ ಅಂಶ ಹೃದಯಸಂಬಂಧಿ ರೋಗಗಳನ್ನು ದೂರವಿಡುತ್ತದೆ. ಅಧಿಕ ಬೊಜ್ಜು ನಿಯಂತ್ರಣದ ಮೂಲಕ ಮತ್ತು ಹೃದಯದ ರಕ್ತನಾಳಗಳ ಶುದ್ದೀಕರಣದ ಮೂಲತ ಹೃದಯ ಆರೋಗ್ಯವಾಗಿರುವಂತೆ ತಾಮ್ರದ ಅಂಶ ನೋಡಿಕೊಳ್ಳುತ್ತದೆ.

ತಾಮ್ರದಲ್ಲಿನ ಆ್ಯಂಟಿ ಆಕ್ಸಿಡೆಂಟ್ ಅಂಶ ಮಾರಕ ಕ್ಯಾನ್ಸರ್ ರೋಗವನ್ನು ನಿಯಂತ್ರಿಸಲು ಸಹಕಾರಿಯಾಗುತ್ತದೆ. ಮತ್ತು ಭವಿಷ್ಯದಲ್ಲಿ ಕ್ಯಾನ್ಸರ್ ರೋಗ ಬರದಂತೆಯೂ ಇದು ತಡೆಯುತ್ತದೆ.

ಥೈರಾಯ್ಡ್ ಸಮಸ್ಯೆಗೆ ಪ್ರಮುಖ ಕಾರಣ ತಿನ್ನುವ ಆಹಾರದಲ್ಲಿ ತಾಮ್ರದ ಅಂಶದ ಕೊರತೆ ಎಂದು ವೈದ್ಯರು ಹೇಳುತ್ತಾರೆ. ಹೀಗಾಗಿ ನಾವು ನಿತ್ಯ ತಾಮ್ರದ ಲೋಟದಲ್ಲಿ ನೀರು ಕುಡಿಯುವುದರಿಂದ ದೇಹಕ್ಕೆ ಅಗತ್ಯವಾದ ತಾಮ್ರದ ಅಂಶ ಸೇರುತ್ತದೆ. ಇದು ಥೈರಾಯ್ಡ್ ಸಮಸ್ಯೆ ಪರಿಹರಿಸಲು ನೆರವಾಗುತ್ತದೆ.

ತಾಮ್ರದಲ್ಲಿರುವ ಅಂಶಗಳು ಮಾನವನ ಚರ್ಮಕ್ಕೆ ಯಾವುದೇ ರೀತಿಯ ಸಮಸ್ಯೆ ಕಾಡದಂತೆ ತಡೆಯುತ್ತದೆ. ಅಂತೆಯೇ ಸಂಧಿವಾತ ಮತ್ತು ಸಂಧಿನೋವಿನಲ್ಲೂ ಇದು ಪರಿಣಾಮಕಾರಿಯಾಗಬಲ್ಲದು.

ಹೃದಯ ಆರೋಗ್ಯದಲ್ಲೂ ತಾಮ್ರ ಪರಿಣಾಮಕಾರಿಯಾಗಿದ್ದು, ಹೃದಯ ನಾಳಗಳು ಸದಾಕಾಲ ಚಟುವಟಿಕೆಯಿಂದ ನೋಡಿಕೊಳ್ಳುತ್ತದೆ. ಆ ಮೂಲಕ ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ರಕ್ತ ಪರಿಚಲನೆಯಾಗುವಂತೆ ನೋಡಿಕೊಳ್ಳುತ್ತದೆ. ಇದರಿಂದ ರಕ್ತ ಹೀನತೆ ಸಮಸ್ಯೆ ಕೂಡ ದೂರಾಗುತ್ತದೆ.

ಹೀಗೆ ಹತ್ತಾರು ಲಾಭಗಳನ್ನು ತಾಮ್ರದ ಅಂಶ ಹೊಂದಿವೆ, ನಿಮ್ಮ ಉತ್ತಮ ಆರೋಗ್ಯದ ವೃದಿಗೆ ಇವುಗಳನ್ನು ಬಳಸಿ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ ನಿಮ್ಮ ಅರೋಗ್ಯ ನಿಮ್ಮ ಕೈಯಲ್ಲಿದೆ.

LEAVE A REPLY

Please enter your comment!
Please enter your name here