ಕೆಲವೊಂದು ಆಚಾರ ವಿಚಾರಗಳು ವಿಚಿತ್ರ ಅನಿಸಿದರು ಅದರ ಹಿಂದೆ ಕೆಲವೊಂದು ಮಹತ್ವದ ನಿರ್ಧಾರ ಇರಲಾಗುತ್ತದೆ. ಹಿಂದೂ ಸಂಪ್ರದಾಯದಲ್ಲಿದೆ ಹಲವು ವಿಶೇಷ ಆಚರಣೆಗಳು, ಹಾಗೂ ಸಂಪ್ರದಾಯಗಳು. ಇಲ್ಲಿ ದೇವರ ಬದಲಿಗೆ ನಾಯಿ, ಬೆಕ್ಕು, ಇಲಿಗಳಿಗೆ ದೇವಾಲಯವನ್ನು ನಿರ್ಮಿಸಿ ಪೂಜಿಸಲಾಗುತ್ತದೆ. ವಿಚಿತ್ರ ಅನಿಸಿದರು ಸತ್ಯ ಅಷ್ಟಕ್ಕೂ ಇದು ಎಲ್ಲಿ ಅನ್ನೋದನ್ನ ಮುಂದೆ ತಿಳಿಸಲಾಗುತ್ತದೆ ನೋಡಿ.

ಬುಲಂದ್ ನಗರದಿಂದ ಸುಮಾರು 15 ಕಿ.ಮೀ ದೂರದಲ್ಲಿರುವ ದೇವಾಲಯ ಈ ದೇವಾಲಯ ಸುಮಾರು 100 ವರ್ಷಗಳ ಹಳೆಯ ಮಂದಿರವಾಗಿದ್ದು ಇಲ್ಲಿ ನಾಯಿ ಸಮಾದಿಯ ಮೇಲೆ ಮೂರ್ತಿ ಕೆತ್ತಿ ಅದಕ್ಕೆ ಪೂಜಿಸಲಾಗುತ್ತಿದೆ. ನಾಯಿಯನ್ನು ಹಿಂದೂ ಧರ್ಮದಲ್ಲಿ ಭೈರವನ ವಾಹನವಾಗಿ ಗೌರವಿಸಲಾಗುತ್ತದೆ. ಶನಿ ದೋಷ ನಿವಾರಿಸಲು ನಾಯಿಗೆ ತಿಂಡಿ ನೀಡುತ್ತಾರೆ. ಈ ದೇವಾಲಯದ ಮತ್ತೊಂದು ವಿಶೇಷತೆ ಏನು ಅಂದ್ರೆ ನದ ಮೂರ್ತಿ ಕಾಲಿಗೆ ಕಪ್ಪು ಹಗ್ಗ ಕಟ್ಟಿದರೆ, ಎಲ್ಲ ಇಚ್ಛೆಗಳೂ ಈಡೇರುತ್ತವೆ ಎಂಬುದು ಭಕ್ತರ ವಿಶೇಷವಾದ ನಂಬಿಕೆ.

ಬೆಕ್ಕು ಅಪಶಕುನ ಎಂಬುದಾಗಿ ನಂಬುವ ಜನ ಅದೇ ಬೆಕ್ಕಿಗೆ ಪೂಜೆಯನ್ನು ಮಾಡಲಾಗುತ್ತದೆ ಇದು ಎಲ್ಲಿ ಗೊತ್ತಾ?
ಕರ್ನಾಟಕದ ಮಂಡ್ಯದಿಂದ 35 ಕಿ.ಮೀ ದೂರದಲ್ಲಿ ಬೆಕ್ಕಾಲಲೆ ಎನ್ನುವ ಹಳ್ಳಿಯಲ್ಲಿ ಬೆಕ್ಕಿನ ದೇವಾಲಯವಿದೆ, ಇಲ್ಲಿ ಬೆಕ್ಕನ್ನು ಮಂಗಮ್ಮ ದೇವಿಯ ರೂಪದಲ್ಲಿ ಪೂಜಿಸಲಾಗುತ್ತದೆ.

ಗಣಪನ ವಾಹನ ಇಲಿಯನ್ನು ಕೂಡ ಇಲ್ಲಿ ಪೂಜಿಸಲಾಗುತ್ತದೆ ಇದರ ವಿಶೇಷತೆ ಏನು ಗೊತ್ತಾ?
ರಾಜಸ್ಥಾನದ ಬಿಕಾನೇರ್‌ನಲ್ಲಿರುವ ಕರಣಿ ಮಾತಾ ಮಂದಿರದಲ್ಲಿ ಸುಮಾರು 20 ಸಾವಿರ ಇಲಿಗಳಿವೆ. ಇಲ್ಲಿ ದೇವಿಗೆ ನೈವೇದ್ಯ ನೀಡುವುದರ ಜೊತೆ ಜೊತೆಗೆ ಇಲಿಗಳಿಗೂ ನೀಡಲಾಗುತ್ತದೆ. ಕರಣಿ ದೇವಿ ಜಗದಾಂಬೆಯ ಅವತಾರ. ಆ ದೇವಿ ಇಲ್ಲಿನ ಗುಹೆಯಲ್ಲಿ 650 ವರ್ಷಗಳ ಹಿಂದೆ ತಪಸ್ಸು ಮಾಡಿದ್ದಾರೆಂಬ ನಂಬಿಕೆ ಇದೆ. ಆ ಗುಹೆಯೂ ಇಲ್ಲೇ ಇದೆ ಎಂದು ಹೇಳಲಾಗುತ್ತದೆ. ಕೃಪೆ: ಸುವರ್ಣ

LEAVE A REPLY

Please enter your comment!
Please enter your name here