ನಮ್ಮ ದೇಶದಲ್ಲಿ ಹಲವು ಕಂಪೆನಿಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಯುಗಾದಿ ದಸರಾ ದೀಪಾವಳಿ ಹೀಗೆ ಮುಂತಾದ ಹಬ್ಬಗಳಿಗೆ ಬೋನಸ್ ಕೊಡಲಾಗುತ್ತದೆ, ಅದೇ ರೀತಿಯಲ್ಲಿ ತಮ್ಮ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ 600 ಸಿಬ್ಬಂದಿಗಳಿಗೆ 3.56 ಲಕ್ಷ ರೂ ಮೌಲ್ಯದ ಮಾರುತಿ ಸಿಜಾಕಿ ಮತ್ತು 5.38 ಲಕ್ಷ ರೂ ಮೌಲ್ಯದ ಸುಜುಕಿ ಸಿಲೆರಿಯೋ ಕಾರನ್ನು ದೀಪಾವಳಿಯ ಬೋನಸ್ ಆಗಿ ಕೊಟ್ಟಿದ್ದಾರೆ.

ಅಷ್ಟಕ್ಕೂ ಈ ಉಡುಗೊರೆಯನ್ನು ಕೊಟ್ಟವರು ಯಾರು ಎಲ್ಲಿ ಗೊತ್ತಾ.? ಈ ಉಡುಗೊರೆಯನ್ನು ಕೊಟ್ಟವರು ಸೂರತ್ ಮೂಲದ ವಜ್ರದ ವ್ಯಾಪಾರಿಯಾಗಿರುವ ಸವ್ಜಿ ಡೊಲಕಿಯ ಎಂಬುವವರು ತಮ್ಮ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳಿಗೆ ಈ ವಿಶೇಷವಾದ ಉಡುಗೊರೆಯನ್ನು ಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ ಸಾವಿರಕ್ಕೂ ಹೆಚ್ಚು ತಮ್ಮ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಕುಶಲ ಕರ್ಮಿಗಳಿಗೆ ಹಾಗು ಎಂಜಿನಿಯರ್ಗಳಿಗೆ ಪ್ರೋತ್ಸಾಹ ಧನವನ್ನು ನೀಡಲಾಗುತ್ತಿದೆ ಎಂಬುದಾಗಿ ತಿಳಿಸಿದ್ದಾರೆ.

ವಿಶೇಷ ಏನೆಂದರೆ ಇವರ ಕಂಪನಿಯಲ್ಲಿ ೫.೫೦೦ ಜನ ಸಿಬಂದಿಗಳಿದ್ದು ೪೦೦೦ ಕ್ಕೂ ಹೆಚ್ಚು ಜನ ಈಗಾಗಲೇ ದುಬಾರಿ ಉಡುಗೊರೆಯನ್ನು ಪಡೆದಿದ್ದರೆ ಎಂಬುದಾಗಿ ವರದಿಗಳು ಹೇಳುತ್ತಿವೆ. ಅದೇನೇ ಇರಲಿ ಸಿಬ್ಬಂದಿಗಳಿಗೆ ಈ ರೀತಿಯ ದುಬಾರಿ ಉಡುಗೊರೆಯನ್ನು ಕೊಟ್ಟು ಪ್ರೋತ್ಸಾಹಿಸುತ್ತಿರುವ ಇವರಿಗೆ ಮೆಚ್ಚಲೇ ಬೇಕು.

LEAVE A REPLY

Please enter your comment!
Please enter your name here