ಜೀವನದಲ್ಲಿ ಹೆಚ್ಚು ಶ್ರಮಪಟ್ಟರೆ ಅದಕ್ಕೆ ಪ್ರತಿಫಲ ಸಿಕ್ಕೇಸಿಗುತ್ತದೆ ಅನ್ನೋ ಮಾತು ಎಲ್ಲರಿಗೂ ಗೊತ್ತಿರುವಂತದ್ದು, ಆದ್ರೆ ಕೆಲವರು ಕಷ್ಟ ಪಡದೆ ಸುಖ ಬಯಸುತ್ತಾರೆ, ಅವರಿಗೆ ಪ್ರತಿಫಲ ಸಿಗೋದು ತುಂಬಾನೇ ಕಡಿಮೆ. ಅದರಲ್ಲೂ ಒಂದು ವೇಳೆ ಸಿಕ್ಕರೂ ಅದು ಬಹಳ ದಿನ ಉಳಿಯೋದಿಲ್ಲ. ಶ್ರಮ ಪಟ್ಟು ದುಡಿದು ತಿನ್ನುವ ಹಣದಲ್ಲಿ ಇರುವ ಬೆಲೆ ಗೌರವ ಮತ್ತೊಂದರಲ್ಲಿ ಇಲ್ವೇ ಇಲ್ಲ.

ಅಂದು ಮಾಧ್ಯಮ ವರ್ಗದ ಬಡ ಕುಟುಂಬದ ವ್ಯಕ್ತಿಯಾಗಿದ್ದ ಇವರು ಬಿದಿ ಬೀದಿಯಲ್ಲಿ ತಳ್ಳುವ ಗಡಿಯ ಮೂಲಕ ಆಭರಣಗಳನ್ನು ಮಾರುತ್ತಿದ್ದರು, ಆದ್ರೆ ಇಂದು ಕೋಟಿ ಕೋಟಿ ವ್ಯಾಪಾರ ಮಾಡುವ ಆಭರಣ ಮಳಿಗೆಗಳನ್ನು ಹೊಂದಿದ್ದಾರೆ. ಇದರ ಹಿಂದಿರುವ ಸ್ಪೋರ್ತಿದಾಯಕ ಕಥೆ ಅದು ಏನು ಅನ್ನೋದನ್ನ ತಿಳಿಯೋಣ ಬನ್ನಿ.

ಚಂದ್ರ ಬಿಹರಿ ಅಗರ್ವಾಲ್ ಎಂಬ ವ್ಯಕ್ತಿ ಬಡ ಮಧ್ಯಮ ಕುಟುಂಬದಲ್ಲಿ ಜನಿಸಿದ್ದು ತನ್ನ ತಾಯಿ ಬೀದಿಬದಿಯಲ್ಲಿ ತಿಂಡಿ ಊಟದ ವ್ಯಾಪಾರ ಮಾಡುತ್ತಿದ್ದರು. ಇವರು ತನ್ನ ತಾಯಿಗೆ ಸಹಾಯ ಮಾಡುತ್ತ ಇದ್ದರು. ತುಂಬಾ ಬಡತನದ ಕಾರಣ ಹೆಚ್ಚಿನ ಶಿಕ್ಷಣ ಪಡೆಯಲಾಗಲಿಲ್ಲ. ಅಮ್ಮನಿಗೆ ಸಹಾಯ ಮಾಡುತ್ತ ತನ್ನ ತಂಗಿ ಮತ್ತು ತಮ್ಮನನ್ನು ಶಾಲೆಗೆ ಕಳುಹಿಸುತ್ತಿದ್ದರು.

ಇಂತಹ ಸಮಯದಲ್ಲಿ ಇವರು ತುಂಬ ಯೋಚನೆ ಮಾಡದೇ ಆರ್ಥಿಕ ಪರಿಸ್ಥಿತಿ ನೋಡಿಕೊಳ್ಳಲು ಕೆಲಸ ಮಾಡಲು ಶುರು ಮಾಡಿದರು ಆಗ ಇವರು 10 ವರ್ಷದ ಹುಡುಗನಾಗಿದ್ದರು. ದಿನವೊಂದಕ್ಕೆ ಇವರು 12-14 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದರು. ಇದರಿಂದ ಕುಟುಂಬವು ದಿನಕ್ಕೆ 100 ರೂಪಾಯಿಸಿಗುತಿತ್ತು. ನಂತರ ತನ್ನ 12 ನೇ ವಯಸ್ಸಿನಲ್ಲಿ, ಚಂದ್ ಬಿಹಾರಿ ಅವರು ಜೈಪುರದಲ್ಲಿನ ಒಂದು ಸೀರೆ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಂಡು ತಿಂಗಳಿಗೆ 300 ರೂಪಾಯಿ ದುಡಿಯುತ್ತಾರೆ. ಈ 300 ರೂಪಾಯಿ ಅಂದಿನ ಕಾಲಕ್ಕೆ ದೊಡ್ಡದಾಗಿತ್ತು.

ಹೀಗೆ ದಿನ ಕಳೆದಂತೆ ಕೆಲಸ ಮಾಡುತ್ತ ಅಲ್ಲೇ ತನ್ನ ತಮ್ಮನ ಮದುವೆಯನ್ನು ಮಾಡುತ್ತಾರೆ. ಈ ಮದುವೆಯ ನಂತರ ಇವರಿಗೆ 5000 ರೂಪಯಿಗಳು ಉಳಿದಿರುತ್ತದೆ ಇದನ್ನೇ ಹಿಟ್ಟುಕೊಂಡು ಒಂದು ಅಂಗಡಿಯನ್ನು ರಸ್ತೆ ಬದಿಯಲ್ಲಿ ಬಾಡಿಗೆಗೆ ತೆಗೆದುಕೊಂಡು ತಮ್ಮ ವ್ಯಾಪಾರ ಶುರು ಮಾಡುತ್ತಾರೆ ಇಂತ ಸಮಯದಲ್ಲಿ ಇವರು ತುಂಬ ಕಷ್ಟಪಟ್ಟು ವ್ಯಾಪರ ಮಾಡುತ್ತಿರುತ್ತಾರೆ.

ವ್ಯಾಪಾರಿಗಳು ತಮ್ಮ ಸೀರೆಗಳನ್ನು ಖರೀದಿಸಲು ಬಿಹಾರದ ವಿಭಿನ್ನ ಭಾಗಗಳಿಂದ ಬರುತ್ತಿದ್ದರು. ಹೀಗೆ ಒಂದು ದಿನ ಇವರು ಪಾಟ್ನಾದಲ್ಲಿನ ಕಡಕುವಾನ್ನಲ್ಲಿ ಸುಮಾರು 300 ಚದರ ಅಡಿಗಳ ಚಿಲ್ಲರೆ ವ್ಯಾಪಾರದ ಅಂಗಡಿಯನ್ನು ಬಾಡಿಗೆಗೆ ಪಡೆದು ವ್ಯಾಪಾರ ಶುರು ಮಾಡಿದರು ಇದರಲ್ಲಿ ಇವರಿಗೆ ಮಾಸಿಕ ರೂ 80,000-90,000 ಸಿಗುತ್ತದೆ.

ಈ ರೀತಿಯಾಗಿ ದಿನದಿಂದ ದಿನಕ್ಕೆ ತಮ್ಮ ವ್ಯಾಪಾರವನ್ನು ಗಟ್ಟಿ ಮಾಡಿಕೊಂಡು ಒಂದು ದಿನ 10 ಲಕ್ಷದ ಬಂಡವಾಳವನ್ನು ಚಿನ್ನದ ಮೇಲೆ ಹೂಡಿಕೆ ಮಾಡಿ ತುಂಬ ಲಾಭ ಗಳಿಸುತ್ತಾರೆ. ಹೀಗೆ ಲಾಭ ಪಡೆಯುತ್ತ ಒಂದು ದಿನ ಇವರು ಆಭರಣ ಮಳಿಗೆಗಳನ್ನು ಓಪನ್ ಮಾಡಿ ಕೋಟಿ ಕೋಟಿ ದುಡಿಮೆ ಮಾಡುತ್ತಿದ್ದಾರೆ. ಹೀಗೆ ಚಿಕ್ಕ ವ್ಯಾಪಾರಿ ಒಂದು ತಳ್ಳುವಗಾಡಿಯಲ್ಲಿ ಬೀದಿ ಬೀದಿಯಲ್ಲಿ ಚಿಕ್ಕ ಚಿಕ್ಕ ಬಟ್ಟೆಗಳನ್ನು ಮತ್ತು ಮನೆ ಮನೆಗಳಿಗೆ ಮಾರುವ ವ್ಯಕ್ತಿ ಇಂದು ಕೋಟಿ ಕೋಟಿ ವ್ಯಾಪಾರ ಮಾಡುವ ಆಭರಣಗಳ ಅಂಗಡಿಗಳ ಮಾಲೀಕನಾಗಿದ್ದಾರೆ.

ಅದೇನೇ ಇರಲಿ ಕಷ್ಟ ಪಟ್ಟರೆ ಪ್ರತಿಫಲ ಸಿಕ್ಕೇ ಸಿಗುತ್ತದೆ ಅನ್ನೋದಕ್ಕೆ ಇವರು ಬೆಸ್ಟ್ ಉದಾಹರಣೆ ಅನ್ನಬಹುದು ಅಷ್ಟೇ ಅಲ್ದೆ ಜೀವನದಲ್ಲಿ ಸಾಧನೆ ಮಾಡಬೇಕು ಅನ್ನೋರಿಗೆ ಬಡತನ ಅಡ್ಡ ಬರುತ್ತಿದೆ ಅನ್ನೋರು ಇವರ ಜೀವನ ಕಥೆಯನ್ನು ತಿಳಿದ ಮೇಲೆ ಏನಾದ್ರು ಸಾಧಿಸಲು ಮುಂಡಗೋದ್ರಲ್ಲಿ ಅನುಮಾನವೇ ಇಲ್ಲ.

LEAVE A REPLY

Please enter your comment!
Please enter your name here