ನಿಜಕ್ಕೂ ಒಮ್ಮೊಮ್ಮೆ ಮುಖ ಪ್ರಾಣಿಗಳು ತಿಳಿಯದೆ ಕೆಲವೊಂದು ಸಂಕಷ್ಟಕ್ಕೆ ಸಿಲುಕಿ ಬಿಡುತ್ತವೆ, ಅದರಲ್ಲೂ ಈ ರೀತಿಯ ಘಟನೆ ಬಗ್ಗೆ ನೀವು ಸಾಮಾನ್ಯವಾಗಿ ಕೇಳಿರುತ್ತೀರಾ ಅಥವಾ ನೋಡಿರುತ್ತೀರ. ಇಲ್ಲಿ ಹಸುವೊಂದು ೪೦ ಅಡಿ ಆಳದ ಪಾಳುಬಾವಿಗೆ ಬಿದ್ದು ಸಂಕಷ್ಠಕ್ಕೆಹಿಡಾಗಿದ್ದ ಸಂದರ್ಭದಲ್ಲಿ ಈ ಯುವಕರು ಮಾಡಿದ ಕೆಲಸಕ್ಕೆ ನಿಜಕ್ಕೂ ಒಂದು ಸಲಾಂ ಅಂತೀರಾ.

ಬಾವಿಗೆ ಬಿದ್ದು ದಿಕ್ಕು ಕಾಣದಾದ ಹಸುವಿಗೆ ಒಂದು ದಿಕ್ಕನ್ನು ತೋರಿಸಿದ್ದು ಈ ಯುವಕರು, ಈ ಘಟನೆ ನಡೆದಿರುವುದು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಹನುಮಂತನಹಳ್ಳಿಯಲ್ಲಿ. ಈ ಹಸುವನ್ನು ಬಾವಿಯಿಂದ ಮೇಲಕ್ಕೆ ಎತ್ತಿ ಹಸುವನ್ನು ರಕ್ಷಣೆ ಮಾಡಿದ್ದಾರೆ.

ಈ ಯುವಕರ ಸಾಹಸ ಕೆಲಸಕ್ಕೆ ಮೆಚ್ಚುಗೆಯ ಪ್ರಶಂಶೆ ಹರಿದು ಬಂದಿದೆ. ಅದೇನೇ ಇರಲಿ ಈ ರೀತಿಯ ಕೆಲವೊಂದು ಘಟನೆಗಳು ನಿಮ್ಮ ಕಣ್ಣ ಮುಂದೆ ನಡೆದರೂ ಸುಮ್ಮನಾಗದೆ ಕೆಲವು ಮುಖ ಪ್ರಾಣಿಗಳನ್ನು ರಕ್ಷಿಸುವ ಕೆಲಸಕ್ಕೆ ಮುಂದಾಗುವುದು ಒಳ್ಳೆಯ ಕೆಲಸ ಅಲ್ಲವೇ?

LEAVE A REPLY

Please enter your comment!
Please enter your name here