ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಬ್ಬ ವ್ಯಕ್ತಿಯ ಸ್ವಭಾವವನ್ನು ಗುರುತಿಸಬಹುದಾಗಿದೆ ಹಾಗು ತಮ್ಮ ಗುಣ ಹೇಗೆ ಅನ್ನೋದನ್ನ ತಿಳಿಯಬಹುದಾಗಿದೆ. ಯಾವ ತಿಂಗಳಿನಲ್ಲಿ ಜನಿಸಿದವರು ಹೇಗೆ ಇರುತ್ತಾರೆ ಅನ್ನೋದನ್ನ ಈ ಮೂಲಕ ತಿಳಿಯೋಣ ಬನ್ನಿ.

ಜನವರಿ: ಜನವರಿಯಲ್ಲಿ ಹುಟ್ಟಿದವರು ಒಳ್ಳೆ ಲೀಡರ್ ಗುಣ ನಿಮಗೆ ಇರುತ್ತೆ, ಬೇರೆ ಯವರಿಗೆ ಹೋಲಿಸಿಕೊಂಡರೆ ನೀವು ತುಂಬ ಮೇಲ್ಮಟ್ಟಕ್ಕೆ ಯೋಚ್ನೆ ಮಾಡ್ತೀರಾ, ಮಕ್ಕದ್ ಮೇಲೆ ಹೊಡ್ದನ್ಗೆ ಮಾತಾಡ್ತೀರಾ, ನಿಮ್ಮ ಸ್ಟ್ರೇಟ್ ಫಾರ್ವರ್ಡ್ ಗುಣ ನ ನಿಮ್ಮ ಪ್ಲಸ್ ಮತ್ತೆ ಅದೇ ನಿಮ್ಮ ಮೈನಸ್, ನಿಮ್ಮನ್ನ ಯಾರು ಪ್ರಶ್ನೆ ಮಾಡಾಕೆ ಹೋಗಲ್ಲ ಯಾಕಂದ್ರೆ ನಿಮ್ಮ ನಿರ್ಧಾರ ಪರ್ಫೆಕ್ಟ್ ಆಗಿರುತ್ತೆ, ನಿಮ್ಮ ಸಹಾಯಕ್ಕೆ ಬರೋರೆ ಗಂಡು ಮಕ್ಳು ಅಂತೇ, ನೀವು ಇತರರಿಗಿಂತ ಹೆಚ್ಚು ಭಿನ್ನವಾಗಿ ಬದುಕ್ತಿರ.

ಫೆಬ್ರವರಿ : ಇವರು ನೋಡಲು ಸಾಧಾರಣರಂತೆ ಕಂಡು ಅತಿ ಬುದ್ದಿಶಾಲಿಗಳು ಹಾಗು ಬಹಳ ಸೆಂಟಿಮೆಂಟಲ್, ಎಮೋಷನಲ್, ಭಾವಜೀವಿಗಳು ಯಾರ್ನಾದ್ರು ಹಚ್ಚ್ಕೊಂಡ್ಬಿಟ್ರೆ ಸಾಕು ಜೀವನ ಪರ್ಯಂತ ಇಷ್ಟಪಡ್ತಿರಾ, ಜೀವನ ಪರ್ಯಂತ ಪ್ರೀತಿಗಾಗಿ ಹುಡುಕುತ್ತಾ ಇರ್ತೀರಾ, ಅತಿ ಬುದ್ಧಿವಂತರು, ಇಮ್ಯಾಜಿನೇಶನ್ ನಲ್ಲೆ ಕಾಲ ಕಳಿತ ಇರ್ತಾರೆ, ಉದ್ವಿಗ್ನತೆ, ಶಾಂತಿಯುತ, ನಾಚಿಕೆ ಮತ್ತು ವಿನಮ್ರ, ಪ್ರಾಮಾಣಿಕ ಮತ್ತು ನಿಷ್ಠಾವಂತ, ಸ್ವಾತಂತ್ರ್ಯವನ್ನು ಪ್ರೀತಿಸುವ ,ಬಹಳ ಬೇಗ ಕೋಪ ಮಾಡ್ಕೊಳ್ಳೋ, ಧೈರ್ಯಶಾಲಿ, ಹಠಮಾರಿ, ಮಹತ್ವಾಕಾಂಕ್ಷೆಯ, ಕನಸುಗಳು ಹೊತ್ತಿರೋರು,

ಮಾರ್ಚ್ : ನೀವು ಬಹಳಷ್ಟು ಹಣವನ್ನು ಮಾಡುವ ಸಾಮರ್ಥ್ಯವನ್ನು ಹೊಂದಿದ್ದೀರಿ, ಆದರೆ ಅದನ್ನು ತ್ವರಿತವಾಗಿ ಕಳೆದುಕೊಳ್ಳುತ್ತೀರಿ, ನಂಬಿದೋರೆ ಮೋಸ ಮಾಡೋದು ಜಾಸ್ತಿ ನಿಮಗೆ ಆದರೆ ನಿಮ್ಮನ್ನ ನೀವು ಬಹಳ ಪ್ರೀತಿ ಮಾಡ್ತೀರಾ ಆಕರ್ಷಕ ವ್ಯಕ್ತಿತ್ವ, ನಾಚಿಕೆ ಸ್ವಭಾವ, ರಹಸ್ಯ ಮಾಡೋ, ಪ್ರಾಮಾಣಿಕ, ಉದಾರ, ಸಹಾನುಭೂತಿ, ಶಾಂತಿ ಮತ್ತು ಪ್ರಶಾಂತತೆಯನ್ನು ಪ್ರೀತಿಸುತ್ತಾರೇ ಬಹಳ ಸೂಕ್ಷ್ಮ ಸ್ವಭಾವದ ಇವರು ಬೇಗ ಕೋಪ ಮಾಡ್ಕೋತಾರೆ.

ಏಪ್ರಿಲ್ :ನಿಮ್ಮ ಬುದ್ಧಿವಂತ ಗುಣಗಳು ನಿಮ್ಮನ್ನ ಎಲ್ಲರಿಗು ಇಷ್ಟ ಆಗೋ ತರ ಮಾಡುತ್ತೆ, ಬಹಳ ಮಹತ್ವಾಕಾಂಕ್ಷಿ ಅನ್ಕೊಂಡಿದ್ದು ಮಾಡ್ಲೆ ಬೇಕು ಅನ್ನೋ ಗುಣ, ನೀವು ಜನರನ್ನು ದೂರವಿಡುವುದಿಲ್ಲ ಅನೇಕ ಸ್ನೇಹಿತರನ್ನ ಆಕರ್ಷಣೆ ಮಾಡ್ತೀರಾ, ನಿಮ್ಮ ನಾನ್ ಹೇಳಿದಂಗೆ ಜನ ಕೇಳ್ಬೇಕು ಅನ್ನೋ ದನ್ನು ಬಿಟ್ರೆ ಒಳ್ಳೆದಾಗುತ್ತೆ, ಸಕ್ರಿಯ, ಸೌಹಾರ್ದ, ಉದಾರ, ಭಾವನಾತ್ಮಕ, ಆಕ್ರಮಣಕಾರಿ, ಮತ್ತು ಕ್ರಿಯಾತ್ಮಕ, ನಿರ್ಣಾಯಕ ಗುಣಗಳನ್ನು ಹೊಂದಿದ್ದು ಕೆಲವು ಸಾರಿ ಮಾಡೋ ನಿರ್ಧಾರಗಳಿಗೆ ಬಹಳ ಪಶ್ಚಾತಾಪ ಪಟ್ಕೋತೀರ.

ಮೇ : ನಿಮ್ಮ ಅಭಿಪ್ರಾಯ ತಿಳ್ಸೋದು ನಿಮಗೆ ಬಹಳ ಮುಖ್ಯ ಆಗಿರುತ್ತೆ, ಕಲೆಗಳಲ್ಲಿ ಆಸಕ್ತಿ ಹೊಂದಿರ್ತೀರಾ, ಒಳ್ಳೆಯ ಪ್ರತಿಭಾನ್ವಿತ ಸಂಗೀತಗಾರ, ನಟ, ಅಥವಾ ಬರಹಗಾರರಾಗಿರಬಹುದು, ಹೆಚ್ಚಿನ ಗೌರವ ಬೇಕು ಅನ್ಕೋತೀರಾ, ಮದುವೆಯ ಪವಿತ್ರತೆಯ ಬಗ್ಗೆ ಬಹಳ ನಂಬಿಕೆ ಇಟ್ಕೊಂಡಿರ್ತಿರಾ, ಕಷ್ಟ ಪಡೋ ಜೀವಿ ನೀವು, ಸ್ನೇಹಿತರೆಂದರೆ ಪ್ರಾಣ ಬಹಳಷ್ಟು ಸಮಯ ಅವರ ಜೊತೇನೆ ಕಳೆಯೋಕೆ ಇಷ್ಟ ಪಡ್ತಿರ.

ಜೂನ್ : ಬಹಳ ರೋಮ್ಯಾಂಟಿಕ್ ವ್ಯಕ್ತಿ, ಆದರೆ ಬೇರೆಯವರನ್ನ ಕಂಡ್ರೆ ಹೊಟ್ಟೆ ಕಿಚ್ಚು ಪಡ್ತಿರಾ, ಪ್ರೀತಿ ಜೀವನ ಅಷ್ಟು ಚೆನ್ನಾಗಿ ಇರಲ್ವೇನೋ ಆದರೆ ನೀವೊಬ್ಬರು ಅದ್ಬುತ ಪ್ರೇಮಿ ಅನ್ನೋದ್ರಲ್ಲಿ ಡೌಟ್ ಇಲ್ಲ, ಹಳೆ ವಿಷಯಗಳನ್ನ ನೆನಪಿಸಿಕೊಂಡು ಕೊರಗುತ್ತಾ ಇರ್ತೀರಾ, ಗಾಳಿ ಸುದ್ದಿಗಳು ಕೇಳೋದು ಮತ್ತೆ ಹೇಳೋದು ಜಾಸ್ತಿ ಅದೇ ನಿಮಗೆ ಮೈನಸ್, ನಿಮ್ಮ ಕುಟುಂಬ ಅಂದ್ರೆ ನಿಮಗೆ ಪ್ರಾಣ, ಸಂಕೋಚದ ಸ್ವಭಾವ, ಆದಷ್ಟು ಬೇಗ ಯಾರ್ನಾದ್ರು ಹಚ್ಕೊಂಡ್ಬಿಡೋ ಬುದ್ದಿ, ಮುಂದೆ ಬರೋದನ್ನ ಮೊದಲೇ ಹೇಳೋ ಬುದ್ದಿ, ಬಹಳ ಸೂಕ್ಷ್ಮ, ಯಾವಾಗೂ ಬೆಸ್ಟ್ ಇರ್ಬೇಕು ಅಂತ ಅನ್ಕೋತೀರ.

ಜುಲೈ :ನೀವು ಬಹಳ ಬುದ್ದಿವಂತ್ರು, ಮೃದು ಸ್ವಭಾವ, ಎಲ್ಲರಿಗು ಇಷ್ಟ ಆಗ್ತೀರಾ ಆದ್ರೆ ಶತ್ರುಗಳು ಜಾಸ್ತಿ, ಸೂಕ್ಷ್ಮ ಮತ್ತು ಖಿನ್ನತೆಗೆ ಒಳಗಾಗುವ ಚಾನ್ಸಸ್ ಜಾಸ್ತಿ, ಜೊತೆ ಇರಲು ಜನ ಬಹಳ ಇಷ್ಟ ಪಡ್ತಾರೆ, ಅರ್ಥ ಮಾಡ್ಕೊಳ್ಳೋಕೆ ತುಂಬ ಕಷ್ಟ, ಪ್ರಾಮಾಣಿಕ, ಜಾಣ್ಮೆಯ, ಸೌಹಾರ್ದ, ಭಾವನೆಗಳಿಗೆ ಹೆಚ್ಚು ಬೆಲೆ ಕೊಡ್ತಾರೆ, ಬೇಗ ಮನಸಿಗೆ ನೋವಾಗುತ್ತೆ, ಪ್ರತಿಕಾರ ತಿರಿಸ್ಕೊಬೇಕು ಅಂತ ಕಾಯುತ್ತ ಇರ್ತೀರಾ, ಹೆಚ್ಚಿಗೆ ಜನರನ್ನ ನಂಬೋಲ್ಲ, ಜನರ ಬಗ್ಗೆ ಒಂದು ಅಭಿಪ್ರಾಯ ಇಟ್ಕೊಂಡೇ ಇರ್ತಾರೆ, ಹಳೇದನ್ನು ಯೋಚ್ನೆ ಮಾಡೋದು ಬಿಡೋಲ್ಲ, ಒಂಟಿ ಯಾಗಿ ಹೆಚ್ಚಿಗೆ ಇರೋಕೆ ಇಷ್ಟ ಪಡ್ತಾರೆ.

ಆಗಸ್ಟ್ : ನಿಮಗೆ ಹಣವು ಸುಲಭವಾಗಿ ಬರುತ್ತದೆ, ಜೋಕ್ ಮಾಡಲು ಇಷ್ಟಪಡುತ್ತಾರೆ, ಆಕರ್ಷಕವಾಗಿ ಇರ್ತಾರೆ , ದೃಢತೆ ಮತ್ತು ನಾಯಕತ್ವ ಗುಣ ಇರುತ್ತೆ, ಯಾರಿಗೂ ಹೆದ್ರೋಲ್ಲ, ಉದಾರ ಮತ್ತು ಅಹಂಕಾರ ಸುಲಭವಾಗಿ ಕೋಪ ಮಾಡ್ಕೊಳ್ಳೋ ವ್ಯಕ್ತಿ, ಬಹಳ ಹೊಟ್ಟೆ ಉರಿ ಇರೋ ವ್ಯಕ್ತಿ, ಎಚ್ಚರಿಕೆಯಿಂದ ಮತ್ತು ಜಾಗರೂಕರಾಗಿ, ಶೀಘ್ರವಾಗಿ ಯೋಚಿಸುತ್ತಾರೇ, ಸ್ವತಂತ್ರ ಆಲೋಚನೆಗಳು ಇರುವಂತ ವ್ಯಕ್ತಿ.

ಸೆಪ್ಟೆಂಬರ್ : ನೀವು ಹೆಚ್ಚು ಬುದ್ಧಿವಂತ ಮತ್ತು ಆಧ್ಯಾತ್ಮಿಕ ಚಿಂತನೆ ಇರುವ ವ್ಯಕ್ತಿ, ನಿಮ್ಮ ದೊಡ್ಡ ದೌರ್ಬಲ್ಯ ಖಿನ್ನತೆಗೆ ಒಳಗಾಗುವುದು, ನೀವು ಜೀವನದಲ್ಲಿ ಉದ್ದಾರ ಆಗ್ಬೇಕು ಅಂತಿದ್ರೆ ಮೊದಲು ಆಡೋರ ಮಾತಿಗೆ ಬೆಲೆ ಕೊಡೋದು ನಿಲ್ಲಿಸಿ, ಅಗತ್ಯಕ್ಕಿಂತ ಜಾಸ್ತಿ ಯೋಚ್ನೆ ಮಾಡ್ಬೇಡಿ, ಸೌಹಾರ್ದ, ಎಚ್ಚರಿಕೆಯಿಂದ ಹೆಜ್ಜೆ ಇಡೋ ವ್ಯಕ್ತಿ, ಸಹಾನುಭೂತಿ ಉಳ್ಳವರು.

ಅಕ್ಟೋಬರ್ : ನೀವು ಒಳ್ಳೆ ಮಾತುಗಾರರು, ಪ್ರೀತಿಸೋರನ್ನ ಬಹಳ ಪ್ರೀತಿ ಮಾಡ್ತೀರಾ ದ್ವೇಷ ಮಾಡೋರನ್ನ ಬಹಳ ದ್ವೇಷ ಮಾಡ್ತೀರಾ, ಒಳ್ಳೆಯ ನಿಯತ್ತಿನ ಮನುಷ್ಯರು ನೀವು, ಸ್ನೇಹಿತರು ಅಂದ್ರೆ ಬಹಳ ಇಷ್ಟ, ಸ್ನೇಹಿತರನ್ನ ಮಾಡ್ಕೊಳ್ಳೋದು ಅಂದ್ರುನು ತುಂಬ ಇಷ್ಟ, ತುಂಬ ಎಮೋಷನಲ್, ಕಲೆಗಳಲ್ಲಿ ಆಸ್ಕತಿ ಜಾಸ್ತಿ, ತುಂಬ ಸುತ್ತಾಡೋದು ಇಷ್ಟ, ಮಕ್ಕಳಂದ್ರೆ ಇಷ್ಟ

ನವೆಂಬರ್ : ನೀವು ಒಂತರ ಮಾಸ್ಟರ್ ಪೀಸ್ ಇದ್ದಂಗೆ, ಬುದ್ದಿವಂತರು, ವೇಗ ವಾದ ಯೋಚನೆ, ಮುಂದಿನ ಬಗ್ಗೆ ಬಹಳ ಯೋಚನೆ ಮಾಡೋ ಗುಣ ಇರುತ್ತೆ, ಬಹಳ ರಹಸ್ಯಗಳನ್ನ ನಿಮ್ಮಲ್ಲೇ ಇಟ್ಕೊಂಡಿರ್ತಿರಾ, ಹೆಚ್ಚಿಗೆ ಮಾತಾಡೋಕೆ ಇಷ್ಟ ಪಡೋಲ್ಲ, ಕೋಪ ಕಮ್ಮಿ ಬರುತ್ತೆ, ಅನ್ಕೊಂಡಿದ್ದನ್ನ ಪಟ್ಟು ಹಿಡಿದು ಸಾಧನೆ ಮಾಡ್ತೀರಾ, ಸ್ನೇಹಪರ, ಧೈರ್ಯವಂತರು.

ಡಿಸೆಂಬರ್ : ಬಹಳ ಪ್ರಾಕ್ಟಿಕಲ್ ಮನುಷ್ಯ, ತತ್ವ ಜ್ಞಾನದಲ್ಲಿ ಆಸಕ್ತಿ ಜಾಸ್ತಿ, ಸ್ಥಿರವಾದ ಜೀವನಶೈಲಿ ನಡೆಸ್ತೀರಾ, ಅದೃಷ್ಟವಂತರು ಪ್ರೀತಿ ನಿಮ್ಮನ್ನ ಹುಡುಕಿಕೊಂಡು ಬರುತ್ತೆ, ಹಣಕ್ಕೆ ಬಹಳ ಪ್ರಾಮುಖ್ಯತೆ ಕೊಡ್ತೀರಾ, ನೀವು ಜೀವನದಲ್ಲಿ ಯಶಸ್ಸು ಗಳಿಸಬೇಕು ಅಂತಿದ್ರೆ ಮೊದಲು ಯಾವುದು ಶಾಶ್ವತ ಅಲ್ಲ ಅಂತ ಅರ್ಥ ಮಾಡ್ಕೊಳ್ಳಿ, ನಿಷ್ಠಾವಂತ ಮತ್ತು ಉದಾರ, ದೇಶಭಕ್ತಿ, ಕ್ರೀಡೆಗಳಲ್ಲಿ ಆಸಕ್ತಿ ಹೊಂದಿರ್ತೀರಾ, ತಾಳ್ಮೆ, ಅವಸರದ, ಮಹತ್ವಾಕಾಂಕ್ಷೆ ಹೊಂದಿರೋ ಮನುಷ್ಯರು.ಕೃಪೆ ಎಸ್ ಎಸ್ ಟಿವಿ

LEAVE A REPLY

Please enter your comment!
Please enter your name here