ಕೆಲವರು ತೆಳ್ಳಗಿದ್ದನೆ ಯಾವಾಗ ದಪ್ಪ ಆಗೋದು ಅನ್ನೋ ಚಿಂತೆಯಲ್ಲಿರುತ್ತಾರೆ, ಆದ್ರೆ ಚಿಂತೆ ಮಾಡಿದ್ರೆ ದಪ್ಪ ಆಗಲು ಸಾಧ್ಯವಿಲ್ಲ ಹಾಗಾಗಿ ನಿಮಗಾಗಿ ಇಲ್ಲಿದೆ ಸುಲಭ ಹಾಗು ಸರಳ ವಿಧಾನ. ನೀವು ದಪ್ಪ ಆಗಲು ಇಷ್ಟ ಪಡುವುದಾದರೆ ಈ ಮನೆಮದ್ದು ಬಗ್ಗೆ ತಿಳಿದುಕೊಳ್ಳಿ ನಿಮಗೆ ಅನುಕೂಲವಾಗಬಹುದು.

ದೈನಂದಿನ ಕೆಲಸದ ಜೊತೆಗೆ ಈ ಚಿಕ್ಕ ಕೆಲಸಗಳನ್ನು ಮಾಡುವುದರಿಂದ ದೇಹಕ್ಕೆ ಹಾಗು ಮನಸ್ಸಿಗೆ ನೆಮ್ಮದಿ ಸಿಗಬಹುದು ಹೇಗೆ ಗೊತ್ತಾ.? ಕೆಲವೊಂದು ಆಹಾರಗಳು ದೇಹದ ಬೆಳವಣಿಗೆಗೆ ಹೆಚ್ಚು ಪೂರಕವಾಗಿರುತ್ತವೆ, ಅಷ್ಟೇ ಅಲ್ಲದೆ ದೇಹ ದಪ್ಪ ಆದರೆ ನಿಮ್ಮ ಚಿಂತೆಯು ನಿವಾರಣೆಯಾಗುವುದು.

ಈ ಚಿಕ್ಕ ಕೆಲಸವನ್ನು ಒಂದು ತಿಂಗಳವರೆಗೆ ಮಾಡಿದರೆ ನಿಮ್ಮ ತೆಳ್ಳಗಿನ ದೇಹವನ್ನು ದಪ್ಪ ಮಾಡಿಕೊಳ್ಳಬಹುದು, ಒಂದು ಕಪ್ ಕಡಲೆ ಬೀಜವನ್ನು ರಾತ್ರಿ ಎಲ್ಲ ನೆನಸಿಡಿ, ಮರು ದಿನ ಬೆಳಗ್ಗೆ ತಿನ್ನ ಬೇಕು. ಹಾಗು ಪ್ರತಿದಿನ ಕಾರ್ಜುರವನ್ನು ತಿನ್ನುವುದರ ಜೊತೆಗೆ ಹಸಿ ಕೊಬ್ಬರಿಯನ್ನು ತಿನ್ನಬೇಕು ಹೀಗೆ ತಿನ್ನುವುದರಿಂದ ದೇಹಕ್ಕೆ ಪ್ರೊಟೀನ್ ಅಂಶ ದೊರೆಯುತ್ತದೆ.

ಅಡುಗೆಗಳಲ್ಲಿ ವಿವಿಧ ಬಗೆಯ ಪಾಯಸವನ್ನು ಮಾಡಿ ಸವಿಯುತ್ತಿರ ಆದ್ರೆ, ಬಾರ್ಲಿ ಪಾಯಸವನ್ನು ಮಾಡಿ ತಿನ್ನುವುದರಿಂದ ದಪ್ಪ ಆಗಬಹುದಂತೆ. ಅಷ್ಟಕ್ಕೂ ಬಾರ್ಲಿ ಪಾಯಸ ಮಾಡುವುದು ಹೇಗೆ ಅನ್ನೋದನ್ನ ತಿಳಿಯೋಣ ಬನ್ನಿ…

ಮೊದಲನೆಯದಾಗಿ ಎರಡು ಚಮಚ ತುಪ್ಪದೊಂದಿಗೆ ಬಾರ್ಲಿಯನ್ನು ಚನ್ನಾಗಿ ಪ್ರೈ ಮಾಡಿಕೊಳ್ಳಬೇಕಾಗುತ್ತದೆ, ನಂತರ ಒಂದು ಪಾತ್ರೆಯಲ್ಲಿ ನೀರು ಹಾಕಿ ಬೇಯಿಸಬೇಕು. ಜೊತೆಗೆ ಕಾಲ್ ಲೀಟರ್ ಹಾಲು, ಹಾಗು ಸಕ್ಕರೆ ರುಚಿಗೆ ತಕ್ಕಸ್ಟು ಮಿಕ್ಸ್ ಮಾಡಬೇಕು. ಅದಕ್ಕೆ ಸ್ವಲ್ಪ ಒಣ ದ್ರಾಕ್ಷಿ, ಗೋಡಂಬಿ, ೨-೩ ಖರ್ಜುರವನ್ನು ತುಪ್ಪದಲ್ಲಿ ಹುರಿದಿರುವ ಬಾರ್ಲಿ ಮಿಶ್ರಣಕ್ಕೆ ಹಾಕಿ.

ಈ ತಯಾರಿಸಿದ ಪಾಯಸವನ್ನು ತಿನ್ನುವಾಗ ೨-೩ ಚಮಚ ತುಪ್ಪವನ್ನು ಹಾಕಿ ಪ್ರತಿದಿನ ತಿನ್ನುವುದರಿಂದ ಒಂದು ತಿಂಗಳವಳಗೆ ದಪ್ಪ ಆಗಬಹುದು.

LEAVE A REPLY

Please enter your comment!
Please enter your name here