ಹಾಗಲಕಾಯಿ ರುಚಿಗೆ ಕಹಿ ಅನಿಸಿದರು ಇದರಲ್ಲಿ ಹತ್ತಾರು ಉಪಯೋಗಕಾರಿ ಅಂಶಗಳನ್ನು ಕಾಣಬಹುದು. ಹಾಗಲಕಾಯಿಯ ವಿಟಮಿನ್ ಸಿ ಅಂಶವನ್ನು ಕಾಣಬಹುದು ಹಾಗು ಇದರಲ್ಲಿರುವ ಆರೋಗ್ಯಕಾರಿ ಲಾಭಗಳನ್ನು ತಿಳಿಯಲು ಮುಂದೆ ನೋಡಿ.

ಕೆಲವರು ವಯಸ್ಸಿಗೂ ಮುನ್ನವೇ ವಯಸ್ಸಾದವರಂತೆ ಕಾಣುತ್ತಾರೆ ಅಂತವರಿಗೆ ಯಂಗ್ ಕಾಣುವಂತೆ ಮಾಡುತ್ತದೆ ಹಾಗಲಕಾಯಿ. ಅಡುಗೆಯಲ್ಲಿ ಹಾಗಲಕಾಯಿಯನ್ನು ಬಳಸಿ ಸೇವನೆ ಮಾಡುವುದರಿಂದ ಸುಕ್ಕುಗಟ್ಟಿದ ಚರ್ಮ ಯಂಗಾಗಿ ಕಾಣುವಂತೆ ಮಾಡುವುದು.

ಅಷ್ಟೇ ಅಲ್ಲದೆ ಮಧುಮೇಹಿಗಳಿಗೆ ಅಂದರೆ ಸಕ್ಕರೆ ಕಾಯಿಲೆ ಇರುವವರಿಗೆ ಹಾಗಲಕಾಯಿ ಉಪಯೋಗಕಾರಿಯಾಗಿದೆ, ರಕ್ತದಲ್ಲಿನ ಸಕ್ಕರೆ ಅಂಶವನ್ನು ಹಾಗಲಕಾಯಿ ನಿಯಂತ್ರಿಸುತ್ತದೆ.
ಹಾಗಲಕಾಯಿಯಲ್ಲಿ ಅಧಿಕ ಪ್ರಮಾಣದ ಆ್ಯಂಟಿ ಆ್ಯಕ್ಸಿಡೆಂಟ್ ಇರುತ್ತದೆ. ಇದು ರಕ್ತದಲ್ಲಿರುವ ಟಾಕ್ಸಿನ್ ಅಂಶವನ್ನು ದೇಹದಿಂದ ಹೊರ ಹಾಕುತ್ತದೆ. ಇದರಿಂದ ರಕ್ತ ಕ್ಲೀನ್ ಆಗುತ್ತದೆ.

ಚರ್ಮಕ್ಕೆ ಸಂಬಂದಿಸಿದ ಸಮಸ್ಯೆಯನ್ನೂ ಕೂಡ ಹಾಗಲಕಾಯಿ ನಿವಾರಿಸುತ್ತದೆ, ಸ್ಕಿನ್ ಮೇಲಿನ ಕಲೆ ನಿವಾರಿಸಲು ಎರಡು ಚಮಚ ಹಾಗಲ ಜ್ಯೂಸ್, ಎರಡು ಚಮಚ ಕಿತ್ತಳೆ ಹಣ್ಣಿನ ರಸ ಮಿಕ್ಸ್ ಮಾಡಿ. ಮುಖಕ್ಕೆ ಹಚ್ಚಿ. ಅದು ಒಣಗಿದ ಮೇಲೆ ಮುಖವನ್ನು ತೊಳೆಯಿರಿ. ಇದರಿಂದ ಮುಖದ ಕಲೆ ನಿವಾರಣೆಯಾಗುತ್ತದೆ.

ಮುಖದಲ್ಲಿ ಮೊಡವೆ, ಕೆಂಪು ಚುಕ್ಕೆ ಇದ್ದರೆ ಹಾಗಲಕಾಯಿ ರಸವನ್ನು ಬೇರೆ ಹಣ್ಣಿನ ರಸದೊಂದಿಗೆ ಮಿಕ್ಸ್ ಮಾಡಿ ಸೇವಿಸಿ. ಇದರಲ್ಲಿರುವ ಆ್ಯಂಟಿ ಮೈಕ್ರೋಬಿಯಲ್ ಗುಣ ತ್ವಚಾ ಸಂಬಂಧಿ ಸಮಸ್ಯೆಗಳನ್ನು ದೂರಮಾಡುವಲ್ಲಿ ಉಪಯೋಗಕಾರಿಯಾಗಿದೆ.

LEAVE A REPLY

Please enter your comment!
Please enter your name here