ಹೌದು ಈ ಸಮಾಜದಲ್ಲಿ ಹಲವು ರೀತಿಯ ವಿಶೇಷ ಸನ್ನಿವೇಶಗಳು ನಡೆಯುತ್ತಿರುತ್ತವೆ ಆದ್ರೆ ಬಿಷ್ಣೋಯಿ ಸಮುದಾಯದ ಮಹಿಳೆಯೊಬ್ಬರು ಜಿಂಕೆ ಮರಿಗೆ ಸ್ತನ್ಯಪಾನ ಮಾಡಿಸಿದ ಫೋಟೋವೊಂದು ಸದ್ಯಕ್ಕೆ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಈ ಮಹಿಳೆಯ ಕೆಲಸವನ್ನು ಮೆಚ್ಚಿ ಐಎಫ್‍ಎಸ್ ಅಧಿಕಾರಿ ಪ್ರವೀಣ್ ಕಾಸ್ವಾನ್ ಅವರು ತಮ್ಮ ಟ್ವಿಟ್ಟರಿನಲ್ಲಿ ಮಹಿಳೆ ಜಿಂಕೆಮರಿಗೆ ಸ್ತನ್ಯಪಾನ ಮಾಡಿಸುವ ಫೋಟೋ ಹಾಕಿದ್ದಾರೆ. ಅಷ್ಟೇ ಅಲ್ಲದೆ “ಬಿಷ್ಣೋಯಿ ಸಮುದಾಯ ಈ ರೀತಿ ಪ್ರಾಣಿಗಳನ್ನು ನೋಡಿಕೊಳ್ಳುತ್ತೆ. ಈ ಪ್ರಾಣಿಗಳು ಅವರಿಗೆ ತಮ್ಮ ಮಕ್ಕಳಿಗಿಂತ ಕಡಿಮೆ ಇಲ್ಲ ಎಂಬುದಾಗಿ ಮೆಚ್ಚುಗೆಯ ಮಾತುಗಳನ್ನು ಬರೆದಿದ್ದರು.

ಐಪಿಎಸ್ ಅಧಿಕಾರಿ ಪ್ರವೀಣ್ ಕಾಸ್ವಾನ್ ಅವರು ಈ ಫೋಟೋವನ್ನು ಟ್ವೀಟ್ ಮಾಡುತ್ತಿದ್ದಂತೆ 1 ಸಾವಿರಕ್ಕೂ ಹೆಚ್ಚು ಬಾರಿ ಶೇರ್ ಆಗಿದೆ. ಅಲ್ಲದೆ 4 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಈ ಫೋಟೋಗೆ ಜನರು ಕಮೆಂಟ್ ಮಾಡುವ ಮೂಲಕ ಮಹಿಳೆಯ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಬಹಳಷ್ಟು ಜನ ಹಳ್ಳಿಯ ಪ್ರಕೃತಿ ಹಳ್ಳಿಯ ಜನರ ಮುಗ್ದತೆ ಪ್ರೀತಿ ವಾತ್ಸಲ್ಯದ ಬಗ್ಗೆ ಕಾಮೆಂಟ್ ಮೂಲಕ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here