ಬಿಲ್ವ ಪತ್ರೆ ಶಿವನಿಗೆ ಪ್ರಿಯವಾದದ್ದು ಇದನ್ನು ಪೂಜೆಗೆ ಅಷ್ಟೇ ಅಲ್ಲ ಹಲವು ಆಯುರ್ವೇದ ಚಿಕಿತ್ಸೆಗೆ ಬಳಸಲಾಗುತ್ತದೆ. ಇದರಲ್ಲಿ ಹಲವು ದೈಹಿಕ ಸಮಸ್ಯೆಗಳನ್ನು ಪರಿಹರಿಸುವ ಗುಣಗಳನ್ನು ಕಾಣಬಹುದಾಗಿದೆ. ಬಿಲ್ವ ಪತ್ರೆಯನ್ನು ಯಾವೆಲ್ಲ ಆರೋಗ್ಯಕಾರಿ ಅಂಶಗಳನ್ನು ಹೊಂದಿದೆ ಅನ್ನೋದನ್ನ ಮುಂದೆ ನೋಡಿ.

ತಲೆನೋವಿನ ಸಮಸ್ಯೆ ಕಾಡುತ್ತಿದ್ದರೆ ಇದಕ್ಕೆ ಪರಿಹಾರವಾಗಿ ಬಿಲ್ವದ ಮರದ ಒಣಬೇರನ್ನು ಅರೆದು ಹಣೆಗೆ ಲೇಪಿಸಬೇಕು. ಹೀಗೆ ಮಾಡುವುದರಿಂದ ತಲೆನೋವು ನಿವಾರಣೆ ಕಾಣಬಹುದು.

ಚರ್ಮದ ಸಮಸ್ಯೆಗಳು ನಿವಾರಣೆ: ದೇಹದ ಚರ್ಮದ ದುರ್ಗಂಧವನ್ನು ನಿವಾರಿಸಲು ತಾಜಾ ಬಿಲ್ವಪತ್ರೆ ರಸವನ್ನು ಪ್ರತಿದಿನ ಮೈಗೆ ಚೆನ್ನಾಗಿ ಲೇಪಿಸಿಕೊಂಡು ಅರ್ಧಗಂಟೆಯ ನಂತರ ಸ್ನಾನ ಮಾಡಬೇಕು. ದೇಹದ ಮೇಲೆ ಕುರುಗಳು ಇದ್ದಾಗ ಬಿಲ್ವ ವೃಕ್ಷದ ಬೇರನ್ನು ನಿಂಬೆರಸದಲ್ಲಿ ತೇಯ್ದು ಲೇಪಿಸುತ್ತಿರಬೇಕು..

ತಲೆಹೊಟ್ಟು ಹಾಗು ತಲೆಕೂದಲಿನ ಸಮಸ್ಯೆ: ಬಿಲ್ವಪತ್ರೆ ಕಾಯಿಯನ್ನು ಬೇಯಿಸಿ ನತರ ಅದರ ತಿರುಳನ್ನು ತೆಗೆದು ನುಣ್ಣ ಗೆ ಅರೆದು ತಲೆಗೆ ಲೇಪಿಸಿಕೊಡು ಅರ್ಧ ಗಂಟೆಯ ನಂತರ ತೊಳೆಯಬೇಕು. ಇದನ್ನು ದಿನಕ್ಕೊಮ್ಮೆಯಂತೆ ಹದಿನೈದು ದಿನಗಳ ಕಾಲ ಮಾಡುವುದರಿಂದ ತಲೆಹೊಟ್ಟಿನ ಸಮಸ್ಯೆ ನಿವಾರಣೆಯಾಗುತ್ತದೆ. ತಲೆ ಸ್ನಾನವನ್ನು ಮಾಡುವ ಅರ್ಧಗಂಟೆಯ ಮೊದಲು ಬಿಲ್ವಪತ್ರೆಯನ್ನು ಅರೆದು ತಲೆಗೆ ಲೇಪಿಸಿಕೊಳ್ಳಬೇಕು. ಇದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ. ಅಕಾಲ ನರೆಕೂದಲು ಸಮಸ್ಯೆ ನಿವಾರಣೆಯಾಗುತ್ತದೆ.

ಮೂಗಿನ ಸಮಸ್ಯೆಗಳು : ನೆಗಡಿ , ಇದ್ದಾಗ ಬಿಲ್ವಪತ್ರೆ ಎಲೆಯ ರಸವನ್ನು ಸ್ವಲ್ಪ ನೀರಿಗೆ ಬೆರೆಸಿ, ಈ ನೀರನ್ನು ಮೂಗಿಗೆ ಹನಿಸಬೇಕು.

ಗಾಯ,ಹುಣ್ಣು : ದೇಹದ ಮೇಲೆ ಗಾಯವಾಗಿ ಅದು ಕೊಳೆಯುವ ಸ್ಥಿತಿ ತಲಪಿದಾಗ (ಗ್ಯಾಂಗ್ರೀನ್ ) ಆ ಜಾಗದಲ್ಲಿ ಬಿಲ್ವಪತ್ರೆಯನ್ನು ಅರೆದು ಪೌಲ್ಟೀಸು ಕಟ್ಟಿದರೆ ಬೇಗ ಗುಣವಾಗುತ್ತದೆ. ಸುಟ್ಟ ಗಾಯದ ಮೇಲೆ ಬಿಲ್ವಪತ್ರೆ ರಸವನ್ನು ಲೇಪಿಸುತ್ತಿದ್ದರೆ ಬೇಗ ಮಾಯುತ್ತದೆ.

LEAVE A REPLY

Please enter your comment!
Please enter your name here