ಪ್ರತಿ ಪ್ರೇಮಿಗಳಿಗೂ ಅವರವರ ಸಂಗಾತಿ ಎಂದರೆ ಪ್ರಪಂಚನೇ, ಪ್ರತಿ ಪ್ರೇಮಿಗಳು ತನ್ನ ಸಂಗಾತಿಯೊಂದಿಗೆ ಹೇಗೇಗೋ ಇರಬೇಕು ಎಂದು ಬಯಸುತ್ತಾರೆ, ಹೀಗಿರುವಾಗ ಈ ಪ್ರೇಮಿಗಳ ನಡುವೆ ಆ ಸ್ಪರ್ಶದ ಅನುಭವ ಆಗಿರುತ್ತದೆ ಅನ್ನಬಹುದು. ಅಂತಹ ಒಂದು ಸ್ಫರ್ಶದಲ್ಲಿ ಎಷ್ಟೆಲ್ಲ ಲಾಭವಿದೆ ಅನ್ನೋದನ್ನ ಒಂದು ಸಂಶೋಧನೆಯ ಪ್ರಕಾರ ತಿಳಿಯಲಾಗಿದೆ.

ಆ ಒಂದು ಸ್ಪರ್ಶ ಬರಿ ಪ್ರೀತಿಗೆ ಹಾಗೂ ಸುಖಕ್ಕೆ ಮಾತ್ರವಲ್ಲ, ದೇಹದ ಆರೋಗ್ಯಕ್ಕೆ ಉತ್ತಮ ಲಾಭವನ್ನು ಕೊಡುತ್ತದೆ ಅನ್ನೋದನ್ನ ವಿಜ್ಞಾನಿಗಳು ತಿಳಿಸಿದ್ದಾರೆ. ಹೌದು ನೋವು ಮತ್ತು ಸ್ಪರ್ಶಕ್ಕೆ ಯಾವ ರೀತಿ ಸಂಬಂಧವಿದೆ ಎಂಬುದನ್ನು ವಿಜ್ಞಾನಿಗಳು ಅಧ್ಯಯನ ನಡೆಸಿದ್ದಾರೆ. ಪತ್ನಿಯ ಹೆರಿಗೆ ನೋವನ್ನು ಗಂಡನ ಒಂದು ಸ್ಪರ್ಷ ಕಡಿಮೆ ಮಾಡಬಲ್ಲದು. ಸಂಗಾತಿಯ ಸ್ಪರ್ಷ ಒಂದು ರೀತಿಯಲ್ಲಿ ನೋವು ನಿವಾರಕವಿದ್ದಂತೆ. ಸಿಂಕ್ರೊನೈಸೇಶನ್ ಇಂದಲೇ ಇದೆಲ್ಲವೂ ಸಾಧ್ಯವಾಗುತ್ತಿದೆ ಅನ್ನೋದು ವಿಜ್ಞಾನಿಗಳ ಅಭಿಪ್ರಾಯ.

ಅಷ್ಟೇ ಅಲ್ಲದೆ ಸಂಗಾತಿ ಸ್ಪರ್ಷಿಸಿದಾಗ ಹೃದಯ ಬಡಿತ ಮತ್ತು ಉಸಿರಾಟ ಹೊಂದಾಣಿಕೆಯಾಗುತ್ತದೆ, ಇದರಿಂದ ನೋವು ಕೂಡ ಕ್ಷೀಣಿಸುತ್ತದೆ. ಇತ್ತೀಚೆಗೆ ನಡೆಸಲಾದ ಸಂಶೋಧನೆಯೊಂದರಲ್ಲಿ ಈ ವಿಷಯ ಬಹಿರಂಗವಾಗಿದೆ. ಇದನ್ನು ಅಂತರ್ ವ್ಯಕ್ತೀಯ ಸಿಂಕ್ರೊನೈಸೇಶನ್ ಅಂತಾ ವಿಜ್ಞಾನಿಗಳು ಕರೆಯುತ್ತಾರೆ. ಸಂಗಾತಿಗಳು ಜೊತೆಯಾಗಿ ಹೋಗುತ್ತಿರುವಾಗ ಪರಸ್ಪರರ ನಡಿಗೆ ಕೂಡ ಅವರಿಗೆ ಅರಿವಿಲ್ಲದಂತೆ ಸಿಂಕ್ ಆಗುತ್ತದೆಯಂತೆ.

ಕೆಲವೊಂದು ಭಾವನಾತ್ಮಕ ಸಿನಿಮಾ ವೀಕ್ಷಿಸುವಾಗ ಅಥವಾ ಜೊತೆಯಾಗಿ ಹಾಡುವಾಗ ಅವರ ಹೃದಯ ಬಡಿತ ಮತ್ತು ಉಸಿರಾಟದ ಲಯ ಪರಸ್ಪರ ಸಿಂಕ್ ಆಗಿರುತ್ತದೆ. ರೊಮ್ಯಾಂಟಿಕ್ ಕಪಲ್ ಜೊತೆಯಲ್ಲಿದ್ದರೆ ಸಾಕು, ಅವರ ಹೃದಯ ಮತ್ತು ಮೆದುಳಿನ ಮಾದರಿ ಸಿಂಕ್ ಆಗುತ್ತವೆ.

LEAVE A REPLY

Please enter your comment!
Please enter your name here