ಕುಂಬಳಕಾಯಿ ಮಾತ್ರವಲ್ಲ ದರ ಬೀಜವು ಕೂಡ ಹಲವು ಉಪಯೋಗಕಾರಿ ಅಂಶಗಳನ್ನು ಹೊಂದಿದೆ. ಇದರ ಬೀಜವು ಕೂಡ ಮನುಷ್ಯನ ಈ ಸಾಮಾನ್ಯ ಸಮಸ್ಯೆಗಳಿಗೆ ಹೆಚ್ಚು ಸಹಕಾರಿಯಾಗಿದೆ.

ಮುಖದ ಸೌಂದರ್ಯವನ್ನು ಕುಂಬಳಕಾಯಿ ಬೀಜ ವೃದ್ಧಿಸುತ್ತದೆ ಹೇಗೆ ಗೋತ್ತಾ.?
ತ್ವಚೆಯಲ್ಲಿ ಕೊಲೆಜಿನ್​ ಉತ್ಪತ್ತಿಯನ್ನು ಹೆಚ್ಚಿಸುವ ಕಾರಣಕ್ಕೆ ಮುಖದಲ್ಲಿನ ಸುಕ್ಕುಗಟ್ಟಿದ ಚರ್ಮ ಹಾಗು ನೆರಿಗೆಗಳು ನಿವಾರಣೆಯಾಗುತ್ತದೆ.

ಈ ಬೀಜದಲ್ಲಿ ವಿಟಮಿನ್ ಅಂಶ ಇರುವ ಕಾರಣದಿಂದ ಮುಖದ ಕಾಂತಿಯನ್ನು ಹೆಚ್ಚಿಸಬಲ್ಲದು, ಈ ಬೀಜವನ್ನು ಪೇಸ್ಟ್ ರೀತಿ ಮಾಡಿಕೊಂಡು ೬-೭ ದಿನಕ್ಕೊಮ್ಮೆ ಬಾರಿಯಾದರೂ ಹಚ್ಚುವುದರಿಂದ ಆ್ಯಂಟಿಆಕ್ಸಿಡೆಂಟ್​ಗಳು ಮುಖದ ಮೇಲಿನ ಕಲೆಯನ್ನು ನಿವಾರಣೆ ಮಾಡಿಕೊಳ್ಳುವುದರ ಜೊತೆಗೆ ಮುಖದ ಸೌಂದರ್ಯವನ್ನು ವೃದ್ಧಿಸಿಕೊಳ್ಳಬಹುದಾಗಿದೆ.

ಕೂದಲಿನ ಬೆಳವಣಿಗೆಗೆ ಹೆಚ್ಚು ಸಹಕಾರಿಯಾಗಿದೆ
ಬಿಳಿಕೂದಲನ್ನು ನಿವಾರಿಸುವ ಜೊತೆಗೆ ಕೂದಲನ್ನು ದಟ್ಟವಾಗಿ ಬೆಳೆಯುವಂತೆ ಮಾಡುತ್ತದೆ, ಕುಂಬಳಕಾಯಿ ಬೀಜದಲ್ಲಿರುವ ಮಿನರಲ್ಸ್​ಗಳು ಮೆಲೆನಿನ್​ ಉತ್ಪತ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ಕೂದಲು ತನ್ನ ನೈಸರ್ಗಿಕ ಕಪ್ಪು ಬಣ್ಣವನ್ನು ಹಿಡಿದಿಟ್ಟುಕೊಳ್ಳಲು ಸಹಕಾರಿಯಾಗುತ್ತದೆ.

LEAVE A REPLY

Please enter your comment!
Please enter your name here