ಹೌದು ನಮ್ಮ ದೇಹದ ಆರೋಗ್ಯಕ್ಕೆ ತಣ್ಣೀರು ತುಂಬಾನೇ ಸಹಕಾರಿಯಾಗಿದೆ. ತಣ್ಣೀರು ಸ್ನಾನ ಮಾಡುವುದು ದೇಹಕ್ಕೆ ಉತ್ತಮ್ಮ. ಪ್ರತಿ ದಿನ ತಣ್ಣೀರ ಸ್ನಾನ ಮಾಡಿದರೆ ಎಷ್ಟೆಲ್ಲ ಪ್ರಯೋಜನವಿದೇ ಅನ್ನೋದನ್ನ ತಿಳಿದುಕೊಳ್ಳೋಣ …

ಬಹಳಷ್ಟು ಮಂದಿ ತಣ್ಣೀರು ಸ್ನಾನ ಮಾಡೋಕೆ ಇಷ್ಟ ಪಡೋದಿಲ್ಲ ಆದ್ರೆ ಇದರ ಉಪಯೋಗವನ್ನು ತಿಳಿದ ಮೇಲೆ ತಣ್ಣೀರ ಸ್ನಾನ ಮಾಡದೇ ಇರೋದಿಲ್ಲ ಅನ್ಸತ್ತೆ..!

ತಣ್ಣೀರ ಸ್ನಾನದ ಬಹುಪಯೋಗಗಳು .!!

ತಣ್ಣೀರ ಸ್ನಾನ ಮಾಡಿದರೆ ಯಾವುದೇ ತರಹದ ಚರ್ಮ ರೋಗಗಳು ಬರುವುದಿಲ್ಲ ಅಷ್ಟೇ ಅಲ್ಲದೆ ದೇಹದ ಆಯಾಸ ಕಡಿಮೆಯಾಗಿ ಉತ್ತಮ ನಿದ್ರೆ ನಿಮ್ಮದಾಗುತ್ತದೆ.

ತಣ್ಣೀರ ಸ್ನಾನ ಮಾಡಿದರೆ ಹಸಿವು ಜಾಸ್ತಿ ಆಗುತ್ತದೆ ಇದರಿಂದ ಊಟವನ್ನು ಹೆಚ್ಚಾಗಿ ಮಾಡಬಹುದು ಇದರಿಂದ ದೇಹದ ಬೆಳವಣಿಗೆಗೆ ಸಹಕಾರಿಯಾಗುತ್ತದೆ.

ತಣ್ಣೀರಿನಲ್ಲಿ ಸ್ನಾನ ಮಾಡಿದರೆ ಯಾವುದೇ ಅಲರ್ಜಿ ಸಮಸ್ಯೆ ಕಾಡುವುದಿಲ್ಲ .

ದೇಹದಲ್ಲಿ ಯಾವುದೇ ತರಹದ ಗಾಯಗಳು ಆಗಿದ್ದರೆ ತಣ್ಣೀರಲ್ಲಿ ತೊಳೆಯುವುದು ಉತ್ತಮ ಯಾಕೆಂದರೆ ಬಿಸಿ ನೀರಿನಲ್ಲಿ ತೊಳೆಯುವುದರಿಂದ ಉರಿ ಹೆಚ್ಚಾಗುತ್ತದೆ.

ತಣ್ಣೀರಿನಿಂದ ಸ್ನಾನ ಮಾಡಿದರೆ ನಿಮ್ಮ ತ್ವಚೆಯನ್ನು ಹೆಚ್ಚಿಸಿ ಕೊಳ್ಳಬಹುದು ಆಗೆಯೇ ಹೆಚ್ಚು ಬೆವರುತ್ತಿದ್ದರೆ ತಣ್ಣೀರ ಸ್ನಾಮಾಡುವುದು ಸೂಕ್ತ.

ರಕ್ತ ಪರಿಚಲನೆ ಸಮಸ್ಯೆ ಇರುವವರು ತಣ್ಣೀರ ಸ್ನಾನವನ್ನು ಪ್ರತಿದಿನ ಮಾಡುವುದು ಒಳ್ಳೆಯದು..
ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ದೇಹಕ್ಕೆ ಯಾವುದೇ ರೀತಿಯ ವೈರಸ್ ಗಳು ತಲುಪದಂತೆ ತಡೆಗಟ್ಟುತ್ತದೆ.

ಇನ್ನು ಹಲವು ಆರೋಗ್ಯಕಾರಿ ಲಾಭಗಳನ್ನು ಈ ತಣ್ಣೀರು ಹೊಂದಿರುವ ಕಾರಣ ತಣ್ಣೀರಲ್ಲಿ ಸ್ನಾನ ಮಾಡುವುದು ಒಳ್ಳೆಯದು…

LEAVE A REPLY

Please enter your comment!
Please enter your name here