ಳ್ಳುಳ್ಳಿಯನ್ನ ನಾವು ತಿನ್ನುವ ಆಹಾರದಲ್ಲಿ ಬಳಸುವುದರಿಂದ ಆಹಾರದ ರುಚಿ ಇನ್ನಷ್ಟು ಹೆಚ್ಚುವುದರ ಜೊತೆಗೆ ಆರೋಗ್ಯಕ್ಕೂ ಬಹಳ ಉಪಯುಕ್ತವಾಗುತ್ತದೆ. ಹಾಗಾದರೆ ಈ ಚಿಕ್ಕ ಬೆಳ್ಳುಳ್ಳಿಯಿಂದ ಯಾವೆಲ್ಲ ಆರೋಗ್ಯವನ್ನ ನಾವು ಪಡೆದುಕೊಳ್ಳ ಬಹುದು ಎಂಬುದು ಇಲ್ಲಿದೆ ನೋಡಿ……..

* ಪ್ರತಿದಿನ ಬೆಳಗಿನ ಉಪಹಾರದ ಮುನ್ನ ಬೆಳ್ಳುಳ್ಳಿಯನ್ನ ತಿಂದರೆ ಅದು ಆಂಟಿಬಯೋಟಿಕ್ ಆಗಿ ಕೆಲಸ ಮಾಡುತ್ತದೆ.

* ಬೆಳ್ಳುಳ್ಳಿ ಅಧಿಕ ರಕ್ತದೊತ್ತಡವನ್ನ ಕಡಿಮೆಮಾಡುತ್ತದೆ. ಹಾಗೂ ಹೊಟ್ಟೆಯಲ್ಲಿನ ಅನಗತ್ಯ ಬ್ಯಾಕ್ಟಿರಿಯಾಗಳನ್ನ ಹೋಗಲಾಡಿಸುತ್ತದೆ.

* ಖಾಲಿಹೊಟ್ಟೆಯಲ್ಲಿ ಬೆಳ್ಳುಳ್ಳಿಯನ್ನ ಸೇವನಾ ಮಾಡುವುದರಿಂದ ಕರುಳು ಸಕ್ರಿಯವಾಗಿ ಕೆಲಸ ನಿರ್ವಹಿಸುತ್ತದೆ ಹಾಗೂ ಹಸಿವು ಹೆಚ್ಚಾಗುತ್ತದೆ.

* ಅಸ್ತಮಾ ಹಾಗೂ ನ್ಯುಮೋನಿಯಾ ಕಾಯಿಲೆಗಳಿಗೆ ಬೆಳ್ಳುಳ್ಳಿ ರಾಮಬಾಣವಾಗಿ ಕೆಲಸ ಮಾಡುತ್ತದೆ, ಒಂದು ಬಗೆಯ ದಿವ್ಯ ಔಷಧಿ ಎಂದರೆ ಖಂಡಿತ ತಪ್ಪಾಗಲಾರದು.

* ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ, ಉಸಿರಾಟದ ಸಂಬಂಧಿ ಕಾಯಿಲೆಗಳನ್ನ ಹೋಗಲಾಡಿಸುತ್ತದೆ. ಇದು ಹೃದಯ ಸಂಬಂಧಿ ಕಾಯಿಲೆಗಳಿಗೆ ಉತ್ತಮ ಔಷಧ.

* ಹೊಟ್ಟೆಗೆ ಸಂಬಂಧಿಸಿದ ಅನೇಕ ಕಾಯಿಲೆಗಳಿಂದ ಬೆಳ್ಳುಳಿ ದೂರವಿರಿಸುತ್ತದೆ.

* ಬೆಳ್ಳುಳ್ಳಿಯ ಸೇವನೆಯಿಂದ ತ್ವಚೆಯ ಅರೋಗ್ಯ ಉತ್ತಮವಾಗಿರುತ್ತದೆ. ಇದು ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯಲ್ಲಿ ಹೆಚ್ಚಿಸುತ್ತದೆ.

* ಬೆಳ್ಳುಳ್ಳಿ ಸೇವನೆಯಿಂದ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ. ಮೊಡವೆ ಸಮಸ್ಯೆ ದೂರವಾಗುತ್ತವೆ. ಉದರ ಸಂಬಂದಿ ಕಾಯಿಲೆಗಳು ದೂರವಾಗುತ್ತವೆ.

LEAVE A REPLY

Please enter your comment!
Please enter your name here