ಬೀಟ್ ರೂಟ್ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ ಬಹಳಷ್ಟು ಜನ ಇದನ್ನು ಹಸಿಯಾಗಿ ತಿನ್ನಲು ಬಯಸುತ್ತಾರೆ, ಇದರಲ್ಲಿ ಒಳ್ಳೆಯ ಆರೋಗ್ಯಕಾರಿ ಲಾಭಗಳಿದ್ದು ದೇಹಕ್ಕೆ ಉತ್ತಮ ಪೋಷಕಾಂಶಗಳನ್ನು ಒದಗಿಸಿಕೊಡುತ್ತದೆ.

ಅಡುಗೆಗೆ ಬೀಟ್ ರೂಟ್ ಬಳಸುವುದರಿಂದ ದೇಹದ ಅರೋಗ್ಯ ವೃದ್ಧಿಯಾಗುತ್ತದೆ, ಅಷ್ಟೇ ಅಲ್ದೆ ಬೀಟ್ ರೂಟ್ ಬಳಸಿ ಚಹಾ ಮಾಡಿ ಸೇವನೆ ಮಾಡುವುದರಿಂದ ಎಷ್ಟೊಂದು ಪ್ರಯೋಜನವಿದೆ ಅನ್ನೋದನ್ನ ಮುಂದೆ ನೋಡಿ.

ಬೀಟ್ ರೊಟ್ ಗರ್ಭಿಣಿ ಯಾರಿಗೆ ಹಾಗು ಮಕ್ಕಳಿಗೆ ಹೆಚ್ಚು ಪೂರಕತೆಯನ್ನು ನೀಡುತ್ತದೆ ಹೌದು ವೈದ್ಯರೇ ಹೇಳುವ ಹಾಗೆ ಇದರ ಸೇವನೆ ಆರೋಗ್ಯವನ್ನು ವೃದ್ಧಿ ಮಾಡುತ್ತದೆ ಎಂಬುದಾಗಿ ಹೌದು ಪ್ರೆಗ್ನೆನ್ಸಿ ಸಮಯದಲ್ಲಿ ಬೀಟ್‌ರೂಟ್ ಚಹಾ ಸೇವಿಸಿದರೆ ತಾಯಿ-ಮಗುವಿನ ಹಿಮೋಗ್ಲೋಬಿನ್ ಹೆಚ್ಚಿಸುತ್ತದೆ. ಅಲ್ಲದೇ ಕೆಂಪು ರಕ್ತ ಕಣ ಕಡಿಮೆಯಾಗದಂತೆ ನೋಡಿಕೊಳ್ಳುತ್ತದೆ.

ದೇಹದಲ್ಲಿ ಪದೇ ಪದೇ ಸುಸ್ತು ಆಗುತ್ತಿದೆ ಔಷದಿ ಮಾತ್ರೆಯ ಬದಲು ಈ ನೈಸರ್ಗಿಕ ಚಹಾ ಮಾಡಿ ಸೇವಿಸಿ ಪರಿಹಾರವಿದೆ ಹಾಗೂ ಇದರ ಸೇವನೆಯಿಂದ ದೇಹದಲ್ಲಿ ಶುಗರ್ ಲೆವೆಲ್ ಕಡಿಮೆ ಮಾಡುತ್ತದೆ.

ಬೀಟ್ ರೂಟ್ ಚಹಾ ಮಾಡೋದು ಹೇಗೆ.?
ಮೊದಲನೆಯದಾಗಿ ಬೀಟ್ ರೂಟ್ ಸಿಪ್ಪೆಗಳನ್ನು ತೆಗೆದು ಚನ್ನಾಗಿ ಸ್ವಚ್ಛತೆ ಮಾಡಿ ಅದನ್ನು ಒಂದು ಬೌಲ್‌‌ನಲ್ಲಿ ನೀರು ಹಾಕಿ ನೆನೆಸಿಡಿ. ನಂತರ ಅದಕ್ಕೆ ಸ್ವಲ್ಪ ಶುಂಠಿ ಹಾಕಿ ಕುದಿಸಿ. ಕುದಿಸಿದ ನಂತರ ಅದನ್ನು ಸೋಸಿ ರುಚಿಕೆ ತಕ್ಕಸ್ಟು ಜೇನು ಮತ್ತು ನಿಂಬೆ ರಸ ಪುದಿನ ಅಥವಾ ತುಳಸಿ ಹಾಕಿದರೆ ನೀವು ಸೇವಿಸಲು ಬಯಸುವ ಚಹಾ ಸಿದ್ದ ಇರುತ್ತದೆ.

LEAVE A REPLY

Please enter your comment!
Please enter your name here