ಎಲ್ಲರು ಬಯಸುವುದು ತಾವು ಸುಂದರವಾಗಿ ಕಾಣಬೇಕು ಎಂದು, ಆದರೆ ಸದಾ ಯುವತಿಯರಂತೆ ಕಾಣಲು ಸಾಧ್ಯನಾ…? ಸಾಧ್ಯ ಆದರೆ ಇದಕ್ಕಾಗಿ ನಾವು ಇತ್ತಿಚ್ಚಿನ ರಾಸಾಯನಿಕಗಳನ್ನ ಬಳಸ ಬಾರದು. ಇದಕ್ಕೆ ಮಾತ್ರವಲ್ಲ ಪುರುಷ ಮಹಿಳೆ ಇಬ್ಬರು ಸಹ ತ್ವಚೆಗೆ ಹೆಚ್ಚಾಗಿ ರಾಸಾಯನಿಕಗಳನ್ನ ಬಳಸ ಬಾರದು ಇದರಿಂದ ತಾತ್ಕಾಲಿಕವಾಗಿ ಮಾತ್ರ ಅಂದ ಸಿಗುತ್ತದೆ, ಆದರೆ ನಂತರದ ಪರಿಣಾಮ ನೀವು ಊಹಿಸಲು ಸಾಧ್ಯವಾಗದಷ್ಟು ಘೋರವಾಗಿರುತ್ತದೆ. ಇಂತಹ ನೆರಿಗೆಗಳನ್ನ ದೂರಮಾಡಲು ಮನೆಯಲ್ಲಿಯೇ ಇದೆ ಪರಿಹಾರ.

ಮೊಟ್ಟೆಯ ಬಿಳಿ ಭಾಗವನ್ನು ಕಣ್ಣಿನಕೆಳಭಾಗದಲ್ಲಿ ಹಚ್ಚುವುದರಿಂದ ಕಣ್ಣಿನ ಕೆಳಗಡೆ ಆಗಿರುವ ನೆರಿಗೆಗಳು ಕಡಿಮೆಯಾಗುತ್ತವೆ.

ಹರಳೆಣ್ಣೆಯನ್ನು ಮುಖ ಹಾಗೂ ಕುತ್ತಿಗೆಯ ಭಾಗಕ್ಕೆ ಹಚ್ಚಿ ನಿಧಾನವಾಗಿ ಮಸಾಜ್ ಮಾಡುವುದರಿಂದ ನೆರಿಗೆಗಳು ಕಡಿಮೆಯಾಗುತ್ತವೆ.

ಕಬ್ಬಿನ ರಸ ಮತ್ತು ಅರಿಶಿನವನ್ನು ಸೇರಿಸಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚುವುದರಿಂದ ಮುಖದ ಮೇಲಿನ ನೆರಿಗೆಗಳು ಕಡಿಮೆಯಾಗುತ್ತವೆ.

ಕೇವಲ ಸುಲಭವಾಗಿ ಸಿಗುವ ತೆಂಗಿನೆಣ್ಣೆಯನ್ನು ಕೆಲವು ದಿನಗಳ ಕಾಲ ರಾತ್ರಿ ಮಲಗುವ ಮುನ್ನ ಮುಖಕ್ಕೆ ಹಚ್ಚಿ ಮಲಗುವುದರಿಂದ ನೆರಿಗೆಗಳು ಕಡಿಮೆಯಾಗುತ್ತವೆ. ಅಷ್ಟೇ ಅಲ್ಲದೆ ಪೈನಾಪಲ್ ಹಣ್ಣನ್ನು ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ ಸ್ವಲ್ಪ ಸಮಯದ ನಂತರ ಮುಖತೊಳೆದರೆ ನೆರಿಗೆಗಳು ಕಡಿಮೆಯಾಗುತ್ತವೆ.

ಎರಡು ಚಮಚ ಮೊಸರಿಗೆ ಒಂದು ಚಮಚ ಜೇನುತುಪ್ಪ, ಒಂದು ಚಮಚ ನಿಂಬೆ ರಸ ಮತ್ತು ಮೂರೂ ವಿಟಮಿನ್ ಇ ಕ್ಯಾಪ್ಸುಲ್ಸ್ ಹಾಕಿ ಚನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 10 ನಿಮಿಷಗಳ ಬಳಿಕ ಮುಖ ತೊಳೆದರೆ ಕಾಲ ಕ್ರಮೇಣ ನೆರಿಗೆಗಳು ಕಡಿಮೆಯಾಗುತ್ತವೆ.

LEAVE A REPLY

Please enter your comment!
Please enter your name here