ಹೌದು ಸುಮಾರು ಎರಡು ವರ್ಷಗಳಿಂದ ಸರ್ಕಾರೀ ಶಾಲಾ ಮಕ್ಕಳ ಬಿಸಿ ಊಟಕ್ಕೆ ಅನುಕೂಲವಾಗಲಿ ಅನ್ನೋ ಕಾರಣಕ್ಕೆ ಶರೀಫ್ ಅನ್ನೋ ಯುವಕ ಉಚಿತವಾಗಿ ತರಕಾರಿಗಳನ್ನು ನೀಡುತ್ತಿದ್ದಾರೆ. ಇವರು ವೃತ್ತಿಯಲ್ಲಿ ತರಕಾರಿ ವ್ಯಾಪಾರಿಯಾಗಿದ್ದು ಮಕ್ಕಳ ಅನುಕೂಲಕ್ಕಾಗಿ ಸಮಾಜಕ್ಕೆ ಮಾದರಿಯಾಗುವಂತ ಕೆಲಸವನ್ನು ಮಾಡುತ್ತ ಬರುತ್ತಿದ್ದಾರೆ.

ಬಂಟ್ವಾಳ ಇಲ್ಲಿನ ಸರ್ಕಾರೀ ಶಾಲೆಯಲ್ಲಿ 130 ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳಿದ್ದು ಇವರ ಬಿಸಿ ಊಟಕ್ಕೆ ಉಚಿತವಾಗಿ ತರಕಾರಿಗಳನ್ನು ನೀಡುತ್ತಿದ್ದಾರೆ. ಮೆಲ್ಕಾರ್‌ನ ಚಂದ್ರಿಕಾ ವೆಜಿಟೇಬಲ್ಸ್‌ನ ಮಾಲೀಕ ಮಹಮ್ಮದ್‌ ಶರೀಫ್‌. ಬಂಟ್ವಾಳ ತಾಲೂಕಿನ ಮಜಿ ವೀರಕಂಭದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪೂರ್ವ ಪ್ರಾಥಮಿಕದಿಂದ ಏಳನೇ ತರಗತಿಯವರೆಗೆ ಕಲಿಯುತ್ತಿರುವ ಒಟ್ಟು ೧೩೦ ಕ್ಕೂ ಹೆಚ್ಚು ಮಕ್ಕಳ ಬಿಸಿ ಊಟಕ್ಕೆ ಸೌತೆ ಕಾಯಿ, ಬಿಟ್ ರೊಟ್, ಆಲೂಗಡ್ಡೆ, ಬಾದ್ನೇಕಾಯಿ ಹೀಗೆ ಹಲವು ತರಕಾರಿಗಳನ್ನು ಉಚಿತವಾಗಿ ನೀಡುತ್ತಿದ್ದಾರೆ.

ಇವರ ಈ ಸಾಮಜಿಕ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕತ ಪಡಿಸಲಾಗುತ್ತಿದೆ, ಅದೇನೇ ಇರಲಿ ಯಾವುದೇ ಸ್ವಾರ್ಥವಿಲ್ಲದೆ ಸಮಾಜಸೇವೆ ಮಾಡುವುದರ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ.

LEAVE A REPLY

Please enter your comment!
Please enter your name here