ಸಾಮಾನ್ಯವಾಗಿ ಬಾಳೆಲೆ ಊಟ ಹಿಂದಿನ ಕಾಲದಿಂದಲೂ ಬಳಕೆಯಲ್ಲಿದೆ ಹಾಗೂ ಪ್ರತಿಯೊಬ್ಬರಿಗೂ ಸಾಮಾನ್ಯವಾಗಿ ದೊರೆಯುವ ಬಾಳೆಲೆ ಉತ್ತಮ ಆರೋಗ್ಯವನ್ನು ವೃದ್ಧಿಸುತ್ತದೆ. ಮಾಡುವೆ ಸಮಾರಂಭಗಳಲ್ಲಿ, ಹಬ್ಬ ಹರಿದಿನಗಳಲ್ಲಿ ಹಾಗೂ ಇತ್ತೀಚಿನ ದಿನಗಳಲ್ಲಿ ಹೋಟಲ್ ರೆಸ್ಟೋರೆಂಟ್ಗಳಲ್ಲಿ ಸಹ ಬಾಳೆಲೆ ಉಪಯೋಗಕಾರಿಯಾಗಿದೆ.

ಚಿನ್ನದ ತಟ್ಟೆಗಿಂತ ಬೆಲ್ಲೆಲಿ ಊಟ ಮಾಡೋದು ಬೆಸ್ಟ್ ಅನ್ನೋದು ಯಾಕೆ ಅನ್ನೋದನ್ನ ತಿಳಿಸುತ್ತೇವೆ ಮುಂದೆ ನೋಡಿ. ಮನುಷ್ಯನಿಗೆ ಅರೋಗ್ಯ ಅತಿ ಹೆಚ್ಚು ಅವಶ್ಯಕ ಹಾಗಾಗಿ ಬೇಲಿ ಊಟ ಮಾಡುವುದರಿಂದ ದೇಹಕ್ಕೆ ಹೆಚ್ಚಿನ ಅರೋಗ್ಯ ದೊರೆಯುತ್ತದೆ ಹಾಗೂ ನಾನಾ ತರಹದ ರೋಗಗಳನ್ನು ಕಡಿವಾಣ ಹಾಗುವುದು ಬಾಳೆಲೆ ಊಟ.

ಬಾಳೆಲೆಗಳಲ್ಲಿ ಇಜಿಸಿಜಿಯಂಥ ಪಾಲಿಫಿನಾಲ್ಸ್ ಹೇರಳವಾಗಿರುತ್ತವೆ. ಈ ಪಾಲಿಫಿನಾಲ್‌ಗಳು ನ್ಯಾಚುರಲ್ ಆ್ಯಂಟಿ ಆಕ್ಸಿಡೆಂಟ್ಸ್ ಆಗಿದ್ದು, ಕ್ಯಾನ್ಸರ್‌ನಂಥ ಕಾಯಿಲೆ ಹರಡುವ ಕೋಶಗಳ ವಿರುದ್ಧ ಅದು ಹೋರಾಡುತ್ತದೆ. ಈ ಎಲೆಯ ಮೇಲೆ ಆಹಾರವನ್ನು ಬಡಿಸಿದಾಗ, ಆಹಾರವು ಈ ಆ್ಯಂಟಿ ಆಕ್ಸಿಡೆಂಟ್‌ಗಳನ್ನು ಹೀರಿಕೊಂಡು ಅದನ್ನು ಆಹಾರ ಸೇವಿಸುವ ನಮ್ಮ ದೇಹಕ್ಕೆ ಒದಗಿಸುತ್ತವೆ.

ಅಷ್ಟೇ ಅಲ್ಲದೆ, ಬಾಳೆಲೆಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣವಿದ್ದು, ಅವುಗಳ ಮೇಲಿನ ವ್ಯಾಕ್ಸ್ ಕೋಟಿಂಗ್, ಎಲೆ ಕೊಳಕಾಗದಂತೆ ನೋಡಿಕೊಳ್ಳುತ್ತದೆ. ಇದು ವಾಟರ್ ಪ್ರೂಫ್ ಕೂಡಾ. ಜೊತೆಗೆ, ಕೀಟಾಣುಗಳನ್ನು ಕೊಲ್ಲುವ ಕೆಲಸವನ್ನೂ ಮಾಡುತ್ತದೆ. ಅಂದರೆ, ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.

ಬಾಳೆಲೆಲಿ ಊಟ ಮಾಡುವುದರಿಂದ ಊಟದ ರುಚಿ ಹೆಚ್ಚುತ್ತದೆ, ಹೌದು ಬಾಳೆಲೆಯ ಮೇಲಿರುವ ವ್ಯಾಕ್ಸ್ ಕೋಟಿಂಗ್ ಆಹಾರಕ್ಕೆ ಸ್ವಲ್ಪ ಎಕ್ಸ್ಟ್ರಾ ರುಚಿ ಸೇರಿಸುತ್ತದೆ. ಬಾಳೆಲೆಯ ಮೇಲೆ ಬಿಸಿ ಅಡುಗೆ ಬಡಿಸಿದಾಗ ಈ ವ್ಯಾಕ್ಸ್ ಕರಗಿ ಆಹಾರದೊಂದಿಗೆ ಸೇರಿಕೊಂಡು ಅದರ ಫ್ಲೇವರ್ ಹೆಚ್ಚಿಸುತ್ತದೆ. ಮತ್ತೇಕೆ ತಡ, ಈ ಹಬ್ಬದ ಸೀಸನ್ನಲ್ಲಿ ಬಾಳೆಲೆ ಬಳಸಿ, ಊಟದ ರುಚಿ ಹೆಚ್ಚಿಸಿಕೊಂಡು ಕೆಲಸ ಕಡಿಮೆ ಮಾಡಿಕೊಂಡು ಎಂಜಾಯ್ ಮಾಡಿ.

LEAVE A REPLY

Please enter your comment!
Please enter your name here