ಈ ಬೇಸಿಗೆಯ ಸುಡು ಬಿಸಲಿಗೆ ಯಾವುದನ್ನೂ ತಿನ್ನಲಿ ಯಾವುದನ್ನೂ ಕುಡಿಯಲಿ ಅನ್ನೋ ಗೊಂದಲವೇ ಉಂಟಾಗುತ್ತದೆ, ಅಷ್ಟೊಂದು ದಾಹ ಹಾಗೂ ಬಾಯಾರಿಕೆ, ಅಷ್ಟೇ ಅಲಲ್ದೆ ದೇಹವೆಲ್ಲ ಹಿಟ್ ಆಗೋಗುತ್ತದೆ. ಹಾಗಾಗಿ ದೇಹಕ್ಕೆ ತಂಪು ನೀಡುವಂತ ಮತ್ತು ದೇಹದ ಆರೋಗ್ಯವನ್ನು ಹೆಚ್ಚಿಸುವಂತ ಆಹಾರ ಪಾನೀಯಗಳನ್ನು ಈ ಬೇಸಿಗೆಯ ಬಿಸಿಲಿನಲ್ಲಿ ಸೇವಿಸುವುದು ಹೆಚ್ಚು ಸೂಕ್ತ.

ಆರೋಗ್ಯಕ್ಕೆ ಬಾಳೆಹಣ್ಣು ಮತ್ತು ಖರ್ಜುರ ಈ ಎರಡು ಕೂಡ ಉತ್ತಮ ಆರೋಗ್ಯವನ್ನು ಒದಗಿಸಬಲ್ಲದು, ಇವುಗಳನ್ನು ಬಳಸಿ ಮಿಲ್ಕ್ ಶೇಕ್ ಮಾಡಿ ಸೇವಿಸುವುದರಿಂದ ದೇಹ ತಂಪಾಗಿರುತ್ತದೆ ಮನೆಯಲ್ಲೇ ತಯಾರಿಸಲು ಬಯಸುವವರಿಗೆ ಈ ಮೂಲಕ ತಿಳಿಯ ಬಯಸುತ್ತೇವೆ ಇಷ್ಟ ಆದ್ರೆ ಇದನ್ನು ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ.

ತಯಾರಿಸಲು ಬೇಕಾಗುವ ಪದಾರ್ಥಗಳು:
ಖರ್ಜೂರ ೧೦, ಬಾಳೆಹಣ್ಣು ೩, ಸಕ್ಕರೆ 4 ಟೀ ಚಮಚ, ಐಸ್‌ಕ್ಯೂಬ್ ಸ್ವಲ್ಪ, ಗಟ್ಟಿ ಹಾಲು ಅರ್ಧ ಲೀಟರ್

ತಯಾರಿಸೋದು ಹೇಗೆ?
ಮೊದಲನೆಯದಾಗಿ ಮಿಕ್ಸಿಯಲ್ಲಿ ಬೀಜ ತೆಗೆದ ಖರ್ಜೂರ, ಸಕ್ಕರೆ ಮತ್ತು ಹಾಲನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ನಂತರ ಅದಕ್ಕೆ ಬಾಳೆಹಣ್ಣನ್ನು ಸೇರಿಸಿ ಮತ್ತು ಐಸ್‌ಕ್ಯೂಬ್ ಅನ್ನು ಸೇರಿಸಿ ಸ್ವಲ್ಪ ನುಣ್ಣಗಾಗಿಸಿಕೊಳ್ಳಬೇಕು. ಅದನ್ನು ಚೆನ್ನಾಗಿ ಮಿಶ್ರಮ ಮಾಡಿಕೊಳ್ಳಬೇಕು.

ಆನಂತರ ಗ್ಲಾಸ್‌ನಲ್ಲಿ ಹಾಕಿ ಸೇವಿಸಲು ಕೊಡಬಹುದು, ಇದು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ ಅಷ್ಟೇ ಅಲ್ಲದೆ ಇದನ್ನು ಡಯಟ್ ಮಾಡುವವರು ಸೇವಿಸುವುದು ಇನ್ನು ಉತ್ತಮ.

LEAVE A REPLY

Please enter your comment!
Please enter your name here