ಹೌದು ಈ ಕಿಡ್ನಿ ಸ್ಟೋನ್ ಗೆ ಮೊದಲ ಹಂತದಲ್ಲೇ ಚಿಕಿತ್ಸೆ ಪಡೆಯುವುದು ಉತ್ತಮ. ಕಿಡ್ನಿ ಸ್ಟೋನ್ ಗೆ ನಾವು ವೈದ್ಯರ ಬಳಿ ಹೋಗುವ ಮೊದಲು ಮನೆಯಲ್ಲಿಗೆ ಚಿಕಿತ್ಸೆ ಮಾಡಿಕೊಳ್ಳ ಬಹುದು. ಮನೆಯಲ್ಲೇ ತಯಾರಿಸಿದ ಬಾಳೆ ದಿಂಡಿನ ಅಡುಗೆಯಿಂದ ಇದನ್ನ ಕರಗಿಸಬಹುದು.

ಕಿಡ್ನಿ ಸ್ಟೋನ್ ಇರುವವರು ಬಾಳೆದಿಂಡಿನ ವಿವಿಧ ಖಾದ್ಯಗಳನ್ನ ಮಾಡಿ ತಿನ್ನಬೇಕು ಇದರಿಂದ ಕಿಡ್ನಿ ಸ್ಟೋನ್ ನ ಸಮಸ್ಯೆ ಕಡಿಮೆಯಾಗುತ್ತದೆ. ಬಾಳೆದಿಂಡಿನ ಪಲ್ಯ ಹೆಚ್ಚು ರುಚಿ ನೀಡುತ್ತೆ. ಇದನ್ನ ಮಾಡುವ ವಿಧಾನ ಇಲ್ಲಿದೆ ನೋಡಿ.

ಬಾಳೆದಿಂಡಿನ ಪಲ್ಯ ಮಾಡಲು ಬೇಕಾಗುವ ಪದಾರ್ಥಗಳು:
ಬಾಳೆದಿಂಡು – 1(1 ಮೊಳ ಉದ್ದ),
ಕಡಲೇಬೇಳೆ- 2 ಚಮಚ
ತುರಿದ ತೆಂಗಿನಕಾಯಿ – 1 ಬಟ್ಟಲು
ಹಸಿಮೆಣಸಿನ ಕಾಯಿ – 2
ಒಣಮೆಣಸಿನ ಕಾಯಿ – 2
ಬೆಲ್ಲ – ಸ್ವಲ್ಪ
ಹುಣಸೆಹಣ್ಣಿನ ರಸ
ಉಪ್ಪು – ರುಚಿಗೆ
ಒಗ್ಗರಣೆಗೆ: ಎಣ್ಣೆ, ಸಾಸಿವೆ, ಅರಿಶಿನ, ಕೊತ್ತಂಬರಿ ಸೊಪ್ಪು

ಬಾಳೆದಿಂಡಿನ ಪಲ್ಯ ತಯಾರಿಸೋದು ಹೇಗೆ.??
ಕುಕ್ಕರ್ ಗೆ ಎಣ್ಣೆ, ಒಣಮೆಣಸಿನ ಕಾಯಿ, ಕಡಲೇಬೇಳೆ ಹಾಕಿ ನಂತರ ಹೆಚ್ಚಿಟ್ಟ ಬಾಳೆದಿಂಡು ಹಾಕಿ 2 ಕೂಗು ಕೂಗಿಸಿಕೊಳ್ಳಬೇಕು. ಇದನ್ನು ಇಳಿಸಿಕೊಂಡು ಆರಿಸಿಟ್ಟುಕೊಳ್ಳಬೇಕು. ಸಾಸಿವೆ, ತೆಂಗಿನಕಾಯಿ ತುರಿ, ಹಸಿಮೆಣಸಿನಕಾಯಿ, ಹಾಕಿ ರುಬ್ಬಿಕೊಳ್ಳಬೇಕು.

ಒಂದು ಪ್ಯಾನ್ ಗೆ ಎಣ್ಣೆ, ಸಾಸಿವೆ, ಕರಿಬೇವು, ಅರಿಶಿನ ಹಾಕಿ ಒಗ್ಗರಣೆ ಹಾಕಿಕೊಳ್ಳಬೇಕು. ಇದಕ್ಕೆ ಬೇಯಿಸಿಟ್ಟುಕೊಂಡ ಬಾಳೆದಿಂಡನ್ನು ಹಾಕಿ, ಉಪ್ಪು, ಸ್ವಲ್ಪ ಬೆಲ್ಲ, ಹುಣಸೆಹಣ್ಣಿನ ರಸ ಹಾಕಿ. ಬಳಿಕ ರುಬ್ಬಿಟ್ಟುಕೊಂಡ ಮಸಾಲಾ ಹಾಕಿ ಪ್ಯಾನ್ ನಲ್ಲಿ ಹುರಿಯಬೇಕು. ಕೊತ್ತಂಬರಿ ಸೊಪ್ಪು ಹಾಕಿ ಅಲಂಕಾರ ಮಾಡಿದರೆ ರುಚಿಯಾದ ಆರೋಗ್ಯಕರವಾದ ಬಾಳೆದಿಂಡಿನ ಪಲ್ಯ ರೆಡಿ.

LEAVE A REPLY

Please enter your comment!
Please enter your name here