ಬಾಳೆ ಹಲವು ಆರೋಗ್ಯಕಾರಿ ಉಪಯೋಗಗಳನ್ನು ಹೊಂದಿದೆ. ಬಾಳೆ ಹಣ್ಣು ಮಾತ್ರವಲ್ಲ, ಬಾಳೆ ಎಲೆ ಬಾಳೆ ದಿಂಡು ಮುಂತಾವುಗಳು ಮಾನವ ದೇಹಕ್ಕೆ ಉತ್ತಮ ಆರೋಗ್ಯವನ್ನು ವೃದ್ಧಿಸುವಲ್ಲಿ ತುಂಬಾನೇ ಸಹಕಾರಿಯಾಗಿದೆ. ನಾವು ನಿಮಗೆ ಈ ಲೇಖನದ ಮೂಲಕ ಬಾಳೆ ದಿಂಡಿನ ಬಹುಪಯೋಗಗಳನ್ನು ತಿಳಿಸುತ್ತೇವೆ ಮುಂದೆ ನೋಡಿ…

* ಬಾಳೆದಿಂಡಿನ ಜ್ಯುಸ್ ಸೇವನೆ ಮಾಡೋದ್ರಿಂದ ಮೂತ್ರಜನಕಾಂಗದ ಆರೋಗ್ಯಕ್ಕೆ ಒಳ್ಳೆಯದು. ಮೂತ್ರದಲ್ಲಿ ಕಲ್ಲು ಇರುವವರು, ಉರಿ ಮೂತ್ರ ಇರುವವರು ಬಾಳೆ ದಿಂಡಿನ ಜ್ಯೂಸ್ ಸೇವಿಸುವುದು ಸೂಕ್ತ ಯಾಕೆಂದರೆ ಬಾಳೆ ದಿಂಡಿನಲ್ಲಿ ನೀರಿನ ಅಂಶ ಜಾಸ್ತಿಯಿರುತ್ತದೆ ಹಾಗಾಗಿ ಉತ್ತಮ ಆರೋಗ್ಯಕ್ಕೆ ತುಂಬಾನೇ ಸೂಕ್ತ.

* ಬಾಳೆ ದಿಂಡಿನಲ್ಲಿ ಅಧಿಕ ಪೋಷಕಾಂಶ ಇರುವುದರಿಂದ ಜೀರ್ಣವಾಗಲು ಹೆಚ್ಚು ಪ್ರಮಾಣದಲ್ಲಿ ಕೊಬ್ಬು ಬಳಕೆಯಾಗುತ್ತದೆ. ಇದರಿಂದಾಗಿ ದೇಹದಲ್ಲಿರುವ ಅನಗತ್ಯ ಕೊಬ್ಬಿನಂಶ ಕರಗಿ, ದೇಹ ತೆಳ್ಳಗಾಗಲು ನೆರವಾಗುತ್ತದೆ.

* ಬಾಳೆದಿಂಡಿನ ಪಲ್ಯ ಸೇವಿಸುವುದು ತುಮಬಾಣೆ ಉತ್ತಮ ಯಾಕೆಂದರೆ ಇದರಲ್ಲಿ ನಾರಿನಂಶ ಹೆಚ್ಚಿರುವ ಕಾರಣಕ್ಕೆ
ಜೀರ್ಣಕ್ರಿಯೆಗೆ ಸಹಕಾರಿ, ಹೊಟ್ಟೆಯಲ್ಲಿರುವ ಕಲ್ಮಶಗಳನ್ನು ಹೊರ ಹಾಕುತ್ತದೆ.

* ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆ. ಮಲಬದ್ಧತೆ ನಿವಾರಿಸುತ್ತದೆ. ಬಾಳೆದಿಂಡಿನ ರಸದಲ್ಲಿ ಸ್ವಲ್ಪ ಉಪ್ಪು, ಖಾರದ ಪುಡಿ ಸೇರಿಸಿ ಸೇವಿಸಬಹುದು.

ಈ ಮಾಹಿತಿ ನಿಮಗೆ ಉಪಯುಕ್ತ ಎನಿಸಿದರೆ ಇತರರಿಗೂ ತಿಳಿಸಿ ಇನ್ನು ಉಪಯುಕ್ತ ಮಾಹಿತಿಗಾಗಿ ನಮ್ಮ NEWZZDESK KANNADA ಪೇಜ್ ಅನ್ನು ಬೆಂಬಲಿಸಿ…

LEAVE A REPLY

Please enter your comment!
Please enter your name here