ಬೆನ್ನು ನೋವಿಗೆ ಮಾರುಕಟ್ಟೆಯಲ್ಲಿ ಹಲವು ಔಷಧಿ ಮಾತ್ರೆಗಳಿವೆ, ಆದ್ರೆ ನಿಮಗೊಂದು ಅತಿ ಸುಲಭ ನೈಸರ್ಗಿಕ ಮನೆಮದ್ದನ್ನು ತಿಳಿಸಲು ಬಯಸುತ್ತೇವೆ. ಈ ಮನೆಮದ್ದು ಉತ್ತಮವಾಗಿ ಕೆಲಸ ಮಾಡಬಲ್ಲದು. ಸಾಮಾನ್ಯವಾಗಿ ಬೆನ್ನು ನೋವು ಅನ್ನೋದು ಹೆಚ್ಚು ಮಹಿಳೆಯರಲ್ಲಿ ಹಾಗೂ ಹೆಚ್ಚಿ ಕೆಲಸ ಮಾಡುವಂತವರಲ್ಲಿ ಕಾಣಿಸಿಕೊಳ್ಳುವುದು ಸಹಜ ಹಾಗಾಗಿ ಇದಕ್ಕೆ ಪರಿಹಾರ ಹೇಗೆ ಅನ್ನೋದನ್ನ ಮುಂದೆ ನಮ್ಮ ಆಯುರ್ವೇದದಲ್ಲಿ ತಿಳಿಸಲಾಗಿದೆ.

ಬೆನ್ನು ನೋವಿಗೆ ಪರಿಹಾರವಾಗಿ ಹಲವು ಎಣ್ಣೆಗಳನ್ನು ಬಳಸುವುದುಂಟು ಅದೇ ರೀತಿಯಲ್ಲಿ ಈ ನೀಲಗಿರಿ ಎಣ್ಣೆಯ ಬಗ್ಗೆ ಸಾಕಷ್ಟು ತಿಳಿದುಕೊಂಡಿರುತ್ತೀರ, ಈ ನೀಲಗಿರಿ ಎಣ್ಣೆ ಬೆನ್ನು ನೋವನ್ನು ನಿವಾರಿಸಲು ಸಹಕಾರಿಯಾಗಿದೆ. ಅಷ್ಟೇ ಅಲ್ಲದೆ ಶುಂಠಿ ಎಣ್ಣೆ ಕೂಡ ಹೆಚ್ಚು ಉಪಯೋಗಕಾರಿ ಅನ್ನೋದನ್ನ ಹೇಳಲಾಗುತ್ತದೆ.

ಶುಂಠಿ ಬೆನ್ನು ನೋವಿಗೂ ಉತ್ತಮ ಔಷಧ. ಇದರಲ್ಲಿ ಉರಿಯೂತ ಕಡಿಮೆ ಮಾಡುವ ಅದರಲ್ಲೂ ತೀವ್ರ ತರವಾದ ಬೆನ್ನು ನೋವಿಗೆ ಹಚ್ವುವುದರಿಂದ ಒಳ್ಳೆಯ ಔಷಧ. ಬೆನ್ನು ನೋವಿಗೆ ನೀಲಗಿರಿ ಎಣ್ಣೆ ಕೂಡ ತುಂಬಾ ಮುಖ್ಯವಾದ ಔಷಧ ವಾಗಿದೆ‌ ಸ್ನಾಯು ಸೆಳೆತ ಹಾಗೂ ಉರಿ, ಊತಕ್ಕೆ ನೀಲಗಿರಿ ಎಣ್ಣೆ ರಾಮಭಾಣ. ಆದರೆ ಈ ಎಣ್ಣೆಯನ್ನು ಬೇರೆ ಎಣ್ಣೆಯೊಂದಿಗೆ ಬೆರಸಿ ಹಚ್ಚಬೇಕು.

ಪುದೀನ ಕೂಡ ಸಾಕಷ್ಟು ರೋಗಗಳಿಗೆ ರಾಮಭಾಣವಾಗಿದೆ. ಅದೇ ರೀತಿ ಬೆನ್ನು ನೋವಿಗೂ ಪುದೀನ ಎಣ್ಣೆ ಉತ್ತಮ ಔಷಧ. ಬೆನ್ನು ನೋವಿಗೆ ಇದನ್ನು ಹಚ್ಚೋದರಿಂದ ಕಡಿಮೆಯಾಗುತ್ತದೆ. ಈ ಎಣ್ಣೆಯಲ್ಲಿ ಮೆಂಥಾಲ್ ಹೆಚ್ಚಿರುವುದರಿಂದ ರಕ್ತ ನಾಳಗಳ ಸಂಚಾರ ಸುಗಮವಾಗಿಸುವ ಮೂಲಕ ನೋವು ನಿವಾರಣೆ ಮಾಡುತ್ತದೆ.

ತುಳಸಿ ಎಣ್ಣೆ ಕೂಡ ಬೆನ್ನು ನೋವಿಗೆ ಅತ್ಯುತ್ತಮ ಎಣ್ಣೆ. ಅನೇಕ ರೋಗಗಳಿಗೆ ತುಳಸಿ ರಾಮಭಾಣ ಅನ್ನೋದು ಗೊತ್ತಿರುವ ವಿಚಾರವೇ. ಹಾಗಾಗಿ ಬೆನ್ನುನೋವಿಗೂ ಕೂಡ ಉತ್ತಮ ನೋವು ನಿವಾರಕವಾಗಿದೆ. ಇವುಗಳಲ್ಲಿ ನಿಮಗೆ ಯಾವುದು ಸುಲಭವೋ ಹಾಗೂ ಯಾವುದರಿಂದ ನಿಮ್ಮ ಬೆನ್ನು ನೋವು ಕಡಿಮೆಯಾಗುವ ಲಕ್ಷಣಗಳು ಕಾಣುತ್ತವೋ ಅದನ್ನ ಬಳಸುವುದು ಉತ್ತಮ.

LEAVE A REPLY

Please enter your comment!
Please enter your name here