ಕೆಲವರ ತುಟಿಗಳು ಬಹಳಷ್ಟು ಬ್ಲಾಕ್ ಕಲರ್ ಆಗಿರುತ್ತವೆ ಆದ್ರೆ ಕೆಲವರಿಗೆ ತಮ್ಮ ತುಟಿಗಳನ್ನು ಗುಲಾಬಿ ಕಲರ್ ರೆಡ್ ಆಗಿ ಕಾಣುವಂತೆ ಮಾಡಿಕೊಳ್ಳಬೇಕು ಅನ್ನೋ ಅಸೆ ಇರುತ್ತದೆ ಅಂತವರಿಗೆ ಈ ಮನೆಮದ್ದು ಸೂಕ್ತವಾದದ್ದು.

ಕಪ್ಪು ತುಟಿಗಳಿಗೆ ಬೆಣ್ಣೆಯ ಸಹಕಾರಿ, ಹೌದು ಬೆಣ್ಣೆ ಮತ್ತು ಚಿಕ್ಕಚಮಚ ಜೇನು ಬೆರೆಸಿ ಮಿಶ್ರಣ ಮಾಡಿ. ಈ ಲೇಪನವನ್ನು ಈಗತಾನೇ ಚೆನ್ನಾಗಿ ತೊಳೆದ ಹಾಗೂ ಸತ್ತ ಜೀವಕೋಶಗಳನ್ನು ಕೆರೆದು ನಿವಾರಿಸಿರುವ ತುಟಿಗಳಿಗೆ ಹಚ್ಚುವುದರಿಂದ ಒಳ್ಳೆಯ ಫಲಿತಾಂಶವಿದೆ.

ಈ ವಿಧಾನವನ್ನು ರಾತ್ರಿ ಮಲಗುವ ಮುನ್ನ ಅನುಸರಿಸಿ ಬೆಳಗ್ಗೆ ಎದ್ದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಈ ವಿಧಾನದಿಂದ ಕೆಲವೇ ವಾರಗಳಲ್ಲಿ ತುಟಿ ಗುಲಾಬಿ ವರ್ಣವನ್ನು ಪಡೆಯಲು ಸಾಧ್ಯವಾಗುತ್ತದೆ.

ಬೆಣ್ಣೆ ತುಟಿಗಳಿಗೆ ಅತ್ಯುತ್ತಮವಾದ ತೇವಕಾರಕವಾಗಿದೆ ಹಾಗೂ ಜೇನು ಆರ್ದ್ರತೆ ನೀಡುತ್ತದೆ. ಅಲ್ಲದೇ ತುಟಿಗೆ ಆವರಿಸಿರುವ ಯಾವುದೇ ಸೋಂಕನ್ನೂ ಇವು ನಿವಾರಿಸುತ್ತವೆ.

ಹಲವು ಉಪಯೋಗಗಳನ್ನು ಹೊಂದಿರುವಂತ ಲಿಂಬೆಹಣ್ಣು ಕೂಡ ತುಟಿಯ ಬಣ್ಣವನ್ನು ಬದಲಿಸುವಲ್ಲಿ ಸಹಕಾರಿ, ಹೌದು ಲಿಂಬೆ ಮತ್ತು ಜೇನು ಲಿಂಬೆರಸ ಒಂದು ನೈಸರ್ಗಿಕವಾದ ಬಿಳಿಚುಕಾರಕವಾಗಿದ್ದು ಗಾಢವಾಗಿದ್ದ ಚರ್ಮವನ್ನು ಮತ್ತೆ ಸಹಜವರ್ಣಕ್ಕೆ ತರಲು ನೆರವಾಗುತ್ತದೆ.

ಇದನ್ನು ಹೇಗೆ ಬಳಸಬೇಕು?
ಒಂದು ಚಿಕ್ಕ ಚಮಚ ಲಿಂಬೆರಸ ಮತ್ತು ಒಂದು ಚಿಕ್ಕ ಚಮಚ ಜೇನನ್ನು ಬೆರೆಸಿ ತುಟಿಗಳಿಗೆ ಹಚ್ಚಿಕೊಳ್ಳಿ. ಸುಮಾರು ಹದಿನೈದು ನಿಮಿಷ ಬಿಟ್ಟು ಒದ್ದೆ ಬಟ್ಟೆಯಿಂದ ಒರೆಸಿಕೊಳ್ಳಿ. ಬಳಿಕ ಉತ್ತಮ ಗುಣಮಟ್ಟದ ಲಿಪ್ ಬಾಮ್ ಹಚ್ಚಿಕೊಂಡು ತುಟಿಗಳಿಗೆ ತೇವವನ್ನು ಒದಗಿಸಿ ಹೀಗೆ ಮಾಡಿದರೆ ನಿಮ್ಮ ತುಟಿಗಳು ಯಾವಾಗಲು ಉತ್ತಮವಾಗಿರುತ್ತವೆ.

LEAVE A REPLY

Please enter your comment!
Please enter your name here