ಬಿಳಿ ಕೂದಲಿನ ಸಮಸ್ಯೆಗೆ ಮಾರುಕಟ್ಟೆಯಲ್ಲಿ ಹಲವು ಔಷಧಿಗಳಿವೆ ಆದ್ರೆ, ಅವುಗಳು ನಿಮ್ಮ ಮೇಲೆ ಅಡ್ಡ ಪರಿಣಾಮ ಬೀರಬಹುದು ಆದ್ರೆ ಈ ನೈಸರ್ಗಿಕ ಮನೆಮದ್ದುಗಳು ಯಾವುದೇ ಅಡ್ಡ ಪರಿಣಾಮವನ್ನು ಬಿರೋದಿಲ್ಲ. ಹಾಗಾಗಿ ಇದಕ್ಕೆ ನೀವು ಹೆಚ್ಚು ಖರ್ಚು ಮಾಡುವ ಅವಶ್ಯಕತೆಯೂ ಇಲ್ಲ, ಮನೆಯಲ್ಲಿನ ಈ ಪದಾರ್ಥಗಳು ನಿಮ್ಮ ಬಿಳಿಕೂದಲನ್ನು ನಿಯಂತ್ರಿಸುತ್ತದೆ.

ಅಡುಗೆಗೆ ಬಳಸುವಂತ ಈರುಳ್ಳಿ ಕೂದಲಿನ ಸಂರಕ್ಷಣೆಯನ್ನು ಮಾಡುತ್ತದೆ,ಇದರಲ್ಲಿ ತಲೆ ಕೂದಲು ಉದುರುವ ಹಾಗು ಬಿಳಿಕೂದಲು ಸಮಸ್ಯೆಗೆ ಪರಿಹಾರವಿದೆ. ಈರುಳ್ಳಿಯು ಕ್ಯಾಟಲಿಸಿಸ್ ಎಂಬ ಕಿಣ್ವಗಳಿಂದ ಸಮೃದ್ಧವಾಗಿದೆ. ಇದು ಕೂದಲಿನ ಬಣ್ಣಬದಲಾವಣೆಯನ್ನು ನಿಯಂತ್ರಣದಲ್ಲಿ ಇಡುತ್ತದೆ.

ಕೂದಲು ಬಣ್ಣ ಕಳೆದುಕೊಳ್ಳುವುದಕ್ಕೆ ಮುಂಚೆಯೇ ಈರುಳ್ಳಿ ರಸದ ಆರೈಕೆ ಮಾಡುವುದು ಸೂಕ್ತ. ಇದರಿಂದ ಉತ್ತಮ ಫಲಿತಾಂಶ ಪಡೆದುಕೊಳ್ಳಬಹುದು. ತಲೆ ಸ್ನಾನ ಮಾಡುವ ಮೊದಲು ನಿಯಮಿತವಾಗಿ ಈರುಳ್ಳಿ ರಸವನ್ನು ನೆತ್ತಿಗೆ ಅನ್ವಯಿಸುವುದರಿಂದ ಕೂದಲು ಬಣ್ಣ ಬದಲಾಗದು. ಜೊತೆಗೆ ಆರೋಗ್ಯದಿಂದ ಕೂಡಿರುವುದು.

ಕೂದಲಿನ ಆರೋಗ್ಯಕ್ಕೆ ಕೊಬ್ಬರಿ ಎಣ್ಣೆ ಹೆಚ್ಚು ಉಪಯೋಗಕಾರಿ ಹಾಗಾಗಿ ಕೂದಲ ಅನೇಕ ಸಮಸ್ಯೆಗೆ ಕೊಬರಿ ಎಣ್ಣೆ ಹೆಚ್ಚು ಸಹಕಾರಿ. ಸೂಕ್ಷ್ಮಗ್ರಾಹಿ ಎಣ್ಣೆಯಾದ ತೆಂಗಿನ ಎಣ್ಣೆಯನ್ನು ನೆತ್ತಿ ಹಾಗೂ ಕೂದಲುಗಳ ಬುಡಕ್ಕೆ ಅನ್ವಯಿಸುವುದರಿಂದ ಅನೇಕ ಸಮಸ್ಯೆಗಳ ನಿವಾರಣೆಯ ಜೊತೆಗೆ ಬಣ್ಣ ಬದಲಾವಣೆಯನ್ನು ನಿಯಂತ್ರಿಸಬಹುದು.

ಕರಿಬೇವು ಊಟಕ್ಕೆ ಅಷ್ಟೇ ಅಲ್ಲ ಇದರಲ್ಲಿದೆ ಕೂದಲನ್ನು ಸಂರಕ್ಷಿಸುವ ಗುಣ, ಕರಿಬೇವು ಕೂದಲಿನ ಆರೈಕೆ ಹೇಗೆ ಮಾಡುತ್ತದೆ ಗೊತ್ತಾ, ಕರಿಬೇವಿನ ಎಲೆಯು ಕೂದಲ ರಕ್ಷಣೆ ಹಾಗೂ ಬಣ್ಣವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ ತೆಂಗಿನೆಣ್ಣೆಯಲ್ಲಿ ಕರಿಬೇವಿನ ಎಲೆಯನ್ನು ಸೇರಿಸಿ ಕುದಿಸಿ. ನಂತರ ತೈಲವನ್ನು ಸೋಸಿ ಸಂಗ್ರಹಿಸಿಟ್ಟುಕೊಳ್ಳಿ.

ತಲೆ ಸ್ನಾನ ಮಾಡುವ ಮೊದಲು ನೆತ್ತಿ ಹಾಗೂ ಕೂದಲಿಗೆ ಅನ್ವಯಿಸಿ ಒಂದು ಗಂಟೆಗಳ ಕಾಲ ಬಿಡಿ. ಬಳಿಕ ತೊಳೆಯಿರಿ. ಈ ವಿಧಾನದಿಂದ ಉತ್ತಮ ಕೇಶ ವೃದ್ಧಿ ಹಾಗೂ ಬಣ್ಣಗಳ ರಕ್ಷಣೆ ಮಾಡಬಹುದು. ಕೂದಲಿನ ಆರೋಗ್ಯಕ್ಕೆ ಈ ಮನೆಮದ್ದುಗಳು ಹೆಚ್ಚು ಸಹಕಾರಿ.

LEAVE A REPLY

Please enter your comment!
Please enter your name here