ಕಲ್ಲುಸಕ್ಕರೆ ತಿನ್ನಲು ಎಷ್ಟು ಸಿಹಿಯಾಗಿದೆಯೋ ಆರೋಗ್ಯಕ್ಕೂ ಕೂಡ ಅಷ್ಟೇ ಉತ್ತಮ. ಇದರಲ್ಲಿ ಅನೇಕ ಆರೋಗ್ಯಕರ ಅಂಶಗಳು ಅಡಗಿರುತ್ತದೆ, ಅನೇಕ ರೋಗಗಳಿಗೆ ಇದು ರಾಮಾಬಾಣವಾಗಿದೆ. ಸಕ್ಕರೆಯನ್ನು ತಿನ್ನೋದ್ರಿಂದ ಎಷ್ಟೆಲ್ಲ ದೇಹಕ್ಕೆ ಲಾಭವಿದೆ ಅನ್ನೋದನ್ನ ಒಮ್ಮೆ ಗಮನಿಸಿ.

ಕಲ್ಲುಸಕ್ಕರೆಯಿಂದ ದೇಹಕ್ಕೆ ಸಿಗುವಂತ ಆರೋಗ್ಯಕಾರಿ ಅಂಶಗಳು:
ಕಲ್ಲುಸಕ್ಕರೆಯಲ್ಲಿ ಹಿಮೋಗ್ಲೋಬಿನ್ ಅಂಶ ಇರೋದ್ರಿಂದ ರಕ್ತ ಹೀನತೆ ಸಮಸ್ಯೆಯನ್ನು ಕಡಿಮೆಮಾಡುತ್ತದೆ, ಅಷ್ಟೇ ಅಲ್ದೆ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಅಜೀರ್ಣ ಸಮಸ್ಯೆ ಕಾಡೋದಿಲ್ಲ. ಕಲ್ಲು ಸಕ್ಕರೆ ತಿನ್ನೋದ್ರಿಂದ ಗಂಟಲು ನೋವು ನಿವಾರಣೆಯಾಗುವುದು.

ಕಲ್ಲು ಸಕ್ಕರೆ ಒಣಕೆಮ್ಮು ಮತ್ತು ಹಸಿಕೆಮ್ಮಿನ ಸಮಸ್ಯೆಗಳಿಗೆ ಪರಿಹಾರವಾಗಿ ಕಲ್ಲುಸಕ್ಕರೆಯನ್ನು ತಿನ್ನುವುದು ಉತ್ತಮ. ಎಲ್ಲ ರೀತಿಯ ಕೆಮ್ಮುಗಳಿಗೆ ಮತ್ತು ಗಂಟಲು ನೋವಿಗೆ ಕಲ್ಲುಸಕ್ಕರೆ ರಾಮಬಾಣ ಎಂದು ಪೋಸ್ಟ್​ ಗ್ರಾಜುಯೇಟ್​ ಮೆಡಿಕಲ್ ಜರ್ನಲ್​ನ ಅಧ್ಯಯನದಲ್ಲಿ ತಿಳಿಸಲಾಗಿದೆ.

ದೇಹಕ್ಕೆ ಹಿತವನ್ನು ನೀಡುವಂತ ಈ ಕಲ್ಲು ಸಕ್ಕರೆ ರಾತ್ರಿ ಮಲಗುವ ವೇಳೆ ಕಲ್ಲುಸಕ್ಕರೆಯನ್ನು ಕರಿಮೆಣಸಿನ ಪುಡಿಯೊಂದಿಗೆ ಮಿಶ್ರಣ ಮಾಡಿ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು. ಆದರೆ ಕಲ್ಲುಸಕ್ಕರೆಯನ್ನು ತಿಂದ ಬಳಿಕ ನೀರು ಕುಡಿಯುವುದರಿಂದ ಕೆಮ್ಮು ಹೆಚ್ಚಾಗಬಹುದು.

LEAVE A REPLY

Please enter your comment!
Please enter your name here