ವಿರಾಟ್ ಕೊಹ್ಲಿ ಭಾರತದ ಶ್ರೇಷ್ಠ ಕ್ರೀಕೇಟ್ ಆಟಗಾರ, ಇವರ ಬ್ಯಾಟಿಂಗ್ ವೈಖರಿ ಹಾಗು ಕ್ರಿಕೇಕೆಟ್ನಲ್ಲಿ ಇವರು ತನ್ನನ್ನು ತೊಡಗಿಸಿಕೊಳ್ಳುವ ರೀತಿ ನಿಜಕ್ಕೂ ಅದ್ಭುತವೇ ಅನ್ನಬಹುದು ಇಂಥ ಕ್ರಿಕೇಟ್ ಆಟಗಾರನನ್ನು ಕೋಟಿಗಟ್ಟಲೆ ಅಭಿಮಾನಿಗಳು ಅನುಸರಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಕ್ರಿಕೆಟಿಗರ ಮೇಲೆ ಕೂಡ ಇವರು ಪರಿಣಾಮಬೀರಿದ್ದಾರೆ.

ಭಾರತದ ‘ರನ್ ಮಿಷನ್’ ಎಂದೇ ಕರೆಸಿಕೊಳ್ಳುವ ವಿರಾಟ್ ಅವರನ್ನು ಬಾಂಗ್ಲಾದೇಶದ ಕ್ರಿಕೇಟಿಗ ಹೇಳಿದ್ದೇನು ಗೊತ್ತಾ.?
ಮೊನ್ನೆಯಷ್ಟೇ ಏಷ್ಯಾ ಕೂಪ್ ಟೂರ್ನಿ ಮುಗಿದ ಮೇಲೆ ತಮೀಮ್ ಇಕ್ಬಾಲ್ ‘ಖಲೀಜ್ ಟೈಮ್ಸ್’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಇಕ್ಬಾಲ್, ಕೊಹ್ಲಿ ಅವರ ಬ್ಯಾಟಿಂಗ್ ಶೈಲಿಯನ್ನು ನೋಡಿದಾಗ ನನಗೆ ಕೆಲವೊಮ್ಮೆ ಅವರು ಮಾನವನಲ್ಲ. ಮಿಷನ್ ಎಂಬ ಭಾವನೆ ಮೂಡುತ್ತದೆ.

ಕೊಹ್ಲಿ ಅವರ ಹಾಗೆ ಪಂದ್ಯದ ಮೇಲೆ ಪ್ರಾಬಲ್ಯ ಸಾಧಿಸುವಂತಹ ಆಟಗಾರನನ್ನು ನಾನು ಇದುವರೆಗೆ ನೋಡಿಲ್ಲ ಆಡುವ ಪಂದ್ಯಗಳಲ್ಲಿ ಶತಕವನ್ನು ಸಿಡಿಸುತ್ತಾರೆ, ಹಾಗು ತಂಡಕ್ಕೆ ಒಂದೊಳ್ಳೆ ಮೊತ್ತವನ್ನು ಕೊಡುತ್ತಾರೆ. ಏಕದಿನ ಪಂದ್ಯಗಳಲ್ಲಿ ಹಾಗು ಟೆಸ್ಟ್ ಪಂದ್ಯಗಳಲ್ಲಿ, ಟಿ-೨೦ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನವನ್ನು ತೋರಿಸುತ್ತಾರೆ, ಮತ್ತು ಅವರೊಬ್ಬ ಅದ್ಬುತ ಆಟಗಾರ ಎಂಬುದಾಗಿ ಸಂದರ್ಶನದಲ್ಲಿ ಹೇಳಿದ್ದಾರೆ.

LEAVE A REPLY

Please enter your comment!
Please enter your name here