ಮನುಷ್ಯನ ದೇಹಕ್ಕೆ ಆಹಾರಾ ಸೇವನೆ ಹೆಚ್ಚು ಅವಶ್ಯಕವಾಗಿದೆ, ಆದರೆ ಕೆಲವು ಆಹಾರಗಳು ಉತ್ತಮ ಪೋಷ್ಟಿಕಾಂಶವನ್ನು ಒದಗಿಸಿದರೆ ಇನ್ನು ಕೆಲವು ಆಹಾರಗಳು ದೇಹಕ್ಕೆ ಅನಾರೋಗ್ಯವನ್ನು ತಂದೊಡ್ಡುತ್ತವೆ. ಅಷ್ಟಕ್ಕೂ ಬೆಳಗ್ಗಿನ ಉಪಹಾರಕ್ಕೆ ಅಥವಾ ಖಾಲಿಹೊಟ್ಟೆಯಲ್ಲಿ ಯಾವ ರೀತಿಯ ಆಹಾರಗಳನ್ನು ಸೇವನೆ ಮಾಡಬಾರದು ಅನ್ನೋದನ್ನ ತಿಳಿಯೋಣ ಬನ್ನಿ…

ಬೆಳಗ್ಗೆ ಎದ್ದ ಕೂಡಲೇ ಖಾಲಿಹೊಟ್ಟೆಗೆ ಕಾಫಿ, ಟೀ ಅಥವಾ ಖಾರ ಪದಾರ್ಥಗಳನ್ನು ಸೇವಿಸಬಾರದು, ಸೇವಿಸಿದರೆ ದೇಹದಲ್ಲಿ ಆ್ಯಸಿಡ್​ ಅಂಶ ಉತ್ಪತ್ತಿ ಹೆಚ್ಚಾಗಿ ಗ್ಯಾಸ್ಟ್ರಿಕ್​ ಅಲ್ಸರ್ ಮುಂತಾದ ಸಮಸ್ಯೆಗಳು ಬರುವ ಸಾಧ್ಯತೆ ಇರುತ್ತದೆ.

ಖಾಲಿಹೊಟ್ಟೆಯಲ್ಲಿ ಸಕ್ಕರೆ ಅಂಶವನ್ನು ಹೊಂದಿರುವಂತ ಆಹಾರ ಸೇವನೆಯನ್ನು ಮಾಡಬಾರದು, ದೇಹದ ಇನ್ಸುಲಿನ್​ ಮಟ್ಟವನ್ನು ಏರುಪೇರು ಮಾಡುತ್ತದೆ. ಇದರಿಂದ ಮುಂದೆ ಡಯಾಬಿಟಿಸ್ ಬರಲು ಕಾರಣವಾಗಬಹುದು.

ಸಿಟ್ರಿಕ್​ ಅಂಶವಿರುವ ಹಣ್ಣುಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಬಾರದು, ಯಾಕೆಂದರೆ ಖಾಲಿಹೊಟ್ಟೆಯಲ್ಲಿ ಸೇವಿಸುವುದರಿಂದ ಈ ಹಣ್ಣುಗಳು ಆ್ಯಸಿಡ್​ ಉತ್ಪತ್ತಿ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಜೊತೆಗೆ ಹೈ ಫೈಬರ್​ ಮತ್ತು ಫ್ರುಕ್ಟೋಸ್​ ಅಂಶಗಳು ಬೇಗನೆ ಜೀರ್ಣವಾಗುವುದಿಲ್ಲ, ಇದರಿಂದ ಅಜೀರ್ಣತೆ ಕಾಡುತ್ತದೆ.

ಆರೋಗ್ಯದ ದೃಷ್ಟಿನಿಂದ ಬೆಳಗ್ಗೆ ಎದ್ದ ತಕ್ಷಣ ಖಾಲಿಹೊಟ್ಟೆಯಲ್ಲಿ ನೀರನ್ನು ಹೆಚ್ಚಾಗಿ ಕುಡಿಯುವುದು ಒಳ್ಳೆಯದು.

LEAVE A REPLY

Please enter your comment!
Please enter your name here