ಸಮಯದ ಅಭಾವದಿಂದ ಒಂದು ದಿನದ ಮಟ್ಟಿಗೆ ಟ್ರಿಪ್ ಹೋಗಲು ಬಯಸುವವರಿಗೆ ತುಮಕೂರಿನ ಶಿವಗಂಗೆ ಬೆಟ್ಟ ಒಂದೊಳ್ಳೆ ಪ್ರವಾಸಿ ತಾಣ ಎಂಬುದಾಗಿ ಹೇಳಬಹುದು. ತುಮಕೂರಿನಲ್ಲಿ ಹಲವು ಆಕರ್ಷಕ ಹಾಗು ಪ್ರವಾಸಿ ತಾಣಗಳಿವೆ ಜನರನ್ನು ಆಕರ್ಷಿಸುವ ಸ್ಥಳಗಳು ಕೂಡ ಇವೆ. ವಾರದಂತ್ಯದಲ್ಲಿ ಈ ಸ್ಥಳಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಶಿವಗಂಗೆ ತುಮಕೂರಿನ ಪ್ರಸಿದ್ಧವಾದ ಪ್ರವಾಸಿ ತಾಣವಾಗಿದೆ.

ಇದು ತುಮಕೂರಿನಿಂದ ಸುಮಾರು 20 ಕಿ.ಮೀ ದೂರದಲ್ಲಿದೆ. ಬೆಂಗಳೂರಿನಿಂದ ಸುಮಾರು 50 ಕಿ.ಮೀ ದೂರದಲ್ಲಿದೆ. ಶಿವಗಂಗಾ ಬೆಟ್ಟವು ಗಂಗಾಧಾರೇಶ್ವರ ಮತ್ತು ಸ್ವರ್ಣಂಭರಿಗೆ ಮೀಸಲಾಗಿರುವ 2 ಶಿವನ ದೇವಾಲಯಗಳಿಗೆ ಹೆಸರುವಾಸಿಯಾಗಿದೆ.

ಮಹಾಶಿವರಾತ್ರಿಯ ಉತ್ಸವದಂದು ಈ 2 ದೇವಾಲಯಗಳು ವಿಜೃಂಬಣೆಯಿಂದ ಆಚರಿಸಲಾಗುತ್ತದೆ. ಈ ದೇವಾಲಯಕ್ಕೆ ಹಲವಾರು ಪ್ರವಾಸಿಗರು ವಾರದ ಅಂತ್ಯದಲ್ಲಿ ಭೇಟಿ ನೀಡುತ್ತಾರೆ.

ತುಮಕೂರು ಬೆಂಗಳೂರಿಗೆ ಸಮೀಪದಲ್ಲಿರುವ ಸ್ಥಳವಾಗಿದ್ದು, ಹಲವಾರು ಮಂದಿ ಈ ಸ್ಥಳದಲ್ಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಬಯಸುತ್ತಾರೆ. ಬೆಂಗಳೂರಿನಿಂದ ತುಮಕೂರಿಗೆ ಸುಮಾರು 70 ಕಿ.ಮೀ ದೂರದಲ್ಲಿದೆ. ತುಮಕೂರಿನ ಅಸು-ಪಾಸಿನಲ್ಲಿ ಹಲವಾರು ತಾಣಗಳಿದ್ದು, ಕುಟುಂಬ ಸಮೇತರೊಂದಿಗೆ, ಮಕ್ಕಳೊಂದಿಗೆ, ದಂಪತಿಗಳು ಇಲ್ಲಿನ ಎಲ್ಲಾ ತಾಣಗಳಿಗೆ ತೆರಳಬಹುದಾಗಿದೆ.

LEAVE A REPLY

Please enter your comment!
Please enter your name here