ಮಗು ಜನಿಸಿದ ತಕ್ಷಣ ಅಳಲು ಶುರು ಮಾಡುತ್ತದೆ. ಆದ್ರೆ ಅದು ಯಾಕೆ ಅಳುತ್ತಿದೆ ಅನ್ನೋದನ್ನ ಯಾರು ತಿಳಿಯುವುದಿಲ್ಲ. ಅದನ್ನು ಸಮಾಧಾನ ಮಾಡುತ್ತಾರೆ ಹಾಗು ತಾಯಿಯ ಮಡಿಲಲಿ ಮಲಗಿಸುತ್ತಾರೆ ಆಗ ಆ ಮಗು ಅಳುವುದನ್ನು ನಿಲ್ಲಿಸುತ್ತದೆ ಈ ಅನುಭವ ಎಲ್ಲರಿಗು ಆಗಿರುತ್ತದೆ. ಆದ್ರೆ ಆ ಮಗುವಿನ ಅಳುವಿನ ಹಿಂದಿರುವ ಕಾರಣವೇನು.? ಅನ್ನೋದನ್ನ ನಾವು ನಿಮಗೆ ತಿಳಿಸುತ್ತೇವೆ ನೋಡಿ ….

ಆ ಮಗು ತಾಯಿ ಹೊಟ್ಟೆಯಲ್ಲಿದ್ದಾಗ ಆ 9-10 ತಿಂಗಳು ಲಯಬದ್ಧವಾಗಿ ಕೇಳಿಸುವ ತಾಯಿಯ ಹೃದಯ ಬಡಿತವನ್ನು ಕೇಳುತ್ತಾ ಹಾಗೆ ತನ್ಮಯಗೊಳ್ಳುತ್ತಿತ್ತು. ಆ ಶಬ್ದದಲ್ಲಿ ತನ್ನನ್ನು ತಾನು ಮರೆತು ಆ ಶಬ್ದವೇ ತನಗೆ ರಕ್ಷಣೆಯೆಂದು ಭಾವಿಸಿರುತ್ತದೆ.

ಹೀಗಿರುವಾಗ ಹೊರ ಪ್ರಪಂಚಕ್ಕೆ ಬಂದ ಮೇಲೆ ಆ ಶಬ್ದ ದೂರವಾಗಿ ತನಗೆ ಏನೋ ಆಗುತ್ತಿದೆ ಎಂಬ ಭಯದಿಂದ ಬಿಕ್ಕಿ ಬಿಕ್ಕಿ ಅಳಲು ಪ್ರಾರಂಭಿಸುತ್ತದೆ ಆ ಮಗು..

ಅಳುವ ಆ ಮಗುವನ್ನು ತಾಯಿಯಾ ಮಡಿಲಲ್ಲಿ ಮಲಗಿಸಿ ನೋಡಿ ಅಳುವುದನ್ನು ನಿಲ್ಲಿಸುತ್ತದೆ, ಯಾಕೆಂದ್ರೆ ಮತ್ತೆ ತಾಯಿಯ ಎದೆಬಡಿತ ಕೇಳಿಸುತ್ತಿರುತ್ತದೆ ಆಗಾಗಿ ತನಗೆ ಯಾವ ಭಯವಿಲ್ಲ ಅಂದುಕೊಂಡು ಅಳುವುದನ್ನು ನಿಲ್ಲಿಸುತ್ತದೆ.

LEAVE A REPLY

Please enter your comment!
Please enter your name here