ಎಲ್ಲರಿಗೂ ಸೌಂದರ್ಯದ ಬಗ್ಗೆ ಹೆಚ್ಚು ಆಸಕ್ತಿ ಇದ್ದೆ ಇರುತ್ತದೆ ಆಗಂತ ಹಲವು ಕೆಮಿಕಲ್ ಮಿಶ್ರಣವನ್ನು ಬಳಸುವ ಮೊದಲು ಈ ರೀತಿಯ ನೈಸರ್ಗಿಕ ವಿಧಾನವನ್ನು ಅನುಸರಿಸಿ ನೋಡಿ…

ಎಳನೀರನ್ನು ಕುಡಿಯುವುದು ತ್ವಚೆಯ ಹೊಳಪನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ.

ನೀವು ಹೊರಗೆ ಹೋಗುವ ಮುನ್ನ, ಮತ್ತು ಮನೆಗೆ ಬಂದ ತಕ್ಷಣ ತ್ವಚೆಯನ್ನು ತೊಳೆಯುವುದು ಉತ್ತಮ.

ದಿನಕ್ಕೆ ಕನಿಷ್ಠ ಎರಡು ಬಾರಿ ತ್ವಚೆಯನ್ನು ನೀರಿನಿಂದ ತೊಳೆಯಿರಿ. ಆದಷ್ಟು ನೀರನ್ನು ಸೇವಿಸಿ.

ಚೆನ್ನಾಗಿ ನಿದ್ರೆ ಮಾಡುವುದು ನಿಮ್ಮ ತ್ವಚೆ ಸೂರ್ಯನ ಕಿರಣಗಳಿಂದ ಅನುಭವಿಸಿದ ಒತ್ತಡವನ್ನು ಮತ್ತು ಬೇರೆ ತ್ವಚೆಯ ಸಮಸ್ಯೆಯನ್ನು ಹೋಗಲಾಡಿಸಿ ಚರ್ಮ ಹೊಳಪನ್ನು ಹೆಚ್ಚಿಸಿಕೊಳ್ಳುವಲ್ಲಿ ಸಹಾಯ ಆಗುತ್ತದೆ.

ರಾತ್ರಿ ೭ ರಿಂದ ೯ತಾಸು ನೆಮ್ಮದಿಯ ನಿದ್ರೆ ಮಾಡುವುದರಿಂದ ತ್ವಚೆಯು ತಾಜಾತನವನ್ನು ಪಡೆಯುದರ ಜೊತೆಗೆ ಹೊಳಪನ್ನು ಹೆಚ್ಚಿಸಿಕೊಳ್ಳಬಹುದು.

ಹೆಚ್ಚು ನೀರು ಕುಡಿಯುವುದು ಚರ್ಮದ ಹೊಳಪನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಮತ್ತು ಇದು ಮುಖದ ಮೇಲೆ ಬರುವ ರಿಂಕಲ್ಸ್, ಗೆರೆಗಳು ಇತ್ಯಾದಿಗಳನ್ನು ತಡೆಯುತ್ತದೆ.

LEAVE A REPLY

Please enter your comment!
Please enter your name here