ಸಾಮಾನ್ಯವಾಗಿ ಈ ಒಂದು ಅನುಭವ ಎಲ್ಲರಿಗೂ ಆಗಿರುತ್ತದೆ. ಆದರೆ ಇದರ ಬಗ್ಗೆ ತಿಳಿದಿರುವುದಿಲ್ಲ ಬೇರೆಯವರು ಆಕಳಿಸುವ ಸಮಯದಲ್ಲಿ ನಮಗೂ ಆಕಳಿಕೆ ಬರೋದು ಯಾಕೆ.? ಇದರ ಬಗ್ಗೆ ಸಂಶೋಧನೆ ಹೇಳೋದೇನು.? ಅನ್ನೋದನ್ನ ಮುಂದೆ ನೋಡಿ…

ಬೇರೆಯವರು ಆಕಳಿಸುವುದನ್ನು ಕಂಡು ನಾವು ಆಕಳಿಸೋದು ಯಾಕೆ ಅನ್ನೋದನ್ನ ಸಂಶೋಧನೆಯ ಮೂಲಕ ತಿಳಿಯಲಾಗಿದೆ. ಸಂಶೋಧಕರು ಹೇಳುವ ಪ್ರಕಾರ ಮೆದುಳಿನ ಚಾಲನಾ ಕಾರ್ಯಕ್ಕೆ ಕಾರಣವಾಗಿರುವ ಪ್ರದೇಶದಲ್ಲಿ ಪ್ರಿಮಿಟೀವ್ ರಿಫೆಕ್ಸಸ್ ನಿಂದ ಈ ರೀತಿ ಉಂಟಾಗುತ್ತದೆ ಅಂತೇ.

ಬೇರೊಬ್ಬರು ಆಕಳಿಸುತ್ತಿರುವುದನ್ನು ಕಂಡಾಗ ನಮಗೂ ಆಕಳಿಕೆ ಬರುವುದು ಎಕೋಫೆನೊಮೆನ ಸಾಮಾನ್ಯ ರೂಪವಾಗಿದ್ದು, ಸಹಜವಾಗಿಯೆ ಬರುವ ಅನುಕರಣೆಯಾಗಿದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಆಕಳಿಕೆಯನ್ನು ತಡೆದಷ್ಟೂ ಹೆಚ್ಚಾಗುತ್ತದೆ ಎಂದು ಹೇಳಿದ್ದಾರೆ. ಒಟ್ಟಾರೆಯಾಗಿ ಅದೆಷ್ಟೋ ಜನಕ್ಕೆ ಈ ಗೊಂದಲಮಯ ಪ್ರಶ್ನೆಗೆ ಉತ್ತರ ಸಿಕ್ಕಿದಂತಾಗಿದೆ.

 

LEAVE A REPLY

Please enter your comment!
Please enter your name here