ಉತ್ತಮ್ಮ ಆರೋಗ್ಯಕ್ಕೆ ಹಾಗು ತ್ವಚೆಯ ಅಂದವನ್ನು ವೃದ್ಧಿಸುವಲ್ಲಿ ಗ್ರೀನ್ ಟೀ ತುಂಬಾನೇ ಸಹಕಾರಿಯಾಗಿದೆ. ಗ್ರೀನ್ ಟೀ ಸೇವನೆಯಿಂದ ಹಲವು ಲಾಭಗಳು ಇವೆ ಅಂದ್ರೆ ನೀವು ನಂಬೋದಿಲ್ಲ ಅನ್ಸತ್ತೆ. ಇದರ ಉಪಯೋಗಗಳನ್ನು ತಿಳಿಯಲು ಮುಂದೆ ನೋಡಿ…

ಬೊಜ್ಜು ನಿವಾರಣೆಗೆ ಗ್ರೀನ್ ಟೀ ಸಹಕಾರಿಯಾಗಿದೆ ಪ್ರತಿ ದಿನ ತಪ್ಪದೆ ಗ್ರೀನ್ ಟೀಯನ್ನು ಸೇವನೆ ಮಾಡುವುದರಿಂದ ದೇಹದಲ್ಲಿ ಅನಗತ್ಯ ಕೊಬ್ಬು ದೂರವಾಗುತ್ತದೆ. ಶರೀರದ ವ್ಯರ್ಥಗಳು ದೂರವಾಗುತ್ತದೆ.ಅದರಿಂದ ಚರ್ಮಕ್ಕೂ ಸಹ ಲಾಭ ಆಗುತ್ತದೆ.

ತ್ವಚೆಯ ಅಂದವನ್ನು ವೃದ್ಧಿಸುವಲ್ಲಿ ಗ್ರಿ ಟೀ ಸೂಕ್ತ. ಮೊಡವೆಗಳು ಮತ್ತು ಅದರಿಂದ ಆಗುವ ಮಚ್ಚೆಗಳು ದೂರವಾಗಲು ಮುಖದ ಮೇಲೆ ಗ್ರೀನ್ ಟೀ ಬಟ್ಟೆಯಿಂದ ಅದ್ದಿ ಇಡಿ ಮುಖಕ್ಕೆ ನಿಧಾನವಾಗಿ ಹಚ್ಚಿರಿ.

ಚರ್ಮ ತಾಜಾವಾಗಿರಲು ಮೂರು ಚಮಚೆ ಗ್ರೀನ್ ಟೀ ಪುಡಿಗೆ ಸ್ವಲ್ಪ ಮೊಟ್ಟೆಯ ಬಿಳಿಯ ಭಾಗ , ಸ್ವಲ್ಪ ನಿಂಬೆ ರಸ ಮತ್ತು ಜೇನು ಮಿಶ್ರ ಮಾಡಿ ಇದನ್ನು ಮುಖ ಮತ್ತು ಕುತ್ತಿಗೆಗೆ ಲೇಪಿಸಿ ಸ್ವಲ್ಪ ಸಮಯದ ಬಳಿಕ ಸ್ವಚ್ಚಗೊಳಿಸಿ.

ತಲೆ ಸ್ನಾನ ಆದ ಬಳಿಕ ಸ್ವಲ್ಪ ಗ್ರೀನ್ ಟೀ ದ್ರಾವಣವನ್ನು ತೆಗೆದುಕೊಂಡು ಕೂದಲನ್ನು ತೊಳೆದರೆ ಕೇಶದ ಆರೋಗ್ಯ ಸುಸ್ಥಿರವಾಗಿರುತ್ತದೆ.

LEAVE A REPLY

Please enter your comment!
Please enter your name here