ಹೌದು ಬೆಲ್ಲ ಹಲವು ಆರೋಗ್ಯಕಾರಿ ಲಾಭಗಳನ್ನು ಹೊಂದಿದೆ. ಬೆಲ್ಲವನ್ನು ಯಾವೆಲ್ಲ ರೀತಿಯಲ್ಲಿ ಬಳಸಿ ಸೇವನೆ ಮಾಡಿದ್ರೆ ಯಾವೆಲ್ಲ ಲಾಭಗಳು ನಮ್ಮ ದೇಹಕ್ಕೆ ಸಿಗುತ್ತದೆ ಅನ್ನೋದನ್ನ ತಿಳಿಯೋಣ ಬನ್ನಿ…

ಸಾಮಾನ್ಯವಾಗಿ ನಾವು ಚಹಾ ತಯಾರಿಸುವಾಗ ಸಿಹಿಯಾಗಿರಲು ಸಕ್ಕರೆ ಬಳಸುತ್ತೇವೆ. ಆದರೆ ಸಕ್ಕರೆ ಬದಲ ಬೆಲ್ಲ ಸೇರಿಸಿ ಸೇವಿಸುವುದರಿಂದ ಸಿಗುವ ಆರೋಗ್ಯಕಾರಿ ಲಾಭಗಳು:
*ಸಂಸ್ಕರಿತ ಸಕ್ಕರೆಗಿಂತ ಬೆಲ್ಲದಲ್ಲಿ ಹೆಚ್ಚು ಪೋಷಕಾಂಶಗಳಿವೆ. ಏಕೆಂದರೆ ಇದರಲ್ಲಿ ಕಾಕಂಬಿ ಹೆಚ್ಚಿರುತ್ತದೆ. ಸಂಸ್ಕರಿಸಿದ ಸಕ್ಕರೆಯಲ್ಲಿ ಯಾವುದೇ ವಿಟಮಿನ್ ಮತ್ತು ಖನಿಜಾಂಶ ಇರುವುದಿಲ್ಲ. ಇದರ ಸೇವನೆಯಿಂದ ಆರೋಗ್ಯಕ್ಕೆ ಯಾವುದೇ ಪ್ರಯೋಜನವಿಲ್ಲ. ಆದ್ದರಿಂದ ಸಂಸ್ಕರಿತ ಸಕ್ಕರೆಗಿಂತ ಬೆಲ್ಲವೇ ಉತ್ತಮ.

 ಔಷಧೀಯ ಗುಣ
*ಕೀಲು ನೋವಿದ್ದವರಿಗೆ, ಋತು ಸಮಸ್ಯೆ ಇದ್ದವರಿಗೆ ಇದರ ಸೇವನೆ ಒಳ್ಳೆಯದು. ನಿಶ್ಶಕ್ತಿಯಿಂದ ಬಳಲುವವರಿಗೆ ಉಪಕಾರಿ. ಮಲಬದ್ಧತೆ ನಿವಾರಿಸುತ್ತದೆ.ಮಲಬದ್ಧತೆ ನಿವಾರಿಸುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಶ್ವಾಸನಾಳ ಶುದ್ಧಗೊಳಿಸುತ್ತದೆ. ಪಿತ್ತಕೋಶದ ವಿಷಕಾರಿ ಅಂಶಗಳನ್ನು ನಿವಾರಿಸುತ್ತದೆ. ಜೀರ್ಣಕ್ರಿಯೆಯನ್ನು ಸರಳಗೊಳಿಸುತ್ತದೆ.

*ಆ್ಯಸಿಡಿಟಿಗೆ ಒಳ್ಳೆಯದು. ಟಾನಿಕ್‌ಗಳಿಗೂ ಬಳಸಲಾಗುತ್ತದೆ. ರಕ್ತಹೀನತೆ ನಿವಾರಿಸುತ್ತದೆ. ರಕ್ತ ಶುದ್ಧಗೊಳಿಸುತ್ತದೆ. ಬೆಲ್ಲ ಸೇವನೆ ಎಂಡಾರ್ಫಿನ್ ಹಾರ್ಮೋನಿಗೆ ಪ್ರೇರಕವಾಗಿದೆ. ಆದ್ದರಿಂದ ಇದು ಆತಂಕ, ಒತ್ತಡ ಹಾಗೂ ಋತುಸ್ರಾವದ ಮುನ್ನದ ಮಾನಸಿಕ ಸಮಸ್ಯೆಗಳ ನಿವಾರಣೆಗೆ ಸಹಾಯ ಮಾಡುತ್ತದೆ. ನೆಗಡಿ, ಶೀತಕ್ಕೆ ಒಳ್ಳೆಯದು.

*ಆದರೆ ಮಿತಿ ಮೀರಿ ಬೆಲ್ಲ ಸೇವಿಸಿದರೆ ಸ್ಥೂಲಕಾಯ ಬರುವ ಸಾಧ್ಯತೆ ಇದೆ. ಟೈಪ್‌ 2 ಮಧುಮೇಹಕ್ಕೆ ಎಡೆಮಾಡಿಕೊಡುತ್ತದೆ.

*ಬೆಲ್ಲದಲ್ಲಿ ರೋಗ ನಿರೋಧಕ ಶಕ್ತಿ ಅಧಿಕವಾಗಿದ್ದು ದೇಹ ಸುಲಭವಾಗಿ ಖಾಯಿಲೆ ಬೀಳದಂತೆ ನೋಡಿಕೊಳ್ಳತ್ತದೆ.
ಒಟ್ಟಾರೆಯಾಗಿ ಬೆಲ್ಲವನ್ನು ಸೇವನೆ ಮಾಡೋದ್ರಿಂದ ಹಲವು ಲಾಭಗಳನ್ನು ಪಡೆದು ಕೊಳ್ಳಬಹುದು.

LEAVE A REPLY

Please enter your comment!
Please enter your name here