ಹೌದು ಕೆಲವೇ ಕೆಲವು ವರ್ಷಗಳ ಹಿಂದೆಯಷ್ಟೇ ಲಗ್ಗೆ ಇಟ್ಟ ATM ಗಳು ನಮ್ಮ ನೋಟುಗಳ ಸ್ಥಾನವನ್ನ ಆವರಿಸಿವೆ. ನಾವು ಏಟಿಎಂ ಗಳಲ್ಲಿ ಎಲ್ಲಿ, ಯಾವಾಗ ಬೇಕಾದರೂ ಕನಿಷ್ಠ ಮೊತ್ತವಾದ 100 ರೂ ಯಿಂದ ಹಿಡಿದು 50 ಸಾವಿರಗಳ ವರೆಗೆ ಡ್ರಾ ಮಾಡಿಕೊಳ್ಳ ಬಹುದು. ಇಂತಹ ಅನುಕೂಲವುಳ್ಳ ATM ಅನ್ನು ಹೆಚ್ಚಿನ ಜನರು ಬಳಸುತ್ತಿದ್ದಾರೆ ಇನ್ನು ಹೆಚ್ಚಿನ ಜನರು ಬಳಸಲು ಮುಂದಾಗುತ್ತಿದ್ದಾರೆ.

ಆದರೆ ಸದ್ಯಕ್ಕೆ ನಾವು ಇಲ್ಲಿ ಗಮನಿಸ ಬೇಕಾದ ವಿಷಯ ATM ಅಲ್ಲ, ಬದಲಾಗಿ ನಾವು ATM ನಿಂದ ಡ್ರಾ ಹಣ ಡ್ರಾ ಮಾಡಿದಾಗ ಬರುವ ರಶೀದಿಯನ್ನ. ಹೌದು ಈ ರಶೀದಿಯನ್ನ ಎಷ್ಟು ಜನ ತಾನೇ ಜೋಪಾನ ಮಾಡುತ್ತಾರೆ, ಇದನ್ನ ATM ನಲ್ಲಿರುವ ಕಸದ ಬುಟ್ಟಿಗೋ ಅಥವಾ ಸಿಕ್ಕ ಸಿಕ್ಕ ಜಾಗದಲೋ ಬಿಸಾಕಿ ಹೋಗುತ್ತಾರೆ. ಆದರೆ ಇದರಿಂದ ಏನು ತೊಂದರೆ ಆಗತ್ತೆ ಅಂತ ಹಲವಾರು ಯೋಚಿಸ್ತಾ ಇರಬವುದು, ಇದರಿಂದ ಖಂಡಿತ ತೊಂದರೆ ಆಗುತ್ತದೆ. ಈ ರೀತಿ ಹಣ ಡ್ರಾ ಮಡಿದ ರಶೀದಿಯನ್ನ ಅಲ್ಲಲ್ಲಿ ಹಾಕುವುದರಿಂದ ನಮ್ಮ ಖಾತೆಯ ಗುಟ್ಟನ್ನ ಹ್ಯಾಕರ್ ಗಳಿಗೆ ಬಿಟ್ಟುಕೊಟ್ಟಂತಾಗುತ್ತದೆ.

ನಾವು ATM ಕಾರ್ಡ್ ನ ಬಳಸಿ ಹಣ ಡ್ರಾ ಮಾಡುವಾಗ ಅದರ ಹಿಂದೆ ಒಂದು ದೊಡ್ಡ ಪ್ರೋಸೆಸ್ ನಡೆಯುತ್ತದೆ. ಹಂತ ಹಂತವಾಗಿ ನಾವು ನೀಡುವ ಮಾಹಿತಿಯನ್ನ ಅವಲಂಬಿಸಿ ನಮಗೆ ಬೇಕಾದಷ್ಟು ಹಣ ನಮ್ಮ ಕೈ ಸೇರುತ್ತದೆ. ಒಮ್ಮೊಮ್ಮೆ ತಾಂತ್ರಿಕ ದೋಷಗಳಿಂದಾಗಿ ನಾವು ಪಡೆಯ ಬೇಕಾದ ಹಣ ನಮ್ಮ ಕೈ ಸೇರದೆಯೇ ನಮ್ಮ ಕತೆಯಿಂದ ಹಣ ಕಟ್ ಆಗಿರುತ್ತದೆ. ಕೆಲವೊಮ್ಮೆ ಹಣ ಡ್ರಾ ಮಾಡುವ ವೇಳೆ ನಕಲಿ ನೋಟುಗಳು ಸಹ ನಮ್ಮ ಕೈ ಸೇರಿರುತ್ತವೆ ಇಂತಹ ಅವಘಡಗಳಾದಾಗ ನಾವು ಬ್ಯಾಂಕ್ ನವರಿಗೆ ದೂರು ನೀಡಬೇಕು, ಹೀಗೆ ದೂರು ನೀಡಲು ನಾವು ಹಣ ಡ್ರಾ ಮಾಡಿದಾಗ ಬರುವ ರಸೀದಿ ಬಹಳ ಮುಖ್ಯ.

ಈ ATM ರಸೀದಿಯಿಂದ ನಮ್ಮ ಕತೆಯಲ್ಲಿ ಉಳಿದಿರುವ ಹಣ ಎಷ್ಟು, ನಾವು ಡ್ರಾ ಮಾಡಿದ ಹಣ ಎಷ್ಟು ಎಂಬೆಲ್ಲ ಮಾಹಿತಿ ಇರುತ್ತದೆ. ಕೆಲವೊಮ್ಮೆ ನಮ್ಮನ್ನ ಹಲವಾರು ಗಮನಿಸುತ್ತಿರುತ್ತಾರೆ, ಅಂತವರಿಗೆ ನಾವು ಹೆಚ್ಚಿನ ಮೊತ್ತದ ಹಣವನ್ನ ಡ್ರಾಮಾಡಿದ ವಿಷಯ ತಿಳಿದು ನಮ್ಮಣ್ಣ ಹಿಂಬಾಲಿಸಿ ನಮ್ಮ ಹಣ ವನ್ನು ಕಿತ್ತುಕೊಳ್ಳುವ ಪ್ರಸಂಗಗಳು ನಮ್ಮ ನಿಮ್ಮೆಲ್ಲರ ಕಣ್ಣ ಮುಂದೆಯೇ ನಡೆದಿವೆ. ನಮ್ಮ ಈ ರಸೀದಿಯಿಂದ ನಮ್ಮ ಖಾತೆಯ ವಿವರವನ್ನ ಡಿಕೋಡ್ ಮಾಡಿ ಖಾತೆಯಲ್ಲಿನ ಹಣವನ್ನ ದೋಚುವ ಚೋರರು ಇದ್ದಾರೆ.

ಈ ಸಣ್ಣ ATM ರಸೀದಿಯಿಂದ ಎಷ್ಟೆಲ್ಲ ತೊಂದರೆ ಆಗುತ್ತದೆ ಎಂದ ಮೇಲು ಈ ರಸೀದಿ ನಮಗೆ ಬೇಕಾ….? ಆದ್ದರಿಂದ ಇನ್ನು ಮುಂದೆ ರಸೀದಿ ತೆಗೆದು ಕೊಳ್ಳುವ ಬದಲು ನಿಮ್ಮ ಖಾತೆಗೆ ನಿಮ್ಮ ಮೊಬೈಲ್ ನಂಬರ್ ಅನುಸಂಧಾನ ಮಾಡಿಸಿ ಪ್ರಿಂಟ್ ತೆಗೆದುಕೊಳ್ಳುವುದೇ ಉತ್ತಮ. ಇದರಿಂದ ನಿಮ್ಮ ಮೊಬೈಲ್ ಗೆ ಮೆಸೇಜ್ ಬರುತ್ತದೆ ಹಾಗು ಆ ಮಾಹಿತಿ ನಿಮ್ಮ ಬಳಿಯಲ್ಲದೆ ಯಾರ ಬಳಿಯೂ ಹೋಗುವುದಿಲ್ಲ. ಹೀಗೆ ಮಾಡುವುದರಂದಿ ನಮ್ಮ ಸುತ್ತ ಮುತ್ತಲಿನ ಪರಿಸರವನ್ನ ಸ್ವಚ್ಛವಾಗಿಟ್ಟುಕೊಳ್ಳುವುದರ ಜೊತೆಗೆ ನಮ್ಮ ಖಾತೆಯನ್ನು ಸುರಕ್ಷಿತವಾಗಿರಿಸಿಕೊಳ್ಳ ಬಹುದು, ಇದಕ್ಕೆ ನೀವ್ ಏನ್ ಅಂತೀರಾ….?

LEAVE A REPLY

Please enter your comment!
Please enter your name here