ರುಚಿಕರವಾದ ಟೊಮೊಟೊ ಆಮ್ಲೆಟ್ ಮಾಡಲು ಬಯಸುತ್ತೀರಾ? ಹಾಗಾದರೆ ಇಲ್ಲಿದೆ ಸುಲಭ ಹಾಗೂ ಸರಳ ವಿಧಾನ.

ಬೇಕಾಗುವ ಸಾಮಗ್ರಿಗಳು:
ಈರುಳ್ಳಿ – ೨-೩
ಶುಂಠಿ – ಅರ್ಧ ಇಂಚು
ಕೊತ್ತಂಬರಿ ಸೊಪ್ಪು – ೧/೩ ಕಟ್ಟು
ಇಂಗು – 1/4 ಚಮಚ
ಅರಿಶಿಣ – 1/2 ಚಮಚ
ಗರಂ ಮಸಾಲಾ – 1/4 ಚಮಚ
ಉಪ್ಪು – ರುಚಿಗೆ
ನೀರು – 1/2-1 ಕಪ್
ಎಣ್ಣೆ – ಸ್ವಲ್ಪ
ಕಡಲೆ ಹಿಟ್ಟು – 1 ಕಪ್
ಅಚ್ಚಖಾರದ ಪುಡಿ – 1 ಚಮಚ
ಟೊಮೆಟೋ – 2-3
ಹಸಿಮೆಣಸು – 1

ತಯಾರಿಸುವ ವಿಧಾನ…
ಮೊದಲು ನೀವು ಟೊಮೆಟೋ, ಈರುಳ್ಳಿ, ಹಸಿಮೆಣಸು, ಶುಂಠಿ ಮತ್ತು ಕೊತ್ತಂಬರಿ ಸೊಪ್ಪನ್ನು ಚಿಕ್ಕದಾಗಿ ಹೆಚ್ಚಿ ಒಂದು ಬೌಲ್‌ನಲ್ಲಿ ಹಾಕಿಕೊಳ್ಳಿ. ಬಳಿಕ ಅದಕ್ಕೆ ಕಡಲೆ ಹಿಟ್ಟು, ಇಂಗು, ಅಚ್ಚಖಾರದ ಪುಡಿ, ಅರಿಶಿಣ, ಉಪ್ಪು, ಗರಂ ಮಸಾಲಾವನ್ನು ಸೇರಿಸಿ ಅಗತ್ಯವಿರುವಷ್ಟು ನೀರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಹಿಟ್ಟನ್ನು ರೆಡಿಮಾಡಿಕೊಳ್ಳಿ.

ಈಗ ಒಂದು ತವಾವನ್ನು ಸ್ಟೌ ಮೇಲೆ ಇಟ್ಟು ಸುಮಾರು 1 ಚಮಚ ಎಣ್ಣೆಯನ್ನು ತವಾ ಮೇಲೆ ಹರಡಿ. ಅದು ಕಾದ ನಂತರ ರೆಡಿಮಾಡಿಟ್ಟಿರುವ ಹಿಟ್ಟನ್ನು ತವಾ ಮೇಲೆ ಹಾಕಿ ಹರಡಿ. ಈಗ ಅದರ ಮೇಲೆ 1 ಚಮಚ ಎಣ್ಣೆಯನ್ನು ಹಾಕಿ ಎರಡೂ ಬದಿಯನ್ನು ಚೆನ್ನಾಗಿ ಬೇಯಿಸಿದರೆ ಟೊಮೆಟೋ ಆಮ್ಲೆಟ್ ರೆಡಿ.

 

LEAVE A REPLY

Please enter your comment!
Please enter your name here