ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ದೇಹದಲ್ಲಿ ಬೊಜ್ಜು ಸಮಸ್ಯೆ ಹಾಗೂ ದೇಹದ ತೂಕ ಹೆಚ್ಚಾಗಿದೆ ಅನ್ನೋರು ತುಂಬಾ ಜನರಿದ್ದಾರೆ, ಈ ಬೊಜ್ಜು ಸಮಸ್ಯೆಯನ್ನು ನಿವಾರಿಸಿಕೊಳ್ಳಲು ಹಲವು ರೀತಿಯ ಪ್ರಯತ್ನಗಳನ್ನು ಬಹಳಷ್ಟು ಜನ ಮಾಡುತ್ತಾರೆ ಆದ್ರೂ ಕೂಡ ಕೆಲವೊಮ್ಮೆ ದೇಹದ ತೂಕ ಕಡಿಮೆಯಾಗುವುದಿಲ್ಲ.

ದೇಹದಲ್ಲಿ ಅನಗತ್ಯ ಬೊಜ್ಜು ಬೆಳೆಯಲು ಕಾರಣವೇನು?
ರುಚಿಗೆ ತಕ್ಕಂತ ಆಹಾರ ಸೇವನೆ ಮಾಡುವುದು ಹಾಗೂ ಅಂಗಡಿ ಹೋಟೆಲ್ಗಳಲ್ಲಿ ಸಿಗುವಂತ ಜಂಕ್ ಫುಡ್ ಸೇವನೆ ಮಾಡುವುದರಿಂದ ಬೊಜ್ಜು ಬೆಳೆಯುತ್ತದೆ, ಹಾಗೂ ಕೂತ ಜಾಗದಲ್ಲೇ ಕೆಲಸ ಮಾಡುವುದರಿಂದ ಹೀಗೆ ಬೇರೆ ಬೇರೆ ಕಾರಣಗಳಿಂದ ದೇಹದಲ್ಲಿ ಬೊಜ್ಜು ಉಂಟಾಗುತ್ತದೆ.

ಬೊಜ್ಜು ನಿಯಂತ್ರಿಸಿಕೊಳ್ಳಲು ಹಲವು ರೀತಿಯ ಮನೆಮದ್ದುಗಳು ಸಿಗುತ್ತವೆ ಅಷ್ಟೇ ಅಲ್ದೆ ಮಾರುಕಟ್ಟೆಯಲ್ಲಿ ಉಪಕರಣಗಳು ಔಷಧಿ ಮಾತ್ರೆಗಳು ಲಭ್ಯವಿದೆ, ಆದ್ರೆ ಅದೆಲ್ಲವುಗಳಿಗಿಂತ ನಮ್ಮ ಆಹಾರದಲ್ಲಿ ನಿಯಂತ್ರಣ ಮಾಡಿಕೊಂಡರೆ ಖಂಡಿತ ಬೊಜ್ಜು ಕಡಿಮೆಯಾಗುತ್ತದೆ ಸರಿಯಾದ ಸಮಯಕ್ಕೆ ಯೋಗ ವ್ಯಾಯಾಮ ಮಾಡುವುದರಿಂದ ಹಾಗೂ ಜಂಕ್ ಫುಡ್ ಗಳನ್ನೂ ಸೇವನೆ ಮಾಡದೇ ದೇಹಕ್ಕೆ ಕೆಲಸ ಕೊಟ್ಟರೆ ಯಾವುದೇ ರೀತಿಯ ಬೊಜ್ಜು ಬೆಳೆಯುವುದಿಲ್ಲ ಹಾಗೂ ಇರುವಂತ ಅನಗತ್ಯ ಬೊಜ್ಜು ನಿವಾರಣೆಯಾಗುವುದು.

ರಾತ್ರಿ ಸಮಯದಲ್ಲಿ ಈ ಕೆಲಸ ಮಾಡಿದರೆ ಬೊಜ್ಜು ಕಡಿಮೆಯಾಗುವುದು. ರಾತ್ರಿಯ ಊಟದಲ್ಲಿ ಅಧಿಕ ಪ್ರಮಾಣದ ಮಾಂಸಾಹಾರ ಸೇವನೆ ಮಾಡುವುದು ಒಳ್ಳೆಯದಲ್ಲ ಮಿತವಾಗಿರಲಿ.

ಮತ್ತೊಂದು ವಿಧಾನ ಏನು ಅಂದ್ರೆ ರಾತ್ರಿ ಮಲಗುವಾಗ ಒಂದು ದೊಡ್ಡ ಟವಲ್ ಅನ್ನು ಬಿಸಿ ನೀರು ಅಥವಾ ತಣ್ಣೀರಿನಲ್ಲಿ ಒದ್ದೆ ಮಾಡಿ ಅದನ್ನು ಹೊಟ್ಟೆಯ ಮೇಲೆ ಇಟ್ಟು ಮತ್ತೊಂದು ಟವಲ್ ಅಥವಾ ಬಟ್ಟೆಯಿಂದ ಕಟ್ಟಿಕೊಂಡು ರಾತ್ರಿಯೆಲ್ಲ ಹಾಗೆ ಮಲಗಬೇಕು ನಂತರ ಬೆಳಗ್ಗೆ ಎದ್ದು ಅದನ್ನು ಬಿಚ್ಚಿ, ಹೀಗೆ ಮಾಡುವುದರಿಂದ ಜೀರ್ಣಕ್ರಿಯೆ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತದೆ ಹಾಗೂ ದೇಹದಲ್ಲಿ ಹೆಚ್ಚು ಬೊಜ್ಜು ಬೆಳೆಯದಂತೆ ಜೀವಕೋಶಗಳು ನಿಯಂತ್ರಣದಲ್ಲಿಡುತ್ತವೆ

LEAVE A REPLY

Please enter your comment!
Please enter your name here