ಪ್ರತಿದಿನ ಸೇವಿಸುವಂತ ಆಹಾರಗಳು ದೇಹದ ಆರೋಗ್ಯವನ್ನು ವೃದ್ಧಿಸುತ್ತವೆ, ಅಷ್ಟೇ ಅಲ್ದೆ ದೇಹದಲ್ಲಿ ಪೋಷಕಾಂಶಗಳನ್ನು ಒದಗಿಸುವುದರ ಜತೆಗೆ ಬೆಳವಣಿಗೆ ಹಾರ್ಮೋನ್ಗಳನ್ನು ವೃದ್ಧಿಸುವುದು. ದೇಹದಲ್ಲಿ ರಕ್ತ ಕಣಗಳನ್ನು ವೃದ್ಧಿಸುವುದರ ಜೊತೆ ಜೊತೆಗೆ ದೇಹದಲ್ಲಿನ ಮೂಳೆಗಳನ್ನು ಬಲಶಾಲಿಯಾಗುವಂತೆ ಮಾಡುತ್ತದೆ.

ದೇಹದ ಮೂಳೆಗಳನ್ನು ಗಟ್ಟಿಮುಟ್ಟಾಗಿರುವಂತೆ ಮಾಡುವ ಆಹಾರಗಳು ಯಾವುವು?
ಪ್ರತಿನಿತ್ಯ ಹಾಲು ಕುಡಿಯುವುದರಿಂದ ದೇಹದ ಮೂಳೆ ಬಲಶಾಲಿಯಾಗಿ ಬೆಳೆಯಲು ಸಹಕಾರಿ, ಯಾಕೆಂದರೆ ಹಾಲಿನಲ್ಲಿ ಕ್ಯಾಲ್ಶಿಯಂ ಗುಣಗಳು ಹೇರಳವಾಗಿರುತ್ತವೆ ಇದರಿಂದ ಮೂಳೆಗಳು ಆರೋಗ್ಯಕರವಾಗಿ ಬಲಶಾಲಿಯಾಗಿ ಬೆಳೆಯಲು ಸಹಕಾರಿ.

ಕಿತ್ತಳೆಹಣ್ಣು: ಕಿತ್ತಳೆಹಣ್ಣು ಉತ್ತಮ ಆರೋಗ್ಯಕ್ಕೆ ಹೆಚ್ಚು ಸಹಕಾರಿ ಒಂದರಲ್ಲಿ ವಿಟಮಿನ್ ಅಂಶಗಳು ಹಾಗೂ ಕ್ಯಾಲ್ಶಿಯಂ ಪ್ರಮಾಣ ಹೆಚ್ಚಾಗಿದ್ದು ಇದು ದೇಹದ ಮೂಳೆಗಳನ್ನು ದೃಢವಾಗಿ ಗಟ್ಟಿಮುಟ್ಟಾಗಿ ಬೆಳೆಯುವಂತೆ ಮಾಡುತ್ತದೆ. ಅಷ್ಟೇ ಅಲ್ದೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣಗಳು ಕಿತ್ತಳೆಹಣ್ಣಿನಲ್ಲಿದೆ. ಹಾಗಾಗಿ ಇದರ ಸೇವನೆ ಮಾಡುವುದು ಅತಿಅವಶ್ಯಕ.

ಬಾದಾಮಿ ಬೀಜ: ಡ್ರೈ ಫುಟ್ಸ್ ಕೂಡ ದೇಹಕ್ಕೆ ಉತ್ತಮ ಆರೋಗ್ಯವನ್ನು ವೃದ್ಧಿಸುತ್ತದೆ, ಬಾದಾಮಿ ಬೀಜಗಳಲ್ಲಿ ಕ್ಯಾಲ್ಶಿಯಂ ಪ್ರಮಾಣ ಹೇರಳವಾಗಿದ್ದು ಇದು ದೇಹದ ಮೂಳೆಗಳನ್ನು ಹಾಗೂ ದೇಹದ ಆರೋಗ್ಯವನ್ನು ವೃದ್ಧಿಸುತ್ತದೆ. ಬಾದಾಮಿ ಬೀಜವನ್ನು ನೆನೆಸಿ ಅಥವಾ ಹುರಿದು ತಿನ್ನುವುದರಿಂದ ಉತ್ತಮ ಲಾಭದಾಯಕ ಅಂಶಗಳನ್ನು ಪಡೆದುಕೊಳ್ಳಬಹುದಾಗಿದೆ. ಅಷ್ಟೇ ಅಲ್ದೆ ಜ್ಞಾಪಕ ಶಕ್ತಿಯನ್ನು ವೃದ್ಧಿಸುವುದು.

ಅಂಜೂರ ಹಣ್ಣು: ಮಾರುಕಟ್ಟೆಯಲ್ಲಿ ಸಲ್ಪ ದುಬಾರಿ ಹಣ್ಣು ಆದ್ರೂ ಇದರ ಆರೋಗ್ಯಕರಣ ಗುಣಗಳು ಹೆಚ್ಚು ಉಪಯೋಗಕಾರಿಯಾಗಿದೆ. ಅಂಜೂರವನ್ನು ಸೇವಿಸುವುದರಿಂದ ದೇಹಕ್ಕೆ ಕ್ಯಾಲ್ಶಿಯಂ ಕೊರತೆ ನೀಗಿಸಿ ಕೊಳ್ಳಬಹುದು ಹಾಗೂ ದೇಹದ ಮೂಳೆಗಳು ಗಟ್ಟಿಯಾಗಿ ಬೆಳೆಯಲು ಸಹಕಾರಿಯಾಗಿದೆ. ಅಂಜೂರ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೆ ಆರೋಗ್ಯವನ್ನು ವೃದ್ಧಿಸುತ್ತದೆ.

ಮೊಸರು ಸೇವನೆ ಕೂಡ ಮನುಷ್ಯನ ದೇಹಕ್ಕೆ ಅತಿ ಉತ್ತಮವಾದ ಆರೋಗ್ಯವನ್ನು ವೃದ್ಧಿಸಬಲ್ಲದು, ಮೊಸರು ಸೇವನೆಯಿಂದ ದೇಹಕ್ಕೆ ಕ್ಯಾಲ್ಶಿಯಂ ಹಾಗೂ ಪ್ರೊಟೀನ್ ಅಂಶಗಳನ್ನು ಪಡೆಯಬಹುದಾಗಿದೆ. ಮೊಸರಿನಲ್ಲಿ ಈ ಆರೋಗ್ಯಕರ ಅಂಶಗಳು ಹೇರಳವಾಗಿರುವುದರಿಂದ ದೇಹದ ಮೂಳೆಗಳು ಬಲಿಷ್ಠವಾಗಿ ಬೆಳೆಯಲು ಸಹಕಾರಿಯಾಗಿದೆ.

LEAVE A REPLY

Please enter your comment!
Please enter your name here