ಪೊಲೀಸ್ ಹುದ್ದೆಗಳಿಗೆ ಅರ್ಜಿಯನ್ನು ಕರೆಯಲಾಗಿದ್ದು ಆಸಕ್ತರು ಅರ್ಜಿಯನ್ನು ಯಾವ ರೀತಿಯ ಹಾಗೂ ಯಾವ ದಿನಾಂಕದೊಳಗೆ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಅನ್ನೋದರ ಸಂಪೂರ್ಣ ಮಾಹಿತಿಯನ್ನು ತಿಳಿಸುತ್ತೇವೆ ನೋಡಿ. ಉದ್ಯೋಗದ ನಿರೀಕ್ಷೆಯಲ್ಲಿರುವಂತ ಯುವಕ ಯುವತಿಯರಿಗೆ ಇದನ್ನು ಶೇರ್ ಮಾಡಿಕೊಳ್ಳಿ.

ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸುವಂತ ಅಭ್ಯರ್ಥಿಗಳು ಕನಿಷ್ಠ ೨೦ ವರ್ಷದಿಂದ ೨೫ ವರ್ಷದವರಾಗಿರಬೇಕು.ಸಿಬ್ಬಂದಿ ನೇಮಕ ಆಯೋಗ(ಎಸ್‌ಎಸ್‌ಸಿ) ದೆಹಲಿ ಪೊಲೀಸ್, ಸಿಎಪಿಎಫ್ ಮತ್ತು ಸಿಐಎಸ್‌ಎಫ್​ನ ಸಬ್ ಇನ್ಸ್‌ಪೆಕ್ಟರ್ (ಎಸ್‌ಐ) ಮತ್ತು ಸಹಾಯಕ ಸಬ್ ಇನ್ಸ್‌ಪೆಕ್ಟರ್ (ಎಎಸ್‌ಐ) ಹುದ್ದೆಗಳ ನೇಮಕಾತಿ ಪ್ರಕಟಣೆ ಹೊರಡಿಸಿದೆ.

ಈ ಉದ್ಯೋಗ ಭರ್ತಿಯ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದ್ದು, ಆಸಕ್ತರು ಅಕ್ಟೋಬರ್ 16 ರಕ್ಕಿಂತ ಮೊದಲು ಎಸ್‌ಎಸ್‌ಸಿ ಅಧಿಕೃತ ವೆಬ್‌ಸೈಟ್ ssc.nic.in ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಈ ಹುದ್ದೆಗಳ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.

ಯಾವ ಹುದ್ದೆಗಳ ಭರ್ತಿ:CAPFs ಮತ್ತು ದೆಹಲಿ ಪೊಲೀಸ್​ನ ಸಬ್ ಇನ್ಸ್‌ಪೆಕ್ಟರ್ (ಎಸ್‌ಐ) ಮತ್ತು ಸಿಐಎಸ್‌ಎಫ್‌ನಲ್ಲಿ ಸಹಾಯಕ ಸಬ್ ಇನ್ಸ್‌ಪೆಕ್ಟರ್ (ಎಎಸ್‌ಐ) ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ಪರೀಕ್ಷಾ ದಿನಾಂಕ:ಸಿಬಿಟಿ (ಪೇಪರ್ -1): ಪರೀಕ್ಷೆಯ ದಿನಾಂಕ – 11 ಡಿಸೆಂಬರ್ 2019 ರಿಂದ 13 ಡಿಸೆಂಬರ್ 2019 ಸಿಬಿಟಿ (ಪೇಪರ್ -2): ದಿನಾಂಕ ಇನ್ನೂ ನಿಗದಿಪಡಿಸಲಾಗಿಲ್ಲ. ಅರ್ಜಿ ಶುಲ್ಕ100 ರೂ.ಮಹಿಳೆಯರು, ಎಸ್‌ಸಿ, ಎಸ್‌ಟಿ ಮತ್ತು ಮಾಜಿ ಸೈನಿಕರಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

ವಯೋಮಿತಿ:ಅರ್ಜಿ ಸಲ್ಲಿಸುವ ಅಭ್ಯರ್ಥಿಯು 20 ರಿಂದ 25 ವರ್ಷಗಳ ಒಳಗಿರಬೇಕು. ಇನ್ನು ವಯೋಮಿತಿ ವಿನಾಯಿತಿ ಆಯಾ ಹುದ್ದೆಗಳಿಗೆ ಸಂಬಂಧಿಸಿದಂತೆ ನೀಡಲಾಗುತ್ತದೆ. ಈ ಹುದ್ದೆಗೆ ಅರ್ಜಿ ಸಲ್ಲಿಸುವವರು ಯಾವುದಾದರೂ ಮಾನ್ಯತೆ ಪಡೆದ ಸಂಸ್ಥೆಯಿಂದ ಪದವಿ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಹುದ್ದೆಗಳಿಗೆ ಆಯ್ಕೆ ವಿಧಾನ: ಅರ್ಹ ಅಭ್ಯರ್ಥಿಗಳನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ. ಆನ್‌ಲೈನ್​ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 16 ಅಕ್ಟೋಬರ್ 2019. ಆನ್‌ಲೈನ್​ನಲ್ಲಿ ಶುಲ್ಕವನ್ನು ಪಾವತಿಸುವ ಕೊನೆಯ ದಿನಾಂಕ – 18 ಅಕ್ಟೋಬರ್ 2019.

ಹೆಚ್ಚಿನ ಮಾಹಿತಿ: ಈ ಹುದ್ದೆಗಳ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಸಿಬ್ಬಂದಿ ನೇಮಕ ಆಯೋಗ(ಎಸ್‌ಎಸ್‌ಸಿ)ದ ಅಧಿಕೃತ ವೆಬ್‌ಸೈಟ್ ssc.nic.in ಗೆ ಭೇಟಿ ನೀಡಬಹುದು.

LEAVE A REPLY

Please enter your comment!
Please enter your name here