ಕೇಂದ್ರ ಸರ್ಕಾರ ಸಾರ್ವಜನಿಕರ ಅನುಕೂಲತೆಗಾಗಿ ಈ ಹೊಸ ಯೋಜನೆಯನ್ನು ರೂಪಿಸಲು ಸಜ್ಜಾಗಿದೆ, ಹೌದು ಆಧಾರ್, ಪಾಸ್ ಪೋರ್ಟ್ , ಡ್ರೈವಿಂಗ್ ಲೈಸನ್ಸ್ ಮತ್ತು ಬ್ಯಾಂಕ್ ಅಕೌಂಟ್ ಮುಂತಾದ ಹಲವು ಮುಖ್ಯ ದಾಖಲೆಗಳಿಗಾಗಿ ಒಂದೇ ಗುರುತಿನ ಚೀಟಿಯನ್ನು ಮಾಡಲು ಯೋಜನೆ ಹಾಕಿಕೊಂಡಿದೆ.

ಅಲ್ ಇನ್ ಒನ್ ಕಾರ್ಡ್ ಎಂಬುದಾಗಿ ಹೇಳಬಹುದು, ಈ ಒಂದು ಕಾರ್ಡ್ನಲ್ಲಿ ಹಲವು ಉಪಯೋಗಗಳನ್ನು ಪಡೆಯಬಹುದಾಗಿದೆ ಆಧಾರ್, ಪಾಸ್ ಪೋರ್ಟ್ , ಬ್ಯಾಂಕ್ ಅಕೌಂಟ್, ವಾಹನ ಚಾಲನಾ ಪರವಾನಗಿ, ಮತದಾರರ ಗುರುತಿನ ಚೀಟಿ ಇತ್ಯಾದಿಯಂಥ ವಿವಿಧ ಸೌಲಭ್ಯಗಳನ್ನು ಕೇವಲ ಒಂದೇ ಒಂದು ಕಾರ್ಡ್‍ನಲ್ಲಿ ನಾವು ಹೊಂದಲು ಸಾಧ್ಯ. ಈ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುವುದು ಎಂದು ಗೃಹ ಸಚಿವರು ಹೇಳಿದ್ಧಾರೆ.

ಅಷ್ಟೇ ಅಲ್ಲದೆ ಮತ್ತೊಂದು ಹೊಸ ಆಲೋಚನೆಗೂ ಚಾಲನೆ ನೀಡಿರುವ ಅವರು 2021ರ ಜನಗಣತಿ ದತ್ತಾಂಶವನ್ನು ಮೊಬೈಲ್ ಆ್ಯಪ್ ಮೂಲಕ ಸಂಗ್ರಹಿಲಾಗುವುದು ಎಂದು ತಿಳಿಸಿದ್ದಾರೆ. ದೇಶದ ನಾಗರಿಕರ ಅನುಕೂಲಕ್ಕಾಗಿ ಹೊಸ ವ್ಯವಸ್ಥೆಗಳನ್ನು ಜಾರಿಗೊಳಿಸುವ ಅಗತ್ಯವಿದೆ.

LEAVE A REPLY

Please enter your comment!
Please enter your name here