ಎಂಜಿನಿಯರ್‌ ಸೇರಿದಂತೆ ಹಲವು ಸ್ಪೆಷಲಿಸ್ಟ್‌ ಅಧಿಕಾರಿ ಹುದ್ದೆಗಳಿಗೆ ಭಾರತೀಯ ಸ್ಟೇಟ್‌ ಬ್ಯಾಂಕ್‌(ಎಸ್‌ಬಿಐ) ಅರ್ಹ ಅಭ್ಯರ್ಥಿಗಳಿಂದ ಶುಕ್ರವಾರ ಅರ್ಜಿ ಆಹ್ವಾನಿಸಿದೆ. ಒಟ್ಟು 35 ವಿಭಾಗಗಳಲ್ಲಿ 477 ಸ್ಥಾನಗಳಿಗೆ ಪ್ರಕಟಣೆ ಹೊರಡಿಸಿದೆ. ಎಸ್‌ಬಿಐ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ‘ಸ್ಪೆಷಲಿಸ್ಟ್ ಕೇಡರ್‌ ಆಫೀಸರ್‌‘ ಸ್ಥಾನಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಿದ್ದು, ಪರೀಕ್ಷೆಯ ಮೂಲಕ ಅರ್ಹರ ಆಯ್ಕೆ ನಡೆಸಲಿದೆ. ಸೆಪ್ಟೆಂಬರ್‌ 6ರಿಂದ 25ರ ವರೆಗೂ ಆನ್‌ಲೈನ್‌ ಅರ್ಜಿ ಸಲ್ಲಿಸಲು ಅವಕಾಶವಿದೆ. ಅಕ್ಟೋಬರ್‌ 20ರಂದು ಆನ್‌ಲೈನ್‌ ಪರೀಕ್ಷೆ ನಿಗದಿಯಾಗಿದೆ.

ಒಬ್ಬ ಅಭ್ಯರ್ಥಿ ಒಂದು ಹುದ್ದೆಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಡೆವೆಲಪರ್‌, ಸಿಸ್ಟಮ್‌ ಅಡ್ಮಿನಿಸ್ಟ್ರೇಟರ್‌, ನೆಟ್‌ವರ್ಕ್‌ ಎಂಜಿನಿಯರ್‌, ಐಟಿ ಸೆಕ್ಯುರಿಟಿ ಎಕ್ಸ್‌ಪರ್ಟ್‌,..ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಆನ್‌ಲೈನ್‌ ಪರೀಕ್ಷೆ ಹಾಗೂ ಸಂದರ್ಶನ ಪ್ರಕ್ರಿಯೆ ಮೂಲಕ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ. ಬಹುತೇಕ ಹುದ್ದೆಗಳಿಗೆ ಎಂಜಿನಿಯರಿಂಗ್‌ ಪದವಿ, ಎಂಎಸ್ಸಿ ಅಥವಾ ಎಂಸಿಎ ಪಡೆದಿರುವ ಹಾಗೂ ನಿಗದಿತ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿರುವ ಅನುಭವ ಅರ್ಹತೆ ಕೇಳಲಾಗಿದೆ. ಹುದ್ದೆಗಳಿಗೆ ಅನುಗುಣವಾಗಿ ವಿದ್ಯಾರ್ಹತೆ ಹಾಗೂ ಅನುಭವ ಕೇಳಲಾಗಿದ್ದು, ಪ್ರಕಟಣೆಯಲ್ಲಿ ಪ್ರತ್ಯೇಕ ವಿವರ ನೀಡಲಾಗಿದೆ.

ಮ್ಯಾನೇಜ್‌ಮೆಂಟ್‌ ಗ್ರೇಡ್‌ಗೆ ತಕ್ಕಂತೆ ವೇತನ ಕನಿಷ್ಠ ₹23,700 ರಿಂದ 50,030
ಪಾವತಿಸಬೇಕಾದ ಶುಲ್ಕ: ಸಾಮಾನ್ಯ/ಒಬಿಸಿ ಅಭ್ಯರ್ಥಿಗಳು– ₹750 , ಎಸ್‌ಸಿ/ಎಸ್‌ಟಿ/ ಅಂಗವಿಕಲ ಅಭ್ಯರ್ಥಿಗಳು– ₹125

ವಯೋಮಿತಿ: ಹುದ್ದೆಗಳಿಗೆ ಅನುಗುಣವಾಗಿ ಗರಿಷ್ಠ ಮಿತಿ 30–40 ವರ್ಷ
ಹೆಚ್ಚಿನ ಮಾಹಿತಿಗಾಗಿ: https://www.sbi.co.in/careers/ ಅಥವಾ https://bank.sbi/careers/ ವೆಬ್‌ಸೈಟ್‌ ಮೂಲಕ ಆನ್‌ಲೈನ್‌ ಅರ್ಜಿ ಸಲ್ಲಿಕೆಗೆ ಅವಕಾಶವಿದೆ.

LEAVE A REPLY

Please enter your comment!
Please enter your name here